ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ 164 ನಾಮಪತ್ರಗಳು ಸಲ್ಲಿಕೆ

ಹುಕ್ಕೇರಿ ಸ್ವಾಭಿಮಾನಿ ಸಹಕಾರಿ ಪೆನಲ್‌ನಿಂದ ಪ್ರಮುಖರಾದ ಲವ(ಪೃಥ್ವಿ) ಕತ್ತಿ, ವಿನಯಗೌಡ ಪಾಟೀಲ, ಕಲಗೌಡ ಪಾಟೀಲ, ಮಹಾವೀರ ನಿಲಜಗಿ, ಸುನೀಲ ಪರ್ವತರಾವ ಇತರರು ನಾಮಪತ್ರ ಸಲ್ಲಿಸಿದ ಬಳಿಕ ನೀಡಿದ ಪೋಟೊ ಪೋಸ್.

ಹುಕ್ಕೇರಿ:ತಾಲೂಕಿನ ವಿದ್ಯುತ್ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ನಾಮಪತ್ರ ಸಲ್ಲಿಕೆ ಕೊನೆ ದಿನದವರೆಗೆ ಒಟ್ಟು 164 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

Screenshot

        ಮಾಜಿ ಸಂಸದ ರಮೇಶ ಕತ್ತಿ, ಶಾಸಕ ನಿಖಿಲ ಕತ್ತಿ ಹಾಗೂ ಮಾಜಿ ಸಚಿವ ಎ.ಬಿ.ಪಾಟೀಲ ಅವರ ನೇತೃತ್ವದ ಹುಕ್ಕೇರಿ ಸ್ವಾಭಿಮಾನಿ ಸಹಕಾರಿ ಪೆನಲ್‌ನಿಂದ ಪ್ರಮುಖರಾದ ಲವ(ಪೃಥ್ವಿ) ಕತ್ತಿ, ವಿನಯಗೌಡ ಪಾಟೀಲ, ಕಲಗೌಡ ಪಾಟೀಲ, ಮಹಾವೀರ ನಿಲಜಗಿ, ಸತ್ತೆಪ್ಪಾ ನಾಯಿಕ, ಅಮರ ನೇರ್ಲಿ, ಕೆಂಪಣ್ಣಾ ದೇಸಾಯಿ, ಬಸಲಿಂಗ ಕರಗುಪ್ಪಿ, ಸುನೀಲ ಪರ್ವತರಾವ, ಗಜಾನನ ಕ್ವಳ್ಳಿ  ಮತ್ತಿತರರು ನಾಮಪತ್ರ ಸಲ್ಲಿಸಿದರು.      ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ನೇತೃತ್ವದ ಶ್ರೀ ಅಪ್ಪಣ್ಣಗೌಡ ಪಾಟೀಲ ಸಹಕಾರಿ ಪೆನೆಲ್‌ನಿಂದ ಶಶಿರಾಜ ಪಾಟೀಲ, ಶ್ರೀಕಾಂತ ಹತನೂರೆ, ಸಂಜಯ ಶಿರಕೋಳಿ, ಅಮರ ನಲವಡೆ, ರವೀಂದ್ರ ಹಿಡಕಲ್ಲ, ಸೋಮಲಿಂಗ ಪಾಟೀಲ, ಬಸಗೌಡ ಮಗೆನ್ನವರ, ಪ್ರಭುದೇವ ಪಾಟೀಲ, ಅಶೋಕ ಪಟ್ಟಣಶೆಟ್ಟಿ, ಶಿವಕುಮಾರ ಮಟಗಾರ ಜಯಗೌಡ ಪಾಟೀಲ, ಜಯಪ್ರಕಾಶ ಕರಜಗಿ, ಶಂಕರ ಹೆಗಡೆ ಸೇರಿದಂತೆ ಇತರರು ನಾಮಪತ್ರ ಸಲ್ಲಿಸಿದ್ದಾರೆ.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept