ತಾಲೂಕಿನ ಬೆಲ್ಲದ ಬಾಗೇವಾಡಿಯ ಗಜಾನನ ಉತ್ಸವ ಸಮಿತಿಯ 40ಕೆ.ಜಿ ಬೆಳ್ಳಿ ಗಣೇಶ ಮೂರ್ತಿಯನ್ನು ಬರ ಮಾಡಕೊಳ್ಳುವ ಸಂಭ್ರಮದಲ್ಲಿ ಚರ್ಚಿಸುತ್ತಿರುವ ಮಾಜಿ ಸಂಸದ ರಮೇಶ ಕತ್ತಿ. ಸಮಿತಿಯ ಆರ್.ಟಿ.ಶಿರಾಳಕರ, ಅಪ್ಪಾಸಾಬ ಖೇಮಲಾಪೂರೆ, ಮಲ್ಲಿಕಾರ್ಜುನ ಬೆಲ್ಲದ, ರಾಜು ಮುನ್ನೋಳಿ, ಸಂದೀಪ ಕತ್ತಿ, ಪೃಥ್ವಿ ಕತ್ತಿ, ಸುಧೀರ ಕತ್ತಿ, ಮುರಗೇಶ ಮಾಳಗೆ ಇತರರಿದ್ದರು.
ಹುಕ್ಕೇರಿ: ತಾಲೂಕಿನ ಬೆಲ್ಲದ ಬಾಗೇವಾಡಿಯ ಗಜಾನನ ಉತ್ಸವ ಸಮಿತಿಯು ತನ್ನ 85ನೇ ವರ್ಷದ ನಿಮಿತ್ಯ 40 ಕೆ.ಜಿ ಬೆಳ್ಳಿ ಗಣೇಶ ಮೂರ್ತಿಯನ್ನು ಈ ಬಾರಿ ಪ್ರತಿಷ್ಠಾಪಿಸಿದ್ದಾರೆಂದು ಸಮಿತಿ ಮಾರ್ಗದರ್ಶಕ ರಮೇಶ ಕತ್ತಿ ಹೇಳಿದರು.
ಅವರು ಗುರುವಾರದಂದು ಸುದ್ದಿಗಾರರೊಂದಿಗೆ ಮಾತನಾಡಿ ಗ್ರಾಮದ ಬಸವ ಸರ್ಕಲ್‌ದಲ್ಲಿ ಸ್ಥಾಪಿಸುವ ಗಜಾನನ ಮೂರ್ತಿಗೆ 85 ನೇ ವರ್ಷದ ಸಂಭ್ರಮ. ತನ್ನಿಮಿತ್ಯ ಸಮಿತಿಯ ಅಪೇಕ್ಷೆಯಂತೆ ಈ ಬಾರಿ 85ನೇ ವರ್ಷದ ಸಂಭ್ರಮ ತಿಳಿದಾಗ ಮುಖಂಡರು ಮತ್ತು ಸಮಿತಿ ಪದಾಧಿಕಾರಿಗಳ ಅಭಿಪ್ರಾಯ ಪಡೆದು ಬೆಳ್ಳಿ ಗಣಪನ ಮೂರ್ತಿ ಪ್ರತಿಸ್ಠಾಪಿಸಲಾಗಿದೆ ಎಂದರು.

ಮಾರ್ಗದರ್ಶಕರಾದ ಶಾಸಕ ನಿಖಿಲ ಕತ್ತಿ ಮತ್ತು ಸಮಿತಿ ಅಧ್ಯಕ್ಷ ಆರ್.ಟಿ.ಶಿರಾಳಕರ ಮಾತನಾಡಿ ಗ್ರಾಮದ ಹಿರಿಯರ ಸಲಹೆಯಂತೆ ಈ ಬಾರಿ 40ಕೆ.ಜಿ ಬೆಳ್ಳಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದೇವೆ ಎಂದರು.
ಪ್ರಾರಂಭದಲ್ಲಿ ಸಡಗರ ಸಂಭ್ರಮದಿಂದ ಗ್ರಾಮಸ್ಥರು, ಮುಖಂಡರು ಮತ್ತು ಯುವಕರು ಗಣೇಶನ ಮೂರ್ತಿಯನ್ನು ಅದ್ದೂರಿಯಾಗಿ ಬರಮಾಡಿಕೊಂಡರು.
ಗಜಾನನ ಉತ್ಸವ ಸಮಿತಿ ಅಧ್ಯಕ್ಷ ಆರ್.ಟಿ.ಶಿರಾಳಕರ, ಅಪ್ಪಾಸಾಬ ಖೇಮಲಾಪೂರೆ, ಮಲ್ಲಿಕಾರ್ಜುನ ಬೆಲ್ಲದ, ರಾಜು ಮುನ್ನೋಳಿ, ಸಂದೀಪ ಕತ್ತಿ, ಪೃಥ್ವಿ ಕತ್ತಿ, ಮುರಗೇಶ ಮಾಳಗೆ, ಚೇತನ ಕತ್ತಿ, ದೀಪಕ ಮಾಳಗೆ, ಮಹಾನಿಂಗ ಶೆಟ್ಟಿ, ಕಿಶೋರ ಕತ್ತಿ, ವಿನೋದ ರಾಮದುರ್ಗ, ಸಂತೋಷ ಕಡಹಟ್ಟಿ, ಮಿಥುನ ಕತ್ತಿ, ಸುಧೀರ ಕತ್ತಿ ಮತ್ತಿತರರಿದ್ದರು.





