ಕೋಚರಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಯಂತೋತ್ಸವ ಮತ್ತು ಕಾಶಿಪೀಠದ ಜಗದ್ಗುರುಗಳ ರಥೋತ್ಸವ ಸಮಾರಂಭ

ತಾಲೂಕಿನ ಕೋಚರಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಯಂತೋತ್ಸವವನ್ನು ಕಾಶಿಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಉದ್ಘಾಟಿಸಿದರು. ಚಂದ್ರಶೇಖರ ಶಿವಾಚಾರ್ಯರು, ಗುರುಸಿದ್ದ ಶಿವಾಚಾರ್ಯರು, ಸೂರ್ಯಕಾಂತ ನಾಯಿಕ ದಂಪತಿಗಳು, ಪುರವಂತರು ಮತ್ತಿತರರಿದ್ದರು

ಹುಕ್ಕೇರಿ: ತಾಲೂಕಿನ ಕೋಚರಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಯಂತೋತ್ಸವ ಮತ್ತು ಕಾಶಿಪೀಠದ  ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರ ರಥೋತ್ಸವ ಶೃದ್ಧಾ ಭಕ್ತಿಯಿಂದ ಜರುಗಿತು.

  ಮಂಗಳವಾರದಂದು ಸಂಜೆ ನಡೆದ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ನಮ್ಮ ದೇಶದ ಸನಾತನ ಪರಂಪರೆ ಮತ್ತು ಧಾರ್ಮಿಕ ಉತ್ಸವಗಳನ್ನು ಗ್ರಾಮೀಣ ಪ್ರದೇಶದಲ್ಲಿ ಮಹತ್ವ ಪಡೆದಿವೆ. ಇದರಿಂದ ನೆಮ್ಮದಿಯ ಬದುಕು ಅವರದ್ದಾಗಿದ್ದರೆ, ಆಧುನಿಕತೆಯ ಮೋಹದಲ್ಲಿರುವ ನಗರವಾಸಿಗಳು ಮಾನಸಿಕ ಸಮಸ್ಯೆಗಳಿಂದ ಬಳಲುತಿದ್ದಾರೆ ಎಂದರು.

    ಮಾನವ ಸಂಕುಲದ ಉಳಿದು ಬೆಳೆಯಲು ಧಾರ್ಮಿಕತೆ ಅವಶ್ಯ. ಆನಿಟ್ಟಿನಲ್ಲಿ ಕೋಚರಿ ಗ್ರಾಮದ ನಾಯಿಕ ಕುಟುಂಬ ಇಂತಹ ಸಮಾರಂಭ ಆಯೋಜಿಸಿದ್ದು ಸಮಂಜಸವಾಗಿದೆ.ಹಣ, ಅಧಿಕಾರಕ್ಕಿಂತ ಧಾರ್ಮಿಕ ಮೌಲ್ಯ ಹೆಚ್ಚಿನದ್ದಾಗಿದೆ.ಕಾರಣ ಪ್ರತಿಯೊಬ್ಬರು ಧರ್ಮ ಪರಿಪಾಲನೆ ಮಾಡುವ ಮೂಲಕ ಧರ್ಮವಂತರಾಗಿ ಎಂದು ಹರಸಿದರು.

  ಸಮಾರಂಭದ ಸಂಘಟಕ ಸೂರ್ಯಕಾಂತ ನಾಯಿಕ ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳಿಂದ ನಮ್ಮ ಕುಟುಂಬಕ್ಕೆ ಒಳ್ಳೆಯದಾಗಿದೆ.ಅದರಿಂದ ಪ್ರತಿ ವರ್ಷ ಇಂತಹ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದರು.

      ಪ್ರಾರಂಭದಲ್ಲಿ ನಡೆದ ವೀರಭದ್ರೇಶ್ವರನ ಭಾವಚಿತ್ರ ಹಾಗೂ ಕಾಶಿ ಜಗದ್ಗುರುಗಳ ರಥೋತ್ಸವ ಮೆರವಣಿಗೆ, ಪುರವಂತರ ವೀರಗಾಸೆ ವಾಧ್ಯ ಮೇಳಗಳಿಗೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ರೈತ ಮುಖಂಡರಿಗೆ, ಮಹಿಳಾ ಸಾಧಕರು ಮತ್ತು ಪುರವಂತರಿಗೆ ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿದರು. 

     ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ನೂಲಿಯ ಗುರುಸಿದ್ಧ ಶಿವಾಚಾರ್ಯರು, ಇಳಕಲ್ಲದ ಅನ್ನದಾನೀಶ್ವರ ಶಾಸ್ತ್ರೀಗಳು, ಶಶಿಕಾಂತ ಗುರೂಜಿ. ಬಸವನ ಬಾಗೇವಾಡಿಯ ಶ್ರೀಗಳು, ವೀರಭದ್ರೇಶ್ವರ ಸಂಸ್ಥೆಯ ಟ್ರಸ್ಟಿ ಹಾಗೂ ಸಮಾರಂಭದ ಸಂಘಟಕ ಸೂರ್ಯಕಾಂತ ನಾಯಿಕ, ಗೀತಾಂಜಲಿ ನಾಯಿಕ, ಪುರವಂತರ ಮುಖಂಡರಾದ ಮಲ್ಲಯ್ಯ ಮಠಪತಿ, ತಮ್ಮಣ್ಣಗೌಡ ಪಾಟೀಲ ಸೇರಿದಂತೆ ಅನೇಕರಿದ್ದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept