ವಿದ್ಯುತ್ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಜಯಗೌಡ ಪಾಟೀಲ ಅವಿರೋಧವಾಗಿ ಆಯ್ಕೆ

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನೂತನ ಅಧ್ಯಕ್ಷರಾದ ಜಯಗೌಡ ಪಾಟೀಲ ಅವರನ್ನು ಸತ್ಕರಿಸಿದ ದೃಶ್ಯ.

ಹುಕ್ಕೇರಿ: ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಜಯಗೌಡ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾದರು.

   ಇತ್ತೀಚೆಗೆ ಅವಿಶ್ವಾಸ ಗೊತ್ತುವಳಿ ಮೂಲಕ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರದಂದು ನಡೆದ ಚುನಾವಣೆಯಲ್ಲಿ ಜಯಗೌಡ ಪಾಟೀಲ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರೆಂದು ಚುನಾವಣಾಧಿಕಾರಿ ಶಶಿಕಲಾ ಪಾಟೀಲ ಘೋಷಿಸಿದರು.

       ನಂತರ ಮಾತನಾಡಿದ ನೂತನ ಅಧ್ಯಕ್ಷ ಜಯಗೌಡ ಪಾಟೀಲ ಅವರು ಸಂಘದ ಚುನಾವಣೆಗೆ ಇನ್ನೂ ಮೂರು ತಿಂಗಳಲ್ಲಿ ಜರುಗಲಿದ್ದು, ಅಷ್ಟರೊಳಗಾಗಿ ತೋಟಪಟ್ಟಿ ನಿವಾಸಿಗಳಿಗೆ ನಿರಂತರ ವಿದ್ಯುತ್ ಸರಬರಾಜು ಯೋಜನೆ ಜಾರಿಗೊಳಿಸಲು ಪ್ರಯತ್ನಿಸುತ್ತೇನೆ.ಇದರ ಜತೆಗೆ ತಾಲೂಕಿನಲ್ಲಿ ಸಂಘದ 10 ಉಪ ಕೇಂದ್ರಗಳಿದ್ದು, ನಮ್ಮ ನಿರ್ದೇಶಕ ಮಂಡಳಿ ಅಲ್ಲಿಗೆ ತೆರಳಿ ಕೇಂದ್ರ ವ್ಯಾಪ್ತಿಯ ಗ್ರಾಹಕರ ಕುಂದುಕೊರತೆ ಆಲಿಸಿ ಅಲ್ಲಿಯೇ ಪರಿಹರಿಸುವ ಸಂಕಲ್ಪ ಮಾಡಿರುವುದಾಗಿ ತಿಳಿಸಿದರು.

      ಈ ಅವಿರೋಧ ಆಯ್ಕೆಗೆ ಮಾರ್ಗದರ್ಶನ ಮಾಡಿದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಜಾರಕಿಹೊಳಿ ಸಹೋದರರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು, ಸಂಘದ ನಿರ್ದೇಶಕರು ನೂತನ ಅಧ್ಯಕ್ಷರನ್ನು ಸನ್ಮಾನಿಸಿದರು. ನಂತರ ಜಯಗೌಡ ಪಾಟೀಲ ಅವರು ಸಹಕಾರಿ ಹಿರಿಯ ಧುರೀಣ ಕರಗಾಂವ ಗ್ರಾಮದ ಡಿ.ಟಿ.ಪಾಟೀಲ ಅವರ ಮನೆಗೆ ತೆರಳಿ ಆಶೀರ್ವಾದ ಪಡೆದರು.

ಕರಗಾಂವ ಗ್ರಾಮದ ಡಿ.ಟಿ.ಪಾಟೀಲ ಅವರ ಮನೆಯಲ್ಲಿ ಆಶೀರ್ವಾದ ಪಡೆದ ವಿದ್ಯುತ್ ಸಹಕಾರಿ ಸಂಘದ ನೂತನ ಅಧ್ಯಕ್ಷರಾದ ಜಯಗೌಡ ಪಾಟೀಲ ಮತ್ತು ನಿರ್ದೇಶಕರು.

ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ, ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ಅಮರ ನಲವಡೆ, ಪವನ ಪಾಟೀಲ, ಬಸವರಾಜ ಕೋಳಿ, ಸುರೇಶ ಹುಣಶ್ಯಾಳಿ, ಚಿದಾನಂದ ಕಿಲ್ಲೇದಾರ, ಮಹಾವೀರ ಬಾಗಿ, ಮೋಹನ ಕೋಠಿವಾಲೆ, ಭೀಮಗೌಡ ಪಾಟೀಲ, ಗಿರೀಶ ಪಾಟೀಲ, ಜಿನಗೌಡ ಇಮಗೌಡನವರ ಮತ್ತಿತರರಿದ್ದರು.

      ಹಾಜರಾದವರು: ಸಂಘದ 15 ಸದಸ್ಯರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಜಯಗೌಡ ಪಾಟೀಲ, ಉಪಾಧ್ಯಕ್ಷ ವಿಷ್ಣು ರೇಡೆಕರ, ನಿರ್ದೇಶಕರಾದ ಶಶಿರಾಜ ಪಾಟೀಲ, ಬಸಗೌಡ ಮಗೆಣ್ಣವರ, ಕುನಾಲ ಪಾಟೀಲ, ರವೀಂದ್ರ ಹಿಡಕಲ್ಲ, ಜೋಮಲಿಂಗ ಪಟೋಳಿ, ರವೀಂದ್ರ ಅಸೋದೆ, ಈರಪ್ಪಾ ಬಂಜಿರಾಮ ಹಾಜರಿದ್ದರು.

  ಗೈರಾದವರು: ನಿಕಟಪೂರ್ವ ಅಧ್ಯಕ್ಷ ಕಲಗೌಡ ಪಾಟೀಲ, ನಿರ್ದೇಶಕರಾದ ಪೃಥ್ವಿ ಕತ್ತಿ, ಕೆ.ಕೆ.ಬೆಣಚಿನಮರಡಿ, ಸಂಗೀತಾ ದಪ್ಪಾಧೂಳಿ, ಶಿವಲೀಲಾ ಮಣಗುತ್ತಿ

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept