ಕೊಟಬಾಗಿ ಏತ ನೀರಾವರಿ ಯೋಜನೆಯ ಪ್ರಸಕ್ತ ಮುಂಗಾರು ಹಂಗಾಮಿಗೆ ನೀರು ಹರಿಸುವ ಕಾರ್ಯಕ್ರಮಕ್ಕೆ ಶಾಸಕ ನಿಖಿಲ ಕತ್ತಿ ಚಾಲನೆ ನೀಡಿದರು. ಸತ್ತೆಪ್ಪಾ ನಾಯಿಕ, ಗುರುರಾಜ ಕುಲಕರ್ಣಿ, ಶೀತಲ ಬ್ಯಾಳಿ, ರಾಮಣ್ಣಾ ಗೋಟೂರೆ, ಪಿ.ಡಿ.ಚೌಗಲಾ ಇತರರಿದ್ದರು.
ಹುಕ್ಕೇರಿ : ತಾಲೂಕಿನ ಹುಲ್ಲೋಳಿ ಗ್ರಾಮದ ಬಳಿ ಇರುವ ಕೊಟಬಾಗಿ ಏತ ನೀರಾವರಿ ಯೋಜನೆಯಿಂದ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕಾಲುವೆಗೆ ನೀರು ಹರಿಸುವ ಪೂಜಾ ಕಾರ್ಯಕ್ರಮವನ್ನು ಶಾಸಕ ನಿಖಿಲ ಕತ್ತಿ ನೆರವೇರಿಸಿದರು.
ಶುಕ್ರವಾರದಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ನಿಖಿಲ ಕತ್ತಿ ಅವರು ಕೊಟಬಾಗಿ ಏತ ನೀರಾವರಿ ಯೋಜನೆಯ ಕೊನೆ ಹಂತದ ರೈತರ ಜಮೀನಿಗೆ ನೀರು ತಲುಪಿದಾಗ ಮಾತ್ರ ಯೋಜನೆ ಯಶಸ್ವಿಯಾಗುತ್ತದೆ.ಕಾರಣ ಕೊನೆ ಹಂತದ ರೈತರ ಜಮೀನುಗಳಿಗೆ ನೀರು ತಲುಪಲು ರೈತರು ಸಹಕರಿಸಬೇಕು ಎಂದರು.ಯೋಜನೆ ಪ್ರಾರಂಭವಾದಾಗಿನಿಂದ ಅಂದರೆ 18 ವರ್ಷಗಳಿಂದ ಹುಕ್ಕೇರಿ ತಾಲೂಕಿನ 12ಗ್ರಾಮಗಳು ಹಾಗೂ ಚಿಕ್ಕೋಡಿ ತಾಲೂಕಿನ 9 ಗ್ರಾಮಗಳ ರೈತರು ನೀರು ಬಳಕೆದಾರರ ಸಂಘ ರಚಿಸಿಕೊಳ್ಳುವಂತೆ ತಿಳಿಸುತ್ತಿದ್ದೇವೆ.ಆದರೆ ಹುಲ್ಲೋಳಿ ಗ್ರಾಮ ಹೊರತು ಪಡಿಸಿ ಇನ್ಯಾವ ಗೃಅಮಗಳ ರೈತರು ಸಂಘ ರಚಿಸಿಕೊಂಡಿಲ್ಲವೆಂದರು.

ಏತ ನೀರಾವರಿ ಯೋಜನೆಗೆ ಸಮಸ್ಯೆಯಾದಾಗ ಈ ಸಂಘಗಳ ಅವಶ್ಯಕತೆ ಬರುತ್ತದೆ.ಜತೆಗೆ ನೀರು ಹರಿಸಲು ಸಹ ಸಹಕಾರಿಯಾಗುತ್ತದೆ.ಆದ್ದರಿಂದ ಆದಷ್ಟು ಬೇಗ ಸಂಘ ರಚಿಸಿಕೊಳ್ಳುವಂತೆ ವಿನಂತಿಸಿದರು.
ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಸಾದಿಕ್ ಮುಲ್ಲಾ ಮಾತನಾಡಿ ಈ ಯೋಜನೆಯಿಂದ ಹುಕ್ಕೇರಿ ಮತ್ತು ಚಿಕ್ಕೋಡಿ ತಾಲೂಕಿನ 8100 ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಡುತ್ತದೆ. ಇದರ ಜತೆಗೆ ಯೋಜನಾ ವ್ಯಾಪ್ತಿಯ 8 ಕೆರೆಗಳು ಮತ್ತು 94 ಬಾಂಧಾರಗಳಿಗೆ ನೀರು ತುಂಬಿಸಲಾಗುತ್ತ್ತಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ ಎಂದರು.
ಮುಖಂಡರಾದ ಸತ್ತೆಪ್ಪಾ ನಾಯಿಕ, ಗುರುರಾಜ ಕುಲಕರ್ಣಿ, ಶೀತಲ ಬ್ಯಾಳಿ, ರಾಮಣ್ಣಾ ಗೋಟೂರೆ, ಪಿ.ಡಿ.ಚೌಗಲಾ, ಮಾಯಪ್ಪಾ ಹೊಳೆಪ್ಪಗೋಳ, ಕೆ.ಜಿ.ಪಾಟೀಲ, ಅಣ್ಣಪ್ಪಾ ಬ್ಯಾಳಿ, ಸಂಜೀವ ನಾಯಿಕ, ಆನಂದ ದಪ್ಪಾಧೂಳಿ, ಚನ್ನಪ್ಪಾ ಗಜಬರ, ಬಸವರಾಜ ಗಂಗಣ್ಣವರ ಮತ್ತಿತರರಿದ್ದರು. ಎ.ಇ.ಇ ಸುಭಾಸ ಮಹಿಮಗೋಳ ಸ್ವಾಗತಿಸಿ, ನಿರೂಪಿಸಿದರು.





