ಸ್ಥಳೀಯ ಬಸವ ವೃತ್ತದಲ್ಲಿ ಜನಿವಾರ, ಶಿವದಾರ ಧರಿಸುವ ಸಮಾಜದವರು ರಸ್ತೆ ತಡೆ ನಡೆಸಿ, ಪ್ರತಿಭಟನಾ ಮನವಿಯನ್ನು ತಹಶೀಲ್ದಾರ ಮಂಜುಳಾ ನಾಯಿಕ ಅವರಿಗೆ ಮನವಿ ಸಲ್ಲಿಸಿದರು. ಗುರುರಾಜ ಕುಲಕರ್ಣಿ, ಸಂಜೀವ ಮುತಾಲಿಕ, ಬಾಹುಬಲಿ ನಾಗನೂರಿ, ಜಯಸಿಂಗ ಸನದಿ, ಸಿ.ಪಿ.ಪಾಟೀಲ ಇತರರಿದ್ದರು.
ಹುಕ್ಕೇರಿ: ಸಿಇಟಿ ಪರೀಕ್ಷೆ ಸಮಯದಲ್ಲಿ ಜನವಾರಕ್ಕೆ ಅಪಚಾರ ಎಸಗಿರುವ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ತಾಲೂಕಾ ಬ್ರಾಹ್ಮಣ, ಜೈನ, ವಿಶ್ವಕರ್ಮ ಮತ್ತು ಮರಾಠಾ, ರಜಪೂತ ಸೇರಿದಂತೆ ಜನಿವಾರ, ಶಿವದಾರ ಧರಿಸುವ ಸಮಾಜದವರಿಂದ ರಸ್ತೆ ತಡೆ, ಪ್ರತಿಭಟನೆ ನಡೆಸಿ ತಹಶೀಲ್ದಾರ ಮಂಜುಳಾ ನಾಯಿಕ ಅವರಿಗೆ ಮನವಿ ಸಲ್ಲಿಸಿದರು.
ಸ್ಥಳೀಯ ಬಸವ ವೃತ್ತದ ಆವರಣದಲ್ಲಿ ವಿವಿಧ ಸಮಾಜಗಳ ಜನ ಮಾನವ ಸರಪಳಿ ಮೂಲಕ ಕೆಲ ಕಾಲ ರಸ್ತೆ ತಡೆ ನಡೆಸಿದರು.ನಂತರ ಮುಖಂಡರ ಗುರುರಾಜ ಕುಲಕರ್ಣಿ, ಅರವಿಂದ ದೇಶಪಾಂಡೆ, ಸಿ.ಪಿ.ಪಾಟೀಲ, ಪ್ರಸಾದ ಖಾಡೆ, ಮತ್ತಿತರರು ಮಾತನಾಡಿ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಕೆಇಎ ನಿದೇರ್ಶನ ಇಲ್ಲದಿದ್ದರೂ ಕೂಡಾ ಅಧಿಕಾರಿಗಳು ದುರುದ್ದೇಶಪೂರ್ವಕವಾಗಿ ವಿದ್ಯಾರ್ಥಿಗಳಿಂದ ಜಿನಿವಾರ ತೆಗೆಸಿದ್ದಾರೆ. ಅಲ್ಲದೆ ಇದಕ್ಕೆ ಒಪ್ಪದ ವಿದ್ಯಾರ್ಥಿಗಳ ಜಿನಿವಾರವನ್ನು ಕತ್ತರಿಸುವ ಮೂಲಕ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದ್ದು, ಇಂತಹ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಹೇಳಿದರು.
ಮುಖಂಡರಾದ ಪ್ರಕಾಶ ಮುತಾಲಿಕ, ಬಾಹುಬಲಿ ನಾಗನೂರಿ, ಜಯಸಿಂಗ ಸನದಿ, ಸಂಜೀವ ಮುತಾಲಿಕ, ಶ್ರೀಧರ ಕುಲಕರ್ಣಿ, ವಿವೇಕ ಪುರಾಣಿಕ, ರವೀಂದ್ರ ಬಡಿಗೇರ, ಚೇತನ ಕುಲಕರ್ಣಿ, ಶ್ರಿಕಾಂತ ಬಡಿಗೇರ, ಸಂಜು ಬಸ್ತವಾಡ, ಗಿರೀಶ ಕುಲಕರ್ಣಿ, ಶಂಕರ ಕಾಗಿನಕರ, ಸಂತೋಷ ಸಾವಳಗಿ, ಮತ್ತಿತರರಿದ್ದರು.
ಹುಕ್ಕೇರಿಯಲ್ಲಿ ಸಂಭವಿಸಿದ ಈ ಘಟನೆ ನಿಜಕ್ಕೂ ವಿಷಾದಜನಕವಾಗಿದೆ. ಮನೆ ಸುಟ್ಟು ಭಸ್ಮವಾಗಿರುವುದು ಅವರ ಕುಟುಂಬಕ್ಕೆ ದೊಡ್ಡ ನಷ್ಟ ತಂದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಂತಹ ದುರಂತವನ್ನು ತಪ್ಪಿಸಲು ಎಚ್ಚರವಹಿಸಬೇಕು. ಜಾತ್ರಾ ಮಹೋತ್ಸವದಲ್ಲಿ ಸನ್ಮಾನಿಸಿದ್ದು ಸಮುದಾಯದ ಒಗ್ಗಟ್ಟನ್ನು ತೋರಿಸುತ್ತದೆ. ಈ ಘಟನೆಯಿಂದ ಹೇಗೆ ಪಾಠಗಳನ್ನು ಕಲಿಯಬಹುದು?