ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಶೈಕ್ಷಣಿಕ ಚಿಕ್ಕೋಡಿ ಜಿಲ್ಲಾ ಘಟಕ ಆಗ್ರಹ

ಹುಕ್ಕೇರಿ: ಪಟ್ಟಣದ ಮಾದ್ಯಮಿಕ ಶಾಲಾ ನೌಕರರ ಸಂಘದ ಸಭಾಭವನದಲ್ಲಿ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎಸ್.ಐ ಸಂಬಾಳ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಶಾಲಾ ನೌಕರರ ಸಂಘದ ಶೈಕ್ಷಣಿಕ ಚಿಕ್ಕೋಡಿ ಜಿಲ್ಲಾ ಘಟಕದ ಸಭೆ ನಡೆಸಿ ಶಿಕ್ಷಕರು ವಿವಿಧ ಬೇಡಿಕೆಗಳನ್ನು ಸರ್ಕಾರ ಶೀಘ್ರದಲ್ಲಿ ಈಡೇರಿಸಬೇಕೆಂದು ಎಂದು ಅಗ್ರಹಿಸಿದರು,

ಶನಿವಾರ ಸಂಜೆ ನಡೆದ ಸಭೆಯಲ್ಲಿ ಏಪ್ರಿಲ್-2006 ನಂತರ ನೇಮಕವಾದ ನೌಕರರಿಗೆ ಎನ್‌ಪಿಎಸ್ ರದ್ದು ಪಡಿಸಿ ಓಪಿಎಸ್ ಜಾರಿಗೆ ತರಬೇಕು. ಪ್ರೌಢ ಶಾಲೆಗಳಲ್ಲಿ ದೈಹಿಕ ಹಾಗೂ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿ ವಿದ್ಯಾರ್ಥಿಗಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡಲು ಅನುವು ಮಾಡಿಕೂಡಬೇಕು.

೭ನೇ ವೇತನ ಆಯೋಗದಲ್ಲಿ 2022ರಿಂದ 2024ರವರೆಗೆ ನಿವೃತ್ತಿ ಆದವರಿಗೆ ಅನ್ಯಾಯವಾಗಿದ್ದು. ಇದನ್ನು ಸರಿಪಡಿಸಬೇಕು. ಏಳನೇ ವೇತನ ಆಯೋಗದ 70 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಶೇ.10 ರಷ್ಟು ವೇತನ ಹೆಚ್ಚುವರಿ ನಿವೃತ್ತಿ ವೇತನದ ಆದೇಶ ಹೊರಡಿಸಬೇಕು. ಕಾಲ್ಪನಿಕ ವೇತನ ಹೊರಟ್ಟಿ ವರದಿ ವೇತನ ಜಾರಿಗೊಳಿಸಬೇಕು. 1995ರ ನಂತರ ಪ್ರಾರಂಭವಾದ ಅನುದಾನ ರಹಿತ ಶಾಲೆಗಳಿಗೆ ಅನುದಾನವನ್ನು ಮಂಜೂರ ಮಾಡಲೇಬೇಕು. ಖಾಸಗಿ ಶಾಲೆಗಳ ಸಿಬ್ಬಂದಿಯವರಿಗೆ ಆರೋಗ್ಯ ಸಂಜೀವನಿ ಯೋಜನೆಯನ್ನು ಅನುಷ್ಠಾನಗೊಳಿಸುವ ಶಿಕ್ಷಕರು ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಚರ್ಚಿಸಿದರು.

ಚಿಕ್ಕೋಡಿ ಜಿಲ್ಲಾಧ್ಯಕ್ಷ ಎಸ್.ಎಸ್. ಅಂಗಡಿ, ಕಾರ್ಯದರ್ಶಿ ಮಹಾದೇವ ಬರಗಾಲಿ, ತಾಲೂಕಾ ಅಧ್ಯಕ್ಷ ಎಸ್.ಸಿ. ಮಾನಗಾಂವಿ, ಸದಸ್ಯರಾದ ಎಸ್.ಜೆ. ಕುಪ್ಪಾನಟ್ಟಿ, ಬಿ.ಕೆ. ಯರಗಟ್ಟಿ, ಡಿ.ಎ. ಮಾನೆ, ಸಿ.ಎಮ್ ದರಬಾರೆ. ಎಮ್ ಎಸ್. ಹಂದಿಗು0ದ, ಜಿ.ಎಚ್ ಮುತಾಲಿಕ, ಬಿಎಸ್ ನಾಗನೂರಿ, ಬಿ.ಬಿ. ಮಾಳಾಜ, ಜೆ,ಎನ್ ಪಾಟೀಲ, ಆರ್.ಎ. ಬಡಿಗೇರ, ಬಿ.ಡಿ. ಗಿರಿಗೌಡ, ಎಮ್,ಜಿ.ಚಿಕ್ಕಮಠ ಮತ್ತಿತರರಿದ್ದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept