ಹುಕ್ಕೇರಿ: ತಾಲೂಕಿನ ಹಿಡಕಲ್ ಡ್ಯಾಂ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ರಾಜೇಂದ್ರ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಬಸಗೌಡಾ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾದರು.
ಗುರುವಾರದಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಯ್ಕೆ ಪ್ರಕ್ರಿಯೆಯಲ್ಲಿ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಆರ್.ಪಿ.ಪಾಟೀಲ ಘೋಷಿಸಿದರು.
ಅಧ್ಯಕ್ಷ ರಾಜೇಂದ್ರ ಪಾಟೀಲ ಮಾತನಾಡಿ ಎಂದಿನಂತೆ ಕಬ್ಬು ಬೆಳೆಗಾರರು ಮತ್ತು ರೈತರು ತಾವು ಬೆಳೆದ ಕಬ್ಬನ್ನು ಕಾರಖಾನೆಗೆ ಕಳುಹಿಸಿ ಸಹಕರಿಸಬೇಕೆಂದು ವಿನಂತಿಸಿದರು. ಕಳೆದ ವರ್ಷ 5 ವರ್ಷ ಅವಧಿಯಲ್ಲಿ ತಾವು ನೀಡಿದ ಸಹಕಾರ ಹೀಗೆ ಮುಂದುವರೆಯಲು ತಮ್ಮ ಸಲಹೆ ಸಹಕಾರ ಅವಶ್ಯ ನೀಡಬೇಕೆಂದು ಹೇಳಿದರು. ಅವಿರೋಧ ಆಯ್ಕೆಗೆ ಸಹಕರಿಸಿದ ಮುಖಂಡರಿಗೆ ಮತ್ತು ನಿರ್ದೇಶಕ ಮಂಡಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಆಯ್ಕೆ ನಂತರ ನಿರ್ದೇಶಕರು, ಸಿಬ್ಬಂದಿ ಮತ್ತು ಜನರಿಂದ ಸತ್ಕಾರ ಸ್ವೀಕರಿಸಿದರು.
ಉಪಾದ್ಯಕ್ಷ ಬಸಗೌಡ ಪಾಟೀಲ, ನಿರ್ದೇಶಕರಾದ ಶಶಿಕಾಂತ ಅಕ್ಕಪ್ಪ ನಾಯಿಕ, ಸಿದ್ದಲಿಂಗಪ್ಪ ಗುರುಸಿದ್ದಪ್ಪ ಸಿದ್ಧಗೌಡರ, ಸುನೀಲ ಅಣ್ಣಾಸಾಹೇಬ ಪರ್ವತರಾವ, ಸಂಪತ್ ಶಂಕರರಾವ ಬಾಂದುರ್ಗೆ, ರಾಜೇಶ್ವರಿ ಮುರುಘಂದ್ರ ಕವಟಗಿಮಠ, ಸಂಗೀತ ಬಸಲಿಂಗ ಕರಗುಪ್ಪಿ, ಅರ್ಜುನನಾಯ್ಕ ಯಲ್ಲನಾಯ್ಕ ಪಾಟೀಲ, ಸುಭಾಷ ಮಲಗೌಡ ಪಾಟೀಲ, ಮಹಾದೇವ ಜಾನು ಶಿಂಗೆ, ಶಿವಪ್ಪ ಕಲ್ಲಪ್ಪ ಘಸ್ತಿ, ಶಾಂತಾದೇವಿ ಗಂಗಾಧರಸ್ವಾಮಿ ತವಗಮಠ, ಅಮರನಾಥ ಕಲ್ಲಪ್ಪ ಮಹಾಜನಶೆಟ್ಟಿ, ವ್ಯವಸ್ಥಾಪಕ ನಿದೇರ್ಶಕ ಎಸ್.ಎಸ್.ಪೂಜೇರಿ, ಕಾರ್ಯಾಲಯ ಅಧೀಕ್ಷಕ ಅಣ್ಣಪ್ಪಾ ಅಂಕತಂಗೇರಹಾಳ, ಮುಖಂಡರಾದ ಬಂಡು ಹತನೂರೆ, ಕುನಾಲ ಪಾಟೀಲ, ಪವನ ಪಾಟೀಲ ಇತರರಿದ್ದರು.





