ನಮ್ಮ ನಡಿಗೆ ಮತದಾರರ ಮನೆಯಡೆಗೆ ಅಭಿಯಾನಕ್ಕೆ ಚಾಲನೆ

ತಾಲೂಕಿನ ಶಿರಹಟ್ಟಿ ಬಿ.ಕೆ ಗ್ರಾಮದಲ್ಲಿ ಮುಖಂಡರು ವಿದ್ಯುತ್ ಸಹಕಾರಿ ಸಂಘದ ಚುನಾವಣೆ ನಿಮಿತ್ಯ ಮತದಾರರ ಮನೆ ಮನೆಗೆ ತೆರಳಿ ಮತ ಜಾಗೃತಿ ಅಭಿಯಾನ ನಡೆಸುತ್ತಿರುವರು. ಉದಯ ಬ್ಯಾಳಿ, ಆನಂದ ದಪ್ಪಾಧೂಳಿ, ರಾಮಣ್ಣಾ ಗೋಟೂರೆ, ಸಂಜು ಹತ್ತರವಾಟ, ಸೈಯದ್ ಅಮ್ಮಣಗಿ ಇತರರಿದ್ದರು.

ಹುಕ್ಕೇರಿ : ತಾಲೂಕಿನ ಶಿರಹಟ್ಟಿ ಬಿ.ಕೆ ಗ್ರಾಮದಲ್ಲಿ ಮುಖಂಡರು ವಿದ್ಯುತ್ ಸಹಕಾರಿ ಸಂಘದ ಚುನಾವಣೆ ನಿಮಿತ್ಯ ಮತದಾರರ ಮನೆ ಮನೆಗೆ ತೆರಳಿ ಕತ್ತಿ ಕುಟುಂಬ ನೇತೃತ್ವ ವಹಿಸಿದ ಪೆನಲ್‌ಗೆ ಮತ ನೀಡುವಂತೆ ವಿನಂತಿಸಿದರು.

        ಬುಧವಾರದಂದು ಗ್ರಾಮದ ಮುಖಂಡರು ಮನೆ ಮನೆಗೆ ತೆರಳಿ ಸೆಪ್ಟಂಬರ 28 ರಂದು ನಡೆಯಲಿರುವ ತಾಲೂಕಿನ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಮಾಜಿ ಸಂಸದ ರಮೇಶ ಕತ್ತಿ, ಶಾಸಕ ನಿಖಿಲ ಕತ್ತಿ ಅವರ ನೇತೃತ್ವದ ಪೆನೆಲ್ ಸ್ಪರ್ಧಿಸಲಿದೆ ಎಂದ ಅವರು ಕಳೆದ 3 ದಶಕಗಳಿಂದ ಕತ್ತಿ ಕುಟುಂಬದ ಮಾರ್ಗದರ್ಶನದಲ್ಲಿ ವಿದ್ಯುತ್ ಸಹಕಾರಿ ಸಂಘದ ಆಡಳಿತ ನಡೆಯುತ್ತಾ ಬಂದಿದೆ. ಬೇರೆ ತಾಲೂಕಿಗೆ ಹೋಲಿಸಿದರೆ ನಮ್ಮ ತಾಲೂಕಿನ ವಿದ್ಯುತ್ ಸಂಪರ್ಕ ಮತ್ತು ಟಿಸಿಗಳ ಅಳವಡಿಕೆ ಸಮಸ್ಯೆ ಆಗಿಲ್ಲ. ಗ್ರಾಹಕರಿಗೆ ಮತ್ತು ಸದಸ್ಯರಿಗೆ ಹೊರೆಯಾಗದಂತೆ ಆಡಳಿತ ನಡೆಸುತ್ತಿದ್ದಾರೆ.

    ಆದರೆ ಇದೀಗ 2 ತಿಂಗಳ ಹಿಂದೆ ಇವರಿಂದ ಅವಿರೋಧ ಆಯ್ಕೆಯಾದ ಕೆಲ ನಿರ್ದೇಶಕರು ಅವಿಶ್ವಾಸ ಗೊತ್ತುವಳಿ ತಂದು ಆಡಳಿತ ಚುಕ್ಕಾಣಿ ಬೇರೆಯವರು ನಡೆಸುವಂತೆ ಮಾಡಿದ್ದಾರೆ. ಅದಕ್ಕಾಗಿ ಈ ಬರುವ ಚುನಾವಣೆಯಲ್ಲಿ ಅಂತಹ ಹಿತಶತ್ರುಗಳಿಗೆ ತಕ್ಕ ಪಾಠ ಕಲಿಸುವಂತೆ ಮನವಿಸಿದರು. ಚುನಾವಣೆ ನಿಗದಿ ಆಗಿ ಪೆನೆಲ್ ರಚಿಸಿದ ಬಳಿಕ ಮತ್ತೊಮ್ಮೆ ಮನೆ ಮನೆಗೆ ಬಂದು ಸ್ಪರ್ಧಿಸಿದವರ ಹೆಸರು ಚಿಹ್ನೆ ತಿಳಿಸುವುದಾಗಿ ಹೇಳಿದರು.

   ಮುಖಂಡರಾದ ಉದಯ ಬ್ಯಾಳಿ, ಆನಂದ ದಪ್ಪಾಧೂಳಿ, ರಾಮಣ್ಣಾ ಗೋಟೂರೆ, ಸಂಜು ಹತ್ತರವಾಟ, ಸೈಯದ್ ಅಮ್ಮಣಗಿ, ಯಲ್ಲಪ್ಪಾ ಢಪರಿ, ತುಕಾರಾಮ ಹಾಲಟ್ಟಿ, ಅಲಿಸಾಬ ಅಮ್ಮಣಗಿ, ದುಂಡಪ್ಪಾ ಹುಂಜಿ, ಗುಲಾಬಸಾಬ ಅಮ್ಮಣಗಿ, ವಿಠ್ಠಲ ಹೊಸಮನಿ, ವಾಸೆಪ್ಪಾ ಹಾಲಟ್ಟಿ ಮತ್ತಿತರರಿದ್ದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept