ತಾಲೂಕಿನ ಹಿಡಕಲ್ ಡ್ಯಾಮಿನ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅಧ್ಯಕ್ಷ ರಾಜೇಂದ್ರ ಪಾಟೀಲ ಮಾತನಾಡಿದರು. ಬಸಗೌಡ ಪಾಟೀಲ, ನಿರ್ದೇಶಕರಾದ ಜೆ.ಎಂ.ಪಾಟೀಲ,ಅರ್ಜುನನಾಯ್ಕ ಪಾಟೀಲ, ಸುಭಾಷ ಪಾಟೀಲ, ಸಂಪತ ರಾಮದುರ್ಗೆ, ಸುನೀಲ ಪರ್ವತರಾವ, ಸಂಗೀತಾ ಕರಗುಪ್ಪಿ ಇತರರಿದ್ದರು.
ಹುಕ್ಕೇರಿ: ತಾಲೂಕಿನ ಹಿರಿಯ ಸಹಕಾರಿಗಳ ಚಿಂತನೆಯಾದ ಸ್ಥಾಪಿತವಾದ ಹಿಡಕಲ್ ಡ್ಯಾಮಿನ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆಯು ರೈತರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ರೈತರ ಸಹಕಾರದಿಂದ ಕಳೆದ ವರ್ಷ 2.14 ಲಕ್ಷ ಮೆ.ಟನ್ ಕಬ್ಬು ನುರಿಸಿ ಶೇ.12.09 ಇಳುವರಿಯಂತೆ ಒಟ್ಟು 2.58 ಲಕ್ಷ ಕ್ವಿಂಟಾಲ್ ಸಕ್ಕರೆ ಉತ್ಪಾದನೆ ಮಾಡಲಾಗಿದೆ ಎಂದು ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ ಹೇಳಿದರು.
ಗುರುವಾರದಂದು ಅವರು ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆಯ 2024-25 ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದರು. ಕಾರ್ಖಾನೆಯು ಪ್ರತಿದಿನ 2500 ಮೆಗಾ ಟನ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿದೆ. ನಮ್ಮ ಕಾರ್ಖಾನೆಯಲ್ಲಿ ಪ್ರಥಮ ಹಂತದಲ್ಲಿ 8 ಮೆ.ವ್ಯಾ ವಿದ್ಯುತ್ ಉತ್ಪಾದಿಸುವ ಘಟಕ ಹೊಂದಿದ್ದು, ಸನ್ 2023-24ನೇ ಸಾಲಿನ ಹಂಗಾಮಿನಲ್ಲಿ 1,47,49,900 ಯೂನಿಟ್ ಉತ್ಪಾದಿಸಲಾಗಿದೆ ಎಂದರು.
ವ್ಯವಸ್ಥಾಪಕ ನಿರ್ದೇಶಕ ಎಸ್ ಎಸ್ ಪೂಜಾರಿ ವರದಿ ಮಂಡಿಸಿ ಮಾತನಾಡಿ ಕಾರ್ಖಾನೆಯು 26,898 ಸದಸ್ಯರು ಮತ್ತು 23.02 ಕೋಟಿ ರೂ. ಶೇರು ಬಂಡವಾಳ ಹೊಂದಿದೆ ಎಂದರು. ನಿರ್ದೇಶಕ ಶಶಿಕಾಂತ ನಾಯಿಕ ಮಾತನಾಡಿ ಕಾರ್ಖಾನೆ ಹಲವಾರು ತೊಂದರೆಗಳನ್ನು ಎದುರಿಸಬೇಕಾಗಿತು. ಆಡಳಿತ ಮಂಡಳಿಯವರು ರೈತರ ಶ್ರಮದ ಬೆವರಿಗೆ ಯೋಗ್ಯ ಬೆಲೆ ಕೊಡಲು ಕಾರ್ಖಾನೆ ಬದ್ದವಾಗಿದೆ. ಕಬ್ಬು ಬೆಳೆಗಾರರ ಹಿತ ದೃಷ್ಟಿಯಿಂದ ಸಕ್ಕರೆ ಕಾರ್ಖಾನೆಯನ್ನು ಪ್ರಗತಿಯತ್ತ ಕೊಂಡೊಯ್ಯಲಾಗುವುದು ಎಂದು ಹೇಳಿದರು.
ಉಪಾಧ್ಯಕ್ಷ ಬಸಗೌಡ ಪಾಟೀಲ, ನಿರ್ದೇಶಕರಾದ ಜೆ.ಎಂ.ಪಾಟೀಲ, ಅರ್ಜುನನಾಯ್ಕ ಪಾಟೀಲ, ಸುಭಾಷ ಪಾಟೀಲ, ಸಂಪತ ರಾಮದುರ್ಗೆ, ಸುನೀಲ ಪರ್ವತರಾವ, ಸಂಗೀತಾ ಕರಗುಪ್ಪಿ, ರಾಜಶ್ರೀ ಕವಟಗಿಮಠ, ಶ್ರೀಮಂತ ಸನ್ನಾಯಿಕ, ಶಿವಪ್ಪ ಘಸ್ತಿ, ರವೀಂದ್ರ ಪಾಟೀಲ, ಅಮರನಾಥ ಮಹಾಜನಶೆಟ್ಟಿ, ಲಗಮಣ್ಣಾ ಕೆಂಪಮಲಕಾರಿ, ಗಿರೀಶ ಮಿಶ್ರಿಕೋಟಿ ಮತ್ತಿತರರಿದ್ದರು. ಉಪಾಧ್ಯಕ್ಷ ಬಸಗೌಡ ಪಾಟೀಲ ಸ್ವಾಗತಿಸಿದರು. ಕಾರ್ಯಾಲಯ ಅಧೀಕ್ಷಕ ಅಣ್ಣಪ್ಪಾ ಅಕ್ಕತಂಗೇರಹಾಳ ನಿರೂಪಿಸಿದರು, ದುರದುಂಡಿ ಭರಮಗೌಡನವರ ವಂದಿಸಿದರು.





