ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಪತ್ರಿಕಾ ದಿನಾಚರಣೆ ಹಾಗೂ ಸ್ವಾತಂತ್ರೋತ್ಸವದ ನಿಮಿತ್ಯ ಶಾಲಾ ಮಕ್ಕಳಿಗೆ ಸ್ಕೂಲ್ ಕಿಟ್ ಮತ್ತು ರೈತರಿಗೆ ಸಸಿಗಳನ್ನು ವಿತರಿಸಿದರು. ಸುರೇಶ ತಳವಾರ, ರವಿ ಕಾಂಬಳೆ, ಸಂಜು ಹಾವನ್ನವರ, ಶ್ರೀಕಾಂತ ತಳವಾರ ಇತರರಿದ್ದರು.
ಹುಕ್ಕೇರಿ: ತಾಲೂಕ ಪಂಚಾಯತ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ಸ್ವಾತಂತ್ರೋತ್ಸವದ ನಿಮಿತ್ಯ ಶಾಲಾ ಮಕ್ಕಳಿಗೆ ಸ್ಕೂಲ್ ಕಿಟ್ ವಿತರಿಸಲಾಯಿತು.
ರವಿವಾರದಂದು ಸ್ಥಳೀಯ ತಾ.ಪಂ ಸಭಾಬವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ೮೫ ವಿದ್ಯಾರ್ಥಿಗಳಿಗೆ ಸ್ಕೂಲ್ ಕಿಟ್ಗಳನ್ನು ವಿತರಿಸಿ ಮಾತನಾಡಿದ ವಾಯು ಮಾಲಿನ್ಯ ನಿಯಂತ್ರಣಾ ಮಂಡಳಿ ಜಿಲ್ಲಾ ಮಾಜಿ ಸದಸ್ಯ ಸುರೇಶ ತಳವಾರ ಅವರು ಪತ್ರಕರ್ತರು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಕಾರ್ಯವೆಂದರು. ಇವರ ಪ್ರಯತ್ನಕ್ಕೆ ನಮ್ಮ ಜಿಟಿ ಗ್ರೂಪ್ ಸಂಸ್ಥೆಯಿಂದ ಶಾಲಾ ಬ್ಯಾಗ್ಗಳನ್ನು, ಪತ್ರಕರ್ತರ ಧ್ವನಿ ಸಂಘಟನೆಯ ವತಿಯಿಂದ ನೋಟ್ ಬುಕ್ಗಳು ಸೇರಿದಂತೆ ಅವಶ್ಯಕತೆ ಇರುವ ಸ್ಕೂಲ್ ಕಿಟ್ ನೀಡಿರುವರು ಎಂದರು. ಪರಿಸರ ಕಾಳಜಿಯಿಂದ ರೈತರಿಗೆ ೨೦೦ಕ್ಕೂ ಹೆಚ್ಚು ಸಸಿಗಳನ್ನು ವಿತರಣೆ ಮಾಡಿದ್ದು ಸಹ ಪ್ರಶಂಸನೀಯವೆಂದು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕ್ಯಾರಗುಡ್ಡ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಶ್ರೀಗಳು ಮಾತನಾಡಿ ಇಂದು ವಿದ್ಯಾರ್ಥಿಗಳಿಗೆ ನೀಲಿ ಪೆನ್ ನೀಡಲಾಗಿದೆ. ಇದೇ ಪೆನ್ ಮುಂದೆ ಒಂದು ದಿನ ಹಸಿರು ಪೆನ್ನಾಗಿ ಪರಿವರ್ತನೆ ಆಗಲಿ. ಅಂದರೆ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಮೂಲಕ ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿ ಹಸಿರು ಪೆನ್ನಿನಿಂದ ಸಮಾಜದ ಸೇವೆ ಮಾಡುವಂತಾಗಲಿ ಎಂದು ಆಶೀರ್ವದಿಸಿದರು.
ಪತ್ರಕರ್ತರ ಧ್ವನಿ ಸಂಘಟನೆ ಜಿಲ್ಲಾಧ್ಯಕ್ಷ ರವಿ ಕಾಂಬಳೆ ಅವರು ಮಾತನಾಡಿ ಮೂರು ವರ್ಷದ ಹಿಂದೆ ಸ್ಥಾಪಿಸಿದ ಸಂಘಟನೆ ಪ್ರತಿ ವರ್ಷ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಪತ್ರಿಕಾ ದಿನಾಚರಣೆ ಆಚರಿಸುತ್ತಿದ್ದೇವೆ ಎಂದರು. ಜಿಲ್ಲಾ ಗೌರವ್ಯಾಧ್ಯಕ್ಷ ಶ್ರೀಕಾಂತ ಚೌಗಲಾ ಮಾತನಾಡಿದರು.
ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ, ಬಿ.ಇ.ಒ ಪ್ರಭಾವತಿ ಪಾಟೀಲ, ಶಶಿಧರ್ ಭೂಸಗೋಳ, ಶ್ರೀಕಾಂತ ತಳವಾರ. ಸಂಜು ಹಾವನ್ನವರ. ಗೋಪಾಲ ಮರಬಸನ್ನವರ. ಸದಾಶಿವ ಕಾಂಬಳೆ, ಬಾಹುಸಾಹೇಬ ಪಾಂಡ್ರೆ. ಶಂಕರ ಗುಡಸಿ. ವಿಜಯ ಮಡಿವಾಳ ಮತ್ತು ಸಂಘಟನೆಯ ಪದಾಧಿಕಾರಿಗಳಿದ್ದರು.






