ಪಟ್ಟಣದ ಪಿಕಾರ್ಡ ಬ್ಯಾಂಕ ಆವರಣದಲ್ಲಿ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮಹಾವೀರ ನಿಲಜಗಿ, ಸತ್ತೆಪ್ಪಾ ನಾಯಿಕ, ಗುರು ಕುಲಕರ್ಣಿ, ಪ್ರಜ್ವಲ ನಿಲಜಗಿ, ರಾಜು ಮುನ್ನೋಳಿ, ಶಿವು ಪಾಟೀಲ ಇತರರಿದ್ದರು.
ಹುಕ್ಕೇರಿ: ನಮ್ಮ ದೇಶವನ್ನು ಪ್ರೀತಿಸಿ, ಗೌರವಿಸುವ ಎಲ್ಲರೂ ಹಿಂದೂಗಳು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಗಿ ಶತಮಾನ ಪೂರೈಸಿದ ಹಿನ್ನೆಲೆ ಭಾರತ ದೇಶದ ಸಂಸ್ಕೃತಿ, ಆಚಾರ ವಿಚಾರಗಳನ್ನು ಯುವ ಜನಾಂಗಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ವಿಶಾಲ ಹಿಂದೂ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.
ಮಂಗಳವಾರದಂದು ಪಟ್ಟಣದ ಪಿಕಾರ್ಡ ಬ್ಯಾಂಕ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದೇ ತಿಂಗಳು ದಿ.31 ರಂದು ಮಧ್ಯಾಹ್ನ 2 ಗಂಟೆಗೆ ಹಳ್ಳದಕೇರಿಯ ಅಡವಿಸಿದ್ದೇಶ್ವರ ಮಠದಿಂದ ದೇಸಿ ಸಂಸ್ಕೃತಿ ಬಿಂಬಿಸುವ ವಾದ್ಯ ಮತ್ತು ಕಲಾ ತಂಡಗಳು, ರಾಷ್ಟ್ರೀಯ ನಾಯಕರ ವೇಷದಾರಿಗಳು ಒಳಗೊಂಡ ಭವ್ಯ ಮೆರವಣಿಗೆ ಪಾರಂಭವಾಗಲಿದೆ. ಹಳೇ ಬಸ್ ನಿಲ್ದಾಣ, ಹೊಸ ಬಲ್ದಾಣದ ಮೂಲಕ ವಿಶ್ವರಾಜ ಭವನಕ್ಕೆ ತೆರಳುವ ಮೆರವಣಿಗೆ ನಂತರ ಅಲ್ಲಿ ಸಮಾವೇಶ ಜರುಗಲಿದೆ ಎಂದರು.
ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ನಿರ್ದೇಶಕ ಸತ್ತೆಪ್ಪಾ ನಾಯಿಕ ಅವರು ಮಾತನಾಡಿ ಸಮಾವೇಶದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ವಿರಕ್ತಮಠದ ಶಿವಬಸವ ಮಹಾಸ್ವಾಮೀಗಳು, ಕ್ಯಾರಗುಡ್ಡ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಶ್ರೀಗಳು ಹಾಗೂ ಯುವ ಭಾರತ ರಾಜ್ಯ ಸಂಯೋಜಕರಾದ ಶರಣೇಗೌಡರು ಪಾಲ್ಗೊಳ್ಳಲಿದ್ದಾರೆ. ಸಮಾವೇಶಕ್ಕೆ ಹುಕ್ಕೇರಿ ಪಟ್ಟಣ ಮತ್ತು ಸುತ್ತಮುತ್ತಲಿನ 13 ಳ್ಳಿಗಳಿಂದ ಅಂದಾಜು ಐದು ಸಾವಿರ ಜನ ಆಗಮಿಸುವ ನಿರೀಕ್ಷೆ ಎಂದರು. ಕಾರಣ ಹೆಚ್ಚಿನ ಪ್ರಮಾಣದಲ್ಲಿ ಜನರು ಆಗಮಿಸಿ ಸಮಾವೇಶ ಯಶಸ್ವಿಗೊಳಿಸಲು ವಿನಂತಿಸಿದರು.

ವಕೀಲ ಹರೀಶ ದೊಡ್ಡಲಿಂಗನವರ, ಮುಖಂಡರಾದ ಪ್ರಜ್ವಲ ನಿಲಜಗಿ, ಗುರು ಕುಲಕರ್ಣಿ, ರಾಜು ಮುನ್ನೋಳಿ, ಕುಮಾರ ಜುಠಾಳೆ, ಬಸವರಾಜ ಗಂಗನ್ನವರ, ಚನ್ನಪ್ಪಾ ಗಜಬರ, ಮಹಾಂತೇಶ ತಳವಾರ, ಶಿವು ಪಾಟೀಲ, ವಿಕ್ರಮ ಪವಾರ, ಚೇತನ ಶಿವಮೊಗ್ಗಿಮಠ ಮತ್ತಿತರರಿದ್ದರು.





