ಸಹಕಾರಿ ಕ್ಷೇತ್ರದ ಅಜಾತಶತ್ರು ರಮೇಶ ಕತ್ತಿ ಅವರಿಗೆ ದಿ.25ರಂದು ಸತ್ಕಾರ: ಮಹಾವೀರ ನಿಲಜಗಿ

ತಾಲೂಕಿನ ಸಹಕಾರಿ ಮುಖಂಡರಿ0ದ ಸ್ಥಳೀಯ ಪಿಕಾರ್ಡ ಬ್ಯಾಂಕಿನಲ್ಲಿ ನಡೆದ ಸುದ್ದಿಗೋಷ್ಠಿ. ಸತ್ತೆಪ್ಪಾ ನಾಯಿಕ, ರಾಚಯ್ಯಾ ಹಿರೇಮಠ, ರಾಜು ಬಿರಾದಾರಪಾಟೀಲ, ಗುರು ಕುಲಕರ್ಣಿ ಇತರರಿದ್ದರು.

ಹುಕ್ಕೇರಿ:   ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿಯವರಿಂದ ದಿ.25 ರಂದು ಬೆಳಿಗ್ಗೆ 10-30ಕ್ಕೆ ಹುಕ್ಕೇರಿಯ ವಿಶ್ವರಾಜ ಸಭಾಭವನದಲ್ಲಿ  ಮಾಜಿ  ಸಂಸದರು, ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ರಮೇಶ ಕತ್ತಿ ಅವರಿಗೆ ಸತ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.

     ಸೋಮವಾರದಂದು ಪಿಕಾರ್ಡ ಬ್ಯಾಂಕ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿಗೆ ಸತತ 9 ನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ರಮೇಶ ಕತ್ತಿ ಅವರು ದಾಖಲೆ ಬರೆದಿದ್ದಾರೆ. 42 ವರ್ಷಗಳ ಆಡಳಿತದಲ್ಲಿ 27 ವರ್ಷ ಸುದೀರ್ಘ ಅವಧಿಗೆ ಅಧ್ಯಕ್ಷರಾಗಿದ್ದ ದಾಖಲೆ ಸಹ ಇವರದ್ದಾಗಿದೆ. ಕಾರಣ ಇವರ ಸಹಕಾರಿ ಕ್ಷೇತ್ರದ ಸೇವೆ ಮತ್ತು ದಾಖಲೆ ಬರೆದ ನಿಮಿತ್ಯ ತಾಲೂಕಿನ ಎಲ್ಲ ಪಿಕೆಪಿಎಸ್‌ನ ಆಡಳಿತ ಮಂಡಳಿಯವರು ಅವರನ್ನು ಸನ್ಮಾನಿಸುವ ಸಮಾರಂಭ ಆಯೋಜಿಸಲಾಗಿದೆ ಎಂದರು.

     ಬಿಜೆಪಿ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷ ಮತ್ತು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಸತ್ತೆಪ್ಪಾ ನಾಯಿಕ ಅವರು ಮಾತನಾಡಿ ಮುಚ್ಚುವ ಭೀತಿಯಲ್ಲಿದ್ದ ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಅವಿರತವಾಗಿ ಶ್ರಮಿಸಿ ಅದನ್ನು ಉಳಿಸಿ ಬೆಳೆಸಿ ಸಾವಿರಾರು ಕೋಟಿ ಠೇವಣಿ ಸಂಗ್ರಹಿಸುವುದರ ಜತೆಗೆ ರೈತರಿಗೆ ಹೆಚ್ಚಿನ ಸಾಲ ನೀಡಿದ ಗರಿಮೆ ಅವರದ್ದಾಗಿದೆ ಎಂದರು.

      ಬಿಜೆಪಿ ಮಂಡಲ ಅಧ್ಯಕ್ಷ ರಾಚಯ್ಯಾ ಹಿರೇಮಠ, ಪಿಕಾರ್ಡ ಬ್ಯಾಂಕ್ ನಿರ್ದೇಶಕ ಗುರುರಾಜ ಕುಲಕರ್ಣಿ, ಪುರಸಭೆ ಮಾಜಿ ನಿರ್ದೇಶಕ ರಾಜು ಮುನ್ನೋಳಿ ಅವರು ಮಾತನಾಡಿ ಡಿಸಿಸಿ ಬ್ಯಾಂಕಿನಿಂದ ಪಕ್ಷ ಮತ್ತು ರಾಜಕೀಯ ರಹಿತವಾಗಿ ಎಲ್ಲ ರೈತರಿಗೂ ಸಾಲ ನೀಡಿದ ರಮೇಶ ಕತ್ತಿ ಅವರ ಆಡಳಿತ ತಾರತಮ್ಯ ರಹಿತವಾಗಿತ್ತು. ಅಂತಹ ಶ್ರೇಷ್ಟ ಸಹಕಾರಿ ನಾಯಕರನ್ನು ಗೌರವಿಸಿ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ ಆಗಿದೆ. ಇದರ ಜತೆಗೆ ಇತ್ತೀಚೆಗೆ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಇವರ ನೇತೃತ್ವದ ಸ್ವಾಭಿಮಾನಿ ಪೆನಲ್ ಅಭೂತ ಪೂರ್ವ ಗೆಲುವು ಸಾಧಿಸಿದ ಪ್ರಯುಕ್ತ ವಿದ್ಯುತ್ ಸಹಕಾರಿ ಸಂಘಡ ಆಡಳಿತ ಮಂಡಳಿಯವರನ್ನು ಸನ್ಮಾನಿಸುವ ಕಾರ್ಯ ನಡೆಯಲಿದೆ ಎಂದರು.

       ಪಕ್ಷಾತೀತವಾಗಿ ನಡೆಯುವ ಸಮಾರಂಭಕ್ಕೆ ಮಾಜಿ ಸಚಿವ ಎ.ಬಿ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದು ಶಾಸಕ ನಿಖಿಲ ಕತ್ತಿ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಟ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಮಹಾದೇವ ಜಿನರಾಳಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದುರದುಂಡಿ ಪಾಟೀಲ ಆತಿಥ್ಯ ವಹಿಸಲಿದ್ದಾರೆ.

    ಮುಖಂಡರಾದ ಶಿವಾಜಿ ಬಾರಿಗಿಡದ, ಕೆಂಪಣ್ಣಾ ದೇಸಾಯಿ, ಎ.ಕೆ.ಪಾಟೀಲ, ಅಶೋಕ ಹಿರೇಕೋಡಿ, ರಾಜು ಬಿರಾದಾರಪಾಟೀಲ, ಸಂಜು ದೇಸಾಯಿ, ಶ್ರೀಶೈಲ ಮಠಪತಿ, ಎಚ್.ಎಲ್.ಪೂಜೇರಿ, ದಯಾನಂದ ವಂಟಮೂರಿ, ಗೌಸ ಆಜಂ ನಾಯಿಕವಾಡಿ, ಬಸವರಾಜ ಗಂಗನ್ನವರ ಮತ್ತಿತರರಿದ್ದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept