ಬಡವರ ಅನುಕೂಲಕ್ಕಾಗಿ ಹಳ್ಳದಕೇರಿಯಲ್ಲಿ ಸಾಮೂಹಿಕ ಗುಗ್ಗಳೋತ್ಸವ ಆಯೋಜನೆ: ನಿಂಗೌಡಾ ಪಾಟೀಲ

ಸ್ಥಳೀಯ ಅಡವಿಸಿದ್ದೇಶ್ವರ ಮಠದಲ್ಲಿ ಲಿಂಗಾಯತ ಸಮಾಜ ಸೇವಾ ಅಭಿವೃದ್ಧಿ ಸಂಘದವರು ನಡೆಸಿದ ಸುದ್ದಿಗೋಷ್ಠಿ. ನಿಂಗೌಡಾ ಪಾಟೀಲ, ದುಂಡಪ್ಪಾ ನಾಯಿಕ, ಶಂಕರ ಅಲಗರಾವುತ ಇತರರಿದ್ದರು.

ಹುಕ್ಕೇರಿ: ಬಡ ಮತ್ತು ಮಧ್ಯಮ ವರ್ಗದವರ ಅನುಕೂಲವಾಗುವ ನಿಟ್ಟಿನಲ್ಲಿ ಸಾಮೂಹಿಕ ಗುಗ್ಗಳೋತ್ಸವ ಪ್ರತಿ ವರ್ಷದಂತೆ ಹಮ್ಮಿಕೊಳ್ಳಲಾಗಿದೆ ಎಂದು ಪಟ್ಟಣದ ಹಳ್ಳದಕೇರಿ ಲಿಂಗಾಯತ ಸಮಾಜ ಸೇವಾ ಅಭಿವೃದ್ಧಿ ಸಂಘದ ಅಧ್ಯಕ್ಷ ನಿಂಗೌಡಾ ಪಾಟೀಲ ಹೇಳಿದರು.

ಶನಿವಾರದಂದು ಹಳ್ಳದಕೇರಿಯ ಅಡವಿಸಿದ್ದೇಶ್ವರ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದೇ ತಿಂಗಳು ರವಿವಾರ ದಿ.೨೫ ರಂದು ಬೆಳಿಗ್ಗೆ ೯ ಗಂಟೆಗೆ ಗುಗ್ಗಳೋತ್ಸವ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಪ್ರಮುಖ ಬೀದಿಗಳಲ್ಲಿ ಪುರವಂತರ ನೇತೃತ್ವದಲ್ಲಿ ಜರುಗುವ ಗುಗ್ಗಳೋತ್ಸವ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಡವಿಸಿದ್ದೇಶ್ವರ ಮಠ ತಲುಪಿ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ಶಂಕರ ಅಲಗರಾವುತ ಮಾತನಾಡಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ವಿರಕ್ತಮಠದ ಶಿವಬಸವ ಮಹಾಸ್ವಾಮೀಜಿ, ಅವಜೀಕರ ಆಶ್ರಮದ ಅಭಿನವ ಮಂಜುನಾಥ ಶ್ರೀಗಳು ಸಾನಿಧ್ಯದಲ್ಲಿ ನಡೆಯುವ ಗುಗ್ಗಳೋತ್ಸವದಲ್ಲಿ ಪಾಲ್ಗೊಳ್ಳುವವರು ಆ ದಿನ ಬೆಳಿಗ್ಗೆ 7ಗಂಟೆಗೆ ಸ್ನಾನ ಮಾಡಿ ಅಡವಿಸಿದ್ದೇಶ್ವರ ಮಠಕ್ಕೆ ಆಗಮಿಸಬೇಕು ಎಂದರು. ಗುಗ್ಗಳೋತ್ಸವಕ್ಕೆ ಹೆಸರು ನೋಂದಾಯಿಸಿಕೊಳ್ಳುವವರು ಆದಷ್ಟು ಬೇಗ ಗುಗ್ಗಳೋತ್ಸವ ಸಮಿತಿಯವರನ್ನು ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗೆ ಮೋ: 9964057702 ಅಥವಾ 9448100216 ನಂಬರ ಸಂಪರ್ಕಿಸಬೇಕೆಂದು ಹೇಳಿದರು.

ಸಂಘದ ಉಪಾಧ್ಯಕ್ಷ ದುಂಡಪ್ಪಾ ನಾಯಿಕ, ಸದಸ್ಯರಾದ , ಪಾಟೀಲ, ಮಾರುತಿ ಮಗದುಮ್ಮ, ರಾಮಗೌಡ ಪಾಟೀಲ, ಶಿವಪುತ್ರಯ್ಯಾ ಶಿವಮೊಗ್ಗಿಮಠ, ಶಿವಗೌಡ ಪಾಟೀಲ, ಅಶೋಕ ಕುಂಬಾರ ಮತ್ತಿತರರಿದ್ದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept