ತಾಲೂಕಿನ ಗುಡಸ ಗ್ರಾಮದ ಪಿಕೆಪಿಎಸ್‌ನಿಂದ ನಡೆದ ಉಚಿತ ಕಣ್ಣಿನ ಹಾಗೂ ಆರೋಗ್ಯ ತಪಾಸಣೆ ಶಿಬಿರವನ್ನು ಅಧ್ಯಕ್ಷ ಮಲ್ಲಿಕಾರ್ಜುನ ನರಸನ್ನವರ ಉದ್ಘಾಟಿಸಿದರು. ಉಪಾಧ್ಯಕ್ಷರು ಮತ್ತು ನಿರ್ದೇಶಕರಿದ್ದರು.
ಹುಕ್ಕೇರಿ: ತಾಲೂಕಿನ ಗುಡಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಉಚಿತ ಕಣ್ಣಿನ ಹಾಗೂ ಆರೋಗ್ಯ ತಪಾಸಣೆ ಶಿಬಿರದ ಕಾರ್ಯಕ್ರಮ ಜರುಗಿತು.
ತಾಲೂಕಿನ ಗುಡಸ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಸಿದ್ಧಾರ್ಥ ನೇತ್ರಾಲಯ ಬೆಳಗಾವಿ ಮತ್ತು ವಿಜಯಾ ಆರ್ಥೋ ಆಂಡ್ ಟ್ರೌಮಾ ಸೆಂಟರ್ ಬೆಳಗಾವಿ ಸಂಯುಕ್ತಾಶ್ರಯದಲ್ಲಿ ಗುರುವಾರದಂದು ನಡೆದ ಶಿಬಿರವನ್ನು ಪಿಕೆಪಿಎಸ್ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ನರಸನ್ನವರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಜೀವನದಲ್ಲಿ ಅತ್ಯಮೂಲ್ಯವಾದ ಕಣ್ಣು ಎಲ್ಲ ರೀತಿಯ ಆರೋಗ್ಯ ಸಂರಕ್ಷಿತವಾಗಿರಬೇಕಾದರೆ ಕಾಲ ಕಾಲಕ್ಕೆ ತಪಾಸಣೆ ಹಾಗೂ ಕಾಳಜಿ ಬಹುಮುಖ್ಯ ಪ್ರಪಂಚ ನೋಡಿ ಆನಂದಿಸಬೇಕಾದರೆ ಕಣ್ಣನ್ನು ಜೋಪಾನವಾಗಿ ಇಟ್ಟುಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು. ಉಚಿತ ಕಣ್ಣಿನ ತಪಾಸಣೆ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು.

ಡಾ. ಸಿದ್ಧಾರ್ಥ ಪೂಜಾರಿ, ಡಾ.ಮನೋಜಕುಮಾರ, ಸಂಘದ ಉಪಾಧ್ಯಕ್ಷ ರಾಯಪ್ಪಾ ಡೂಗ ನಿರ್ದೇಶಕ ಸದಾನಂದ ಹಿರೇಮಠ, ಶಿದಗೌಡ ಪಾಟೀಲ ಬಾಬು ಜಾರಕಿಹೊಳಿ, ಅಲಗೌಡ ದೊಡದನ್ನವರ, ಅಡಿವೆಪ್ಪಾ ಮಗದುಮ್ಮ, ಮಹಾದೇವಿ ಪಾಟೀಲ, ಮೀನಾಕ್ಷಿ ಚಂದರಗಿ, ರಾಜು ಬಂಗಾರಿ, ಮಲಗೌಡ ದೇಸಾಯಿ ಮತ್ತು ಗುಡಸ, ಕೊಟಬಾಗಿ, ಶಿರಢಾಣ ಮತ್ತು ಝಾಂಗಟಿಹಾಳ ಗ್ರಾಮಸ್ಥರಿದ್ದರು. ಮುಖ್ಯ ಕಾರ್ಯ ನಿರ್ವಾಹಕ ಎಸ್.ಎಸ್.ಮಲ್ಲಾಪೂರೆ ಸ್ವಾಗತಿಸಿ, ನಿರೂಪಿಸಿದರು.
ಪಿಕೆಪಿಎಸ್‌ನಿಂದ ಮುಂಗಾರು ಬಿತ್ತನೆ ಸೋಯಾಬಿನ್ ಬೀಜಗಳನ್ನು ಅಧ್ಯಕ್ಷ, ಉಪಾಧ್ಯಕ್ಷ ಮತ್ತು ನಿರ್ದೇಶಕರು ಬುಧವಾರದಂದು ರೈತರಿಗೆ ವಿತರಿಸಿದರು.





