ಕಂದಾಯ ಇಲಾಖೆಯಿಂದ ಗ್ರಾಮ ಆಡಳಿತಾಧಿಕಾರಿಗಳಿಗೆ ಕೊಡ ಮಾಡಿದ ಲ್ಯಾಪಟ್ಯಾಪಗಳನ್ನು ಶಾಸಕ ನಿಖಿಲ ಕತ್ತಿ ವಿತರಿಸಿದರು. ತಹಸೀಲ್ದಾರ ಮಂಜುಳಾ ನಾಯಕ, ಎನ.ಆರ್.ಪಾಟಿಲ, ಸಿ.ಎ.ಪಾಟೀಲ, ಉಮೇಶ ನಾಗರಾಳಿ, ಸಂತೋಷ ನಾಯ್ಕರ ಇತರರಿದ್ದರು.
ಹುಕ್ಕೇರಿ: ರೈತರ ಬೆಳೆ ಸಮೀಕ್ಷೆ ಸೇರಿದಂತೆ ಜನರ ಸರಕಾರಿ ದಾಖಲೆಗಳನ್ನು ಅಚ್ಚುಕಟ್ಟಾಗಿ ನಮೂದಿಸಲು ರಾಜ್ಯ ಸರಕಾರ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪಟ್ಯಾಪ್ ನೀಡಿದೆ. ಇವುಗಳನ್ನು ಸರಿಯಾಗಿ ಬಳಸಿ ದಾಖಲೆಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕೆಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಸೋಮವಾರದಂದು ಸ್ಥಳೀಯ ಪಿಕಾರ್ಡ ಬ್ಯಾಂಕ ಆವರಣದಲ್ಲಿ ಕಂದಾಯ ಇಲಾಖೆಯಿಂದ ಕೊಡ ಮಾಡಿದ ಲ್ಯಾಪಟ್ಯಾಪ ವಿತರಿಸಿ ಮಾತನಾಡಿದರು.ಕೇಂದ್ರ ಮತ್ತು ರಾಜ್ಯ ಸರಕಾರ ಎಲ್ಲ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.ಇದರ ಜತೆಗೆ ಜನರಿಗೆ ತೀವೃ ಗತಿಯಲ್ಲಿ ಸರಕಾರಿ ದಾಖಲೆಗಳನ್ನು ಒದಗಿಸಲು ಅನುಕೂಲ ಆಗುವಂತೆ ಆಧುನೀಕತೆ ರೂಪಿಸಿದೆ.ಅದಕ್ಕಾಗಿ ಸರಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕಂಪ್ಯೂಟರ್ ಕಲಿಕೆ ಅಗತ್ಯವೆಂದರು. ನಂತರ ಹುಕ್ಕೇರಿ ಮತಕ್ಷೇತ್ರದ 10 ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪಟ್ಯಾಪ ವಿತರಿಸಿದರು.
ತಹಸೀಲ್ದಾರ ಮಂಜುಳಾ ನಾಯಕ ಮಾತನಾಡಿ ಹುಕ್ಕೇರಿ ಮತಕ್ಷೇತ್ರಕ್ಕೆ 10 ಯಮಕನಮರ್ಡಿ ಮತಕ್ಷೇತ್ರಕ್ಕೆ 7 ಲ್ಯಾಪಟ್ಯಾಪ ವಿತರಿಸಿದ್ದು ಇನ್ನೂಳಿದ ಗ್ರಾಮ ಆಡಳಿತಾಧಿಕಾರಿಗಳಿಗೂ ಲ್ಯಾಪಟ್ಯಾಪ ಸರಕಾರದಿಂದ ಬಂದ ಬಳಿಕ ವಿತರಿಸುತ್ತೇವೆ ಎಂದರು.

ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು ಮತ್ತು ಕಂದಾಯ ಇಲಾಖೆಯಿಂದ ಶಾಸಕ ನಿಖಿಲ ಕತ್ತಿ ಅವರನ್ನು ಸನ್ಮಾನಿಸಿದರು.
ಮುಖಂಡರಾದ ಸತ್ತೆಪ್ಪಾ ನಾಯಿಕ, ಗುರುರಾಜ ಕುಲಕರ್ಣಿ, ರಾಚಯ್ಯಾ ಹಿರೇಮಠ, ಮಹಾನಿಂಗ ಸನದಿ, ರಾಜು ಮುನ್ನೋಳಿ, ಸುಚಿತ ಪಾಟೀಲ, ಬಸಗೌಡ ಪಾಟೀಲ, ಉಪ-ತಹಸೀಲ್ದಾರರಾದ ಎನ್.ಆರ್. ಪಾಟೀಲ, ಸಿ.ಎ.ಪಾಟೀಲ, ಗ್ರಾಮ ಆಡಳಿತಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಎನ್.ಆರ್.ಪಾಟೀಲ, ತಾಲೂಕಾಧ್ಯಕ್ಷ ಉಮೇಶ ನಾಗರಾಳಿ, ಸಂತೋಷ ನಾಯ್ಕರ, ಮಲ್ಲಿಕಾರ್ಜುನ ಸಾರಾಪೂರೆ, ಎ.ಎಂ.ಕಮತನೂರ, ಬಿ.ಕೆ.ಚೌಗಲಾ, ಕುಮಾರ ರಾಠೋಡ, ಆರ್.ಆರ್.ಹುಡೇದ, ಬಿ.ಕೆ.ಯಲಿಗಾರ, ಎಸ್.ಬಿ.ಘಸ್ತಿ, ಜಿ.ಎಂ.ಕಿತ್ತೂರ ಮತ್ತಿತರರಿದ್ದರು.





