ತಾಲೂಕಿನ ಶಿರಗಾಂವ ಗ್ರಾಮದ ಬೀರೇಶ್ವರ ದೇವಸ್ಥಾನದ ಬಳಿ ನಡೆಯುತ್ತಿರುವ ೧೦ ಲಕ್ಷ ರೂ ವೆಚ್ಚದ ಸಿಸಿ ಬೆಡ್ ಕಾಮಗಾರಿಗೆ ಮಾಜಿ ಸಂಸದ ರಮೇಶ ಕತ್ತಿ ಭೂಮಿ ಪೂಜೆ ನೆರವೇರಿಸಿದರು. ರಾಜು ಬಿರಾದಾರಪಾಟಿಲ, ಮಲ್ಲಿಕಾರ್ಜುನ ತೇರಣಿ, ಬಸವರಾಜ ಘಟಿಗೆನ್ನವರ, ಮಹಾಂತೇಶ ಮುನ್ನೋಳಿ, ಆನಂದ ಸೋಮಣ್ಣವರ ಇತರರಿದ್ದರು.
ಹುಕ್ಕೇರಿ: ಗ್ರಾಮದ ಎಲ್ಲ ಸಮುದಾಯಗಳು ತಮ್ಮ ತಮ್ಮ ಸಮಾಜದ ಚಿಂತನ ಮಂಥನ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕಾರಿಯಾಗಬೇಕೆಂದು ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಇದೀಗ ಅವುಗಳಲ್ಲಿ ಕುಳಿತುಕೊಳ್ಳಲು ಸಿಸಿ ಬೆಡ್ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಸೋಮವಾರದಂದು ತಾಲೂಕಿನ ಶಿರಗಾಂವ ಗ್ರಾಮದ ಬೀರೇಶ್ವರ ದೇವಸ್ಥಾನದ ಬಳಿ ಜಿ.ಪಂ ಇಂಜನೀಯರಿಂಗ ವಿಭಾಗದಿಂದ ನಡೆಯುತ್ತಿರುವ 10 ಲಕ್ಷ ರೂ ವೆಚ್ಚದ ಸಿಸಿ ಬೆಡ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಆಯಾ ಸಮಾಜ ಬಾಂಧವರು ಸಮುದಾಯದ ಎಲ್ಲ ಕಾರ್ಯಕ್ರಮಗಳನ್ನು ಉಚಿತವಾಗಿ ಹಮ್ಮಿಕೊಳ್ಳುವುದರ ಜತೆಗೆ ಇವುಗಳ ಸ್ವಚ್ಚತೆಗೆ ಆದ್ಯತೆ ನೀಡಬೇಕೆಂದರು.ಯುವ ಜನಾಂಗ ಇಂತಹ ಸಮುದಾಯ ಭವನಗಳನ್ನು ದುರುಪಯೋಗ ಮಾಡಿಕೊಳ್ಳದಂತೆ ಹಿರಿಯರು ಗಮನಿಸುವಂತೆ ಸಲಹೆಯಿತ್ತರು.
ಇದೇ ಸಂದರ್ಭದಲ್ಲಿ ರಮೇಶ ಕತ್ತಿ ಅವರನ್ನು ಗ್ರಾಮಸ್ಥರ ಪರವಾಗಿ ಮುಖಂಡರು ಸನ್ಮಾನಿಸಿದರು.

ಮುಖಂಡರಾದ ಮಲ್ಲಿಕಾರ್ಜುನ ತೇರಣಿ, ಈರಣ್ಣಾ ಹೂಗಾರ, ಬಸವರಾಜ ಘಟಿಗೆನ್ನವರ, ಸುರೇಶ ತೇರಣಿ, ಆನಂದ ಸೋಮಣ್ಣವರ, ಮಹಾಂತೇಶ ಮುನ್ನೋಳಿ, ಗ್ರಾ.ಪಂ ಸದಸ್ಯರಾದ ರಮೇಶ ಅಲಗೂರೆ, ಶ್ರೀಧರ ಚೌಗಲಾ, ಕೆಂಪಣ್ಣಾ ಚೌಗಲಾ, ಶಿವಾನಂದ ಖಾನಾಪೂರೆ, ಪಿಕೆಪಿಎಸ್ ಅಧ್ಯಕ್ಷ ರಾಜು ಬಿರಾದಾರಪಾಟೀಲ, ಆನಂದ ಸೋಮಣ್ಣವರ, ನಿರ್ದೇಶಕರಾದ ಶಂಕರ ಮಗದುಮ್ಮ, ಶಂಕರ ಹಿಟ್ಟನಿ, ಗಣಪತಿ ತೇರಣಿ, ರವೀಂದ್ರ ತೇರಣಿ, ಈಶ್ವರ ಚೌಗಲಾ, ಭೀರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಸತಿಗೌಡ ಪಾಟೀಲ ಮತ್ತಿತರರಿದ್ದರು.





