ಹುಕ್ಕೇರಿ: ರೈತರಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವುದರಲ್ಲಿ ಪಿಕೆಪಿಎಸ್ ಸಹಕಾರಿ ಮುಂಚೂಣಿಯಲ್ಲಿದ್ದು, ಇದರಿಂದ ದೇಶದ ಅರ್ಥ ವ್ಯವಸ್ಥೆ ಬಲಗೊಳ್ಳಲು ನೆರವಾಗಿವೆ ಎಂದು ಬಿಡಿಸಿಸಿ ಬ್ಯಾಂಕ ನಿರ್ದೇಶಕ ರಮೇಶ ಕತ್ತಿ ಹೇಳಿದರು.
ಬುಧವಾರದಂದು ತಾಲೂಕಿನ ಗುಡಸ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಿಕೆಪಿಎಸ್ ಸಹಕಾರಿ ಮಾತ್ರ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಏಕೈಕ ಸಂಸ್ಥೆಯಾಗಿದೆ ಎಂದರು. ಜಿಲ್ಲೆಯಲ್ಲಿ ಉತ್ತಮ ಸಹಕಾರಿಯಾಗಿ ಗುರುತಿಸಿಕೊಂಡಿರುವ ಗುಡಸ ಗ್ರಾಮದ ಪಿಕೆಪಿಎಸ್‌ನಿಂದ ಹೊಸದಾಗಿ 2261 ಜನರಿಗೆ ರೂ. 21 ಕೋಟಿ 18 ಲಕ್ಷ ಪತ್ತು ಮಂಜೂರಿಯಾಗಿದೆ ಎಂದ ಅವರು ಈ ಪಿಕೆಪಿಎಸ್ ತಾಲೂಕಿನ ಶಿರಢಾಣ, ಝಾಂಗಟಿಹಾಳ, ಗುಡಸ, ಕೊಟಬಾಗಿ ಗ್ರಾಮಗಳಿಗೆ ಸಹಕಾರಿ ಸಂಘವು ಕಾರ್ಯಕ್ಷೇತ್ರ ಹೊಂದಿದ್ದು, ಸಂಘ ಹಣಕಾಸಿನ ನೆರವಿನ ಜೊತೆಗೆ ರೈತರಿಗೆ ಗೊಬ್ಬರ ಮತ್ತು ಟ್ರ್ಯಾಕ್ಟರ್ ಖರೀದಿಸಲು ಸಾಲ ನೀಡಲಾಗುತ್ತಿದೆ ಎಂದರು.
ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ನರಸನ್ನವರ ಮಾತನಾಡಿ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 1 ಕೋಟಿ 52 ಲಕ್ಷ ರೂ ಲಾಭ ಗಳಿಸಿರುತ್ತದೆ. ಶೇಕಡಾ 25% ರಂತೆ ಡಿವ್ಹಿಡೆಂಡ್ ಹಂಚಲು ಚಿಂತನೆ ಮಾಡಿದ್ದು, ಶೂನ್ಯ ಬಡ್ಡಿ ದರದಲ್ಲಿ 18 ಕೋಟಿ 10 ಲಕ್ಷಗಳಷ್ಟು ಡಿಕೆಸಿಸಿ ಸಾಲ ವಿತರಿಸಿದ್ದು, 16 ಸದಸ್ಯರಿಗೆ ಟ್ಯಾಕ್ಟರ ಸಾಲ ಸೇರಿದಂತೆ ಒಟ್ಟು ರೂ. 44 ಕೋಟಿ 94 ಲಕ್ಷಗಳಷ್ಟು ಸಾಲ ವಿತರಿಸಲಾಗಿದೆ. ರೂ. 65 ಕೋಟಿ 65 ಲಕ್ಷಗಳಷ್ಟು ದುಡಿಯುವ ಬಂಡವಾಳ ಮತ್ತು ರೂ. 38 ಕೋಟಿ 97 ಲಕ್ಷಗಳಷ್ಟು ಠೇವು ಹೊಂದಿದೆ ಎಂದರು.
ಅವಜೀಕರ ಆಶ್ರಮದ ಅಭಿನವ ಮಂಜುನಾಥ ಮಹಾರಾಜರು ಸಾನಿಧ್ಯ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂಘದಿಂದ ವಿಮಾ ಚೆಕ್ ವಿತರಿಸಿದರು.

ಉಪಾಧ್ಯಕ್ಷ ರಾಯಪ್ಪಾ ಡೂಗ, ನಿರ್ದೇಶಕರಾದ ಸದಾನಂದ ಹಿರೇಮಠ, ಶಿದಗೌಡ ಪಾಟೀಲ, ಬಾಬು ಜಾರಕಿಹೋಳಿ, ಅಲಗೌಡ ದೊಡದನ್ನವರ, ಅಡಿವೆಪ್ಪಾ ಮಗದುಮ್ಮ, ಮಹಾದೇವಿ ಪಾಟೀಲ, ಮೀನಾಕ್ಷಿ ಚಂದರಗಿ, ರಾಜು ಬಂಗಾರಿ, ಮಲಗೌಡ ದೇಸಾಯಿ, ಬ್ಯಾಂಕ ನಿರೀಕ್ಷಕ ಕೆ.ಎಸ್.ಗವಿಮಠ ಇತರರಿದ್ದರು. ಮುಖ್ಯ ಕಾರ್ಯನಿರ್ವಾಹಕ ಎಸ್ ಎಸ್ ಮಲ್ಲಾಪೂರೆ ಸ್ವಾಗತಿಸಿದರು ಶಿವಾನಂದ ಕುಂಬಾರ ನಿರೂಪಿಸಿದರು. ಸುನೀಲ ಮುದಿಗೌಡ ವಂದಿಸಿದರು.





