ಹುಕ್ಕೇರಿ: ಸ್ಥಳೀಯ ಹಿರೇಮಠದ ದಸರಾ ಉತ್ಸವವು ಭಾವೈಕ್ಯತೆಗೆ ಹೆಸರಾಗಿದೆ. ಧಾರ್ಮಿಕ, ಸಾಹಿತ್ಯ, ಸಾಮಾಜಿಕ ಮತ್ತು ಅನ್ನ ದಾಸೋಹದೊಂದಿಗೆ ಕರುನಾಡಿನಲ್ಲಿ ಗುರುತಿಸಿಕೊಂಡ ಈ ದಸರಾ ಉತ್ಸವ ಮಾದರಿ ಧಾರ್ಮಿಕತೆಗೆ ಹೆಗ್ಗುರುತಾಗಿದೆ ಎಂದು ಎಂ.ಚಂದರಗಿ ಗುರು ಗಡದೇಶ್ವರ ಮಠದ ವೀರಭದ್ರ ಶಿವಯೋಗಿ ಶಿವಾಚಾರ್ಯರು ಹೇಳಿದರು.
ಅವರು ಸೋಮವಾರ ಹುಕ್ಕೇರಿ ಹಿರೇಮಠದ ದಸರಾ ಉತ್ಸವದ ಉದ್ಘಾಟಸಿ ಮಾತನಾಡಿದರು. ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆ ಹೆಚ್ಚಿಸಲು ಹಬ್ಬ ಹರಿದಿನಗಳು ಸಾಮರಸ್ಯದ ಬೆಸುಗೆ ಹಾಕಿವೆ ಎಂದರು. ಹುಕ್ಕೇರಿ ಹಿರೇಮಠದ ದಸರಾ ವೈಶಿಷ್ಟö್ಯವಾಗಿ ನಡೆಯುತ್ತಿದ್ದು ಈ ಬಾರಿ ೯ ದಿನ ಭಕ್ತರಿಗೆ ಹೋಳಿಗೆಯೂಟ ನೀಡಲು ಮುಂದಾಗಿರುವುದು ಮೆಚ್ಚುಗೆಯ ಸಂಗತಿ ಎಂದರು. ಇದೊಂದು ವಿಶಿಷ್ಟ, ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅವಿಸ್ಮರಣೀಯವೆಂದರು.
ಮಹಾವೀರ ಸಮೂಹ ಸಂಸ್ಥೆಗಳ ಅಧ್ಯಕ್ಷ ಮಹಾವೀರ ನಿಲಜಗಿ ಮಾತನಾಡಿ ಜನರಿಗೆ ಹೊಸದೇನಾದರೂ ಕೊಡಬೇಕು ನಮ್ಮ ಜನ ಎಲ್ಲವನ್ನು ನೋಡಬೇಕು ಎನ್ನುವ ಅಭಿಲಾಷೆಯಿಂದ ಹೋಳಿಗೆ ಊಟ ಮಾಡಿಸುವುದರ ಮೂಲಕ ಚಂದ್ರಶೇಖರ ಶಿವಾಚಾರ್ಯರು ವಿನೂತನ ಕಾರ್ಯಕ್ರಮವನ್ನು ಆಯೀಜಿಸಿರುವುದು ನಮಗೆಲ್ಲ ಅಭಿಮಾನದ ಸಂಗತಿ ಎಂದರು
ತಹಶೀಲ್ದಾರ ಬಲರಾಮ ಕಟ್ಟಿಮನಿ ದಸರಾ ಮಹೋತ್ಸವದ ಧ್ವಜಾರೋಹಣ ನೆರವೇರಿಸಿದರು. ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಸಂಪತ್ತಕುಮಾರ ಶಾಸ್ತಿçಗಳು, ದಿವಾಕರಭಟ್ಟ ಅವರು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದ ಸಹಾಯಕ ಅಭಿಯಂತರ ಬಸವರಾಜ ಹಿರೇಮಠ, ಪುರಸಭೆ ಅಧ್ಯಕ್ಷ ಇಮ್ರಾನ ಮೋಮಿನ, ಅಶೋಕ ಪಾಟೀಲ, ಸುಭಾಸ ನಾಯಿಕ. ಪರಗೌಡ ಪಾಟೀಲ. ಚೆನ್ನಪ್ಪಾ ಗಜಬರ, ಸುರೇಶ ಜಿನರಾಳೆ ಮತ್ತಿತರರಿದ್ದರು.





