ಹುಕ್ಕೇರಿ : ಆದರ್ಶ ಶಿಕ್ಷಕ ಎಂಬ ಪ್ರಶಸ್ತಿ ನೀಡುವುದು ಸರಿಯೇ ಸರಿ. ಆದರೆ ನನ್ನ ದೃಷ್ಟಿಯೊಳಗೆ ಶಿಕ್ಷಕ ಎನ್ನುವುದೇ ಒಂದು ಆದರ್ಶ. ಶಿಕ್ಷಕರೆಲ್ಲರೂ ಕೂಡ ಆದರ್ಶರೇ, ನನ್ನ ಬದುಕಿನಲ್ಲಿ ನಾನು ಒಬ್ಬ ಶಿಕ್ಷಕನಿಂದ ನನ್ನ ಬದುಕು ಬಂಗಾರವಾಗಿಲ್ಲ, ಎಲ್ಲ ಶಿಕ್ಷಕರು ನನ್ನನ್ನು ತಿದ್ದಿ ತೀಡಿ ಬೆಳೆಸಿದ್ದರಿಂದಲೇ ಇವತ್ತು ನಾನು ಒಬ್ಬ ಸ್ವಾಮೀಜಿಯಾಗಿ ಹೊರ ಹೊಮ್ಮಿದ್ದೇನೆ. ಇನ್ನೂ ಬೇರೆ ಬೇರೆ ಅಧಿಕಾರದಲ್ಲಿ ಇರುವವರು ಎಲ್ಲರೂ ಶಿಕ್ಷಕರ ಮಾರ್ಗದರ್ಶನದಿಂದೇ ಮುಂದೆ ಬಂದಿದ್ದಾರೆ ಎಂದು ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಪಟ್ಟಣದ ಶ್ರೀ ಗುರುಶಾಂತೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಎಲ್ಲಾ ಶಿಕ್ಷಕರನ್ನು ಗೌರವಿಸಿ ಮಾತನಾಡಿದರು. ಶಿಕ್ಷಕರನ್ನು ಗೌರವಿಸುವ ಪ್ರವೃತ್ತಿ ಎಲ್ಲರಿಗೂ ಬರಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಎಸ್ ಬಿ ಜಿನರಾಳಿ, ಎಸ್ ಎಸ್ ಹಿರೇಮಠ, ಸಂತೋಷ್ ಚೌಗಲಾ, ಸಂಜೀವ ಪಾಟೀಲ, ನಿಶಾಂತ್ ಸ್ವಾಮಿ, ಅಮರ ಮಾಳಗೆ, ಗಣೇಶ ಶಿಂದೆ, ರಜನೀಶ ಬಾಗೇವಾಡಿ, ಶಿವಲೀಲಾ ಹಿರೇಮಠ, ಬಿ ಎನ್ ಮಗದುಮ್, ದೀಪಾ ಕಮತೆ, ಎಲ್ ಎಮ್ ಹಿರೇಕೊಡಿ, ಸುಧಾ ಮ್ಯಾಗಡಿ, ಜಯಶ್ರೀ ಬೆಳವಿ, ಅನಿತಾ ಉಪ್ಪಾರ, ಲಕ್ಷ್ಮೀ ಬಾಬಣ್ಣವರ, ತೇಜಸ್ವಿನಿ ಮಗದುಮ್ಮ, ಗೀತಾ ಕಂಬಾರ, ಪದ್ಮಾ ಕುಲ್ಕರ್ಣಿ, ವೀಣಾ ಹುಂಡೇಕರ, ಸವಿತಾ ಬೋಗುಣಿ, ಅರ್ಚನಾ ಸಿದ್ದಣ್ಣವರ ಸೇರಿದಂತೆ ಎಲ್ಲ ಶಿಕ್ಷಕರನ್ನು ಶ್ರೀಗಳು ಗೌರವಿಸಿ ಸನ್ಮಾನಿಸಿದರು.
ನಂತರ ಮಕ್ಕಳಿಂದ ಶಿಕ್ಷಕರಿಗೆ ಗೌರವ ಸಮರ್ಪಣೆ ಜರುಗಿತು. ಎಲ್ಲ ಶಿಕ್ಷಕರಿಗೆ ಸ್ಪರ್ಧೆಗಳನ್ನು ಏರ್ಪಡಿಸುವುದರ ಮುಖಾಂತರ ಒಂದು ದಿನ ಮಕ್ಕಳು ಹೇಳಿದ ಹಾಗೇ ಶಿಕ್ಷಕರು ಕೇಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





