ಹುಕ್ಕೇರಿ ಹೊರವಲಯದ ಬಳಿ ಇರುವ ಎಲಿಮುನ್ನೋಳಿಯ ಸೌಧರ್ಮ ಸರ್ವೋದಯ ನೀರು ಬಳಕೆದಾರರ ಸಂಘದಿಂದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿ ಸದಸ್ಯರನ್ನು ಸನ್ಮಾನಿಸಲಾಯಿತು.
ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಬಿ.ಕೆ.ಮಗೆನ್ನವರ, ನೀರು ಬಳಕೆದಾರರ ಸಂಘದ ಪದಾಧಿಕಾರಿಗಳಾದ ಜಯಪಾಲ ಚೌಗಲಾ, ಜಿನಗೌಡ ಇಮಗೌಡನವರ, ಮಲ್ಲಪ್ಪ ಗಂಧ, ಶಂಕರ ಜಕ್ಕತ್ತನವರ, ಬಸವರಾಜ ಅತ್ತಿಕೇರಿ, ಮಲ್ಲಿಕಾರ್ಜುನ ಗಣಾಚಾರಿ, ಅಮರದೀಪ ಶಾಸ್ತ್ರೀ ಇತರರಿದ್ದರು.





