ಒಬಿಸಿ ಸಮಾಜದ ಬಿಜೆಪಿ ಜಿಲ್ಲಾ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಬೇಕು: ಶಾಸಕ ನಿಖಿಲ ಕತ್ತಿ

ಪಟ್ಟಣದ ಪಿಕಾರ್ಡ ಬ್ಯಾಂಕ್ ದಲ್ಲಿ ಬಿಜೆಪಿ ಓಬಿಸಿ ಮೋರ್ಚಾ ಸಮಾವೇಶ ಪೂರ್ವಭಾವಿ ಸಭೆಯಲ್ಲಿ ಪಕ್ಷದ ಸಂಸ್ಥಾಪಕರ ಭಾವಚಿತ್ರಕ್ಕೆ ಶಾಸಕ ನಿಖಿಲ ಕತ್ತಿ ಪೂಜೆ ಸಲ್ಲಿಸಿದರು. ಸತ್ತೆಪ್ಪಾ ನಾಯಿಕ, ಗುರುರಾಜ ಕುಲಕರ್ಣಿ, ಕಲಗೌಡ ಪಾಟಿಲ, ಮಹಾನಿಂಗ ಸನದಿ, ಶೀತಲ ಬ್ಯಾಳಿ, ಇತರರಿದ್ದರು.

ಹುಕ್ಕೇರಿ: ಬೆಳಗಾವಿಯಲ್ಲಿ ಕೇಂದ್ರ ಸರಕಾರದ ಕೃಷಿ ಸಚಿವರಾದ ಶಿವರಾಜಸಿಂಗ್ ಚೌಹಾಣ ಅವರ ಉಪಸ್ಥಿತಿಯಲ್ಲ್ಲಿ ಬಿಜೆಪಿ ಒಬಿಸಿ ಮೋರ್ಚಾ ಬೃಹತ್ ಸಮಾವೇಶ ಆಯೋಜಿಸಲಾಗುತ್ತಿದೆ.ಕಾರಣ ಒಬಿಸಿ ಸಮುದಾಯದ ಎಲ್ಲ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾರಂಭ ಯಶಸ್ವಿಗೊಳಿಸಬೇಕೆಂದು ಶಾಸಕ ನಿಖಿಲ ಕತ್ತಿ ಹೇಳಿದರು.

    ಸೋಮವಾರದಂದು ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ಬೆಳಗಾವಿ ಸಮಾವೇಶದ ಚರ್ಚೆಗಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರಕಾರ ನಡೆಸಲಿರುವ ಜಾತಿ ಮತ್ತು ಜನಗಣತಿ ಕುರಿತು ಜನ ಜಾಗೃತಿ ಮೂಡಿಸಲು ಈ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು. ಗಣತಿ ಸಮಯದಲ್ಲಿ ಪ್ರತಿಯೊಬ್ಬರು ಎಲ್ಲ ಸಮುದಾಯಗಳ ಜನರ ಅಂಕಿ ಸಂಖ್ಯೆ ಮತ್ತು ಜಾತಿಗಳನ್ನು ಸರಿಯಾಗಿ ನಮೂದಿಸುವಂತೆ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶ್ರಮಿಸಬೇಕೆಂದು ತಿಳಿಸಿದರು.

  ಇದೇ ಸಂದರ್ಭದಲ್ಲಿ ನಿಖಿಲ ಕತ್ತಿ ಅವರನ್ನು ಬಿಜೆಪಿ ಒಬಿಸಿ ಮೋರ್ಚಾ ಘಟಕದಿಂದ ಸನ್ಮಾನಿಸಿದರು.

       ನಂತರ ನಡೆದ ಜನಸಂಪರ್ಕ ಸಭೆಯಲ್ಲಿ ಹುಕ್ಕೇರಿ ಪಟ್ಟಣದ ಬೈಪಾಸ್‌ದಲ್ಲಿ ಇರುವ ಬೀದಿ ದೀಪಗಳು ಬೇಳಗುತ್ತಿಲ್ಲವೆಂದು ಕೆಲವರು ದೂರಿತ್ತರು.ತಕ್ಷಣ ಪುರಸಭೆ ಅಧಿಕಾರಿಗಳನ್ನು ಕರೆಸಿ ಅವುಗಳನ್ನು ಸರಿಪಡಿಸುವಂತೆ ಆದೇಶಿಸಿದರು.

   ಬಿಜೆಪಿ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷ ಸತ್ತೆಪ್ಪಾ ನಾಯಿಕ, ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಭೀಮರಾಜ ಒಡೆಯರ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶೀತಲ ಬ್ಯಾಳಿ, ರಾಹುಲ ಪಾಟೀಲ, ಮುಖಂಡರಾದ ಗುರುರಾಜ ಕುಲಕರ್ಣಿ, ಕಲಗೌಡ ಪಾಟಿಲ, ಮಹಾನಿಂಗ ಸನದಿ, ಸಂಗಮೇಶ ದುರದುಂಡಿ, ರಾಜು ಮುನ್ನೋಳಿ, ಅಪ್ಪುಸ್ ತುಬಚಿ, ಅಪ್ಪಣ್ಣಾ ಖಾತೇದಾರ ಮತ್ತಿತರರಿದ್ದರು. ಬಿಜೆಪಿ ವಕ್ತಾರ ಗೋಪಾಲ ಚನಗೌಡರ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಪಾಟೀಲ ವಂದಿಸಿದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept