ವಿಶ್ವ ರತ್ನತ್ರಯ ವೇದಿಕೆಯ ನಕ್ಷತ್ರ ಸಾಹಿತ್ಯ ಶೈಕ್ಷಣೀಕ ಮತ್ತು ಸಾಂಸ್ಕೃತಿಕ ಟೃಸ್ಟ ಸಂಸ್ಥಾಪಕ ಡಾ.ಷಣ್ಮುಖಸ್ವಾಮಿ ಕಡ್ಡಿಪುಡಿ ಅವರಿಂದ ಗೀತಾ ಶೇಠಿ ಅವರು ಪ್ರಶಸ್ತಿ ಸ್ವೀಕರಿಸಿದರು.
ಹುಕ್ಕೇರಿ: ಪಟ್ಟಣ ಜಯನಗರ ನಿವಾಸಿ, ತಾಲೂಕಿನ ಎಲಿಮುನ್ನೋಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಗೀತಾ ಅಶೋಕ ಶೇಠಿ ಅವರಿಗೆ ರಾಷ್ಟ್ರಮಟ್ಟದ ಸಾಹಿತ್ಯ ನವಚೇತನ ಪ್ರಶಸ್ತಿ ದೊರಕಿದೆ.
ಇತ್ತೀಚೆಗೆ ಬಳ್ಳಾರಿ ಜಿಲ್ಲೆ ಸಂಡೂರ ತಾಲೂಕಿನ ತಾಳೂರ ವಿಶ್ವ ರತ್ನತ್ರಯರ ವೇದಿಕೆಯ ನಕ್ಷತ್ರ ಸಾಹಿತ್ಯ ಶೈಕ್ಷಣೀಕ ಮತ್ತು ಸಾಂಸ್ಕೃತಿಕ ಟೃಸ್ಟನವರು ಈ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಸಂಸ್ಥೆಯ ಸಂಸ್ಥಾಪಕ ಡಾ.ಷಣ್ಮುಖಸ್ವಾಮಿ ಕಡ್ಡಿಪುಡಿ ಅವರು ಪ್ರಶಸ್ತಿ ನೀಡಿದರು.





