ಹುಕ್ಕೇರಿ ಎಸ್.ಬಿ.ಆಯ್ ವ್ಯವಸ್ಥಾಪಕರ ದುವರ್ತನೆ, ಗ್ರಾಹಕರ ಪ್ರತಿಭಟನೆ

ಹುಕ್ಕೇರಿ ಎಸ್,ಬಿ.ಆಯ್ ಬ್ಯಾಂಕಿನಲ್ಲಿ  ಸಮಸ್ಯೆಗಳ ಕುರಿತು ಗ್ರಾಹಕರು ವ್ಯವಸ್ಥಾಪಕರೊಂದಿಗೆ  ವಾಗ್ವಾಧ ನಡೆಸುತ್ತಿರುವುದು.

ಹುಕ್ಕೇರಿ: ಸ್ಥಳೀಯ ಎಸ್.ಬಿ.ಆಯ್ ಬ್ಯಾಂಕಿನ ವ್ಯವಸ್ಥಾಪಕರ ದುವರ್ತನೆ, ಗ್ರಾಹಕರ ಆಕ್ರೋಶ ಮತ್ತು ಪ್ರತಿಭಟನೆ ನಡೆಸಿದ ಘಟನೆ ಇಲ್ಲಿನ ಎಸ್,ಬಿ.ಐ. ಬ್ಯಾಂಕಿನಲ್ಲಿ ಶುಕ್ರವಾರದಂದು ನಡೆಯಿತು.

        ಗ್ರಾಹಕ ವ್ಯವಹಾರ ವಿಳಂಬ ಕುರಿತು ಆಕ್ಷೇಪಿಸಿ ಹೆಚ್ಚಿನ ಕೌಂಟರಗಳನ್ನು ತೆರೆಯಬೇಕು ಹಾಗೂ ಗ್ರಾಹಕರ ಕೆಲಸಕ್ಕೆ ವಿಳಂಬವಾಗುತ್ತಿರುವುದನ್ನು ತಪ್ಪಿಸಬೇಕೆಂದು ಬ್ಯಾಂಕಿನ ವ್ಯವಸ್ಥಾಪಕರ ಬಳಿ ಕೇಳಲು ಗ್ರಾಹಕರು ಹೋದಾಗ ಸರಿಯಾಗಿ ಸ್ಪಂದಿಸದೇ ಗ್ರಾಹಕರ ಜತೆಗೆ ವಾಗ್ವಾಧಕ್ಕೆ ಇಳಿದ ಕಾರಣ ಗ್ರಾಹಕರು ಬ್ಯಾಂಕಿನಲ್ಲಿ ಪ್ರತಿಭಟಿಸಿದರು.

           ಶಿಕ್ಷಕ ಅಶೋಕ ಕುಂಬಾರ ಮಾತನಾಡಿ  ಎಸ್.ಬಿ,ಐ ಬ್ಯಾಂಕಿನಲ್ಲಿ ಗ್ರಾಹಕರು ತಮ್ಮ ಕೆಲಸ ಕಾರ್ಯಗಳಿಗೆ ಗಂಟೆಗಟ್ಟಲೇ ಕಾಯಬೇಕಾಗಿದೆ. ವ್ಯವಸ್ಥಾಪಕ ಸೇರಿದಂತೆ ಸಿಬ್ಬಂದಿ ಗ್ರಾಹಕರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೌಂಟರಗಳ ಕೊರತೆಯಿಂದ ಗ್ರಾಹಕರು ತೀವೃ ತೊಂದರೆ ಅನುಭವಿಸುವಂತಾಗಿದೆ. ಹಣ ಪಡೆಯಲು ಡಿಡಿ ಪಡೆಯಲು ಸೇರಿದಂತೆ ಇತರೆ ಕೆಲಸಗಳು ಇಲ್ಲಿ ನಿಗದಿತ ಸಮದಲ್ಲಿ ನಡೆಯುತ್ತಿಲ್ಲ. ಬ್ಯಾಂಕನಲ್ಲಿ 30 ಸಾವಿರಕ್ಕಿಂತ ಹೆಚ್ಚು ಹಣ ವಿತಡ್ರಾ ಮಾಡಲು ಅವಕಾಶ ಇದ್ದು ಕಡಿಮೆ ಹಣ ಬೇಕಾದಲ್ಲಿ ಸೇವಾ ಕೇಂದ್ರಕ್ಕೆ ಹೋಗಿ ತೆಗೆದುಕೊಳ್ಳಿ ಎಂದು ಉದ್ದಟತನದಿಂದ ಹೇಳುತ್ತಾರೆ.      ಹಿರಿಯರು ನಾಗರಿಕರು ಮತ್ತು ವಿಶೇಷ ಚೇತನರಿಗೆ ಪ್ರತ್ಯೇಕ ಕೌಂಟರ ತೆರೆಯುವಂತೆ ತಿಳಿಸಿದರೇ ವ್ಯವಸ್ಥಾಪಕರು ಗ್ರಾಹಕರೊಂದಿಗೆ ವಾಗ್ವಾದಕ್ಕೆ ಇಳಿಯುತ್ತಾರೆ. ಪ್ರಶ್ನಿಸಿದ ಗ್ರಾಹಕರಿಗೆ ಕ್ಯಾಶ ವಿತ್ ಡ್ರಾ ನೀಡದಂತೆ ಸಿಬ್ಬಂದಿಯವರಿಗೆ ಸೂಚಿಸುತ್ತಾರೆ. ಗ್ರಾಹಕರು ಹಲವು ದಿನಗಳಿಂದ ಸೌಜನ್ಯದಿಂದ ಮತ್ತೊಂದು ಕೌಂಟರ ತೆರೆಯಬೇಕು ಎಂದು ಹೇಳಿದರು. ಪ್ರಯೋಜ ಇಲ್ಲದಂತಾಗಿದೆ ಮೇಲಾಧಿಕಾರಿಗಳು ಪರಿಶೀಲಿಸಿ ಗ್ರಾಹಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವಂತಹ ವ್ಯವಸ್ಥಾಪಕರನ್ನು ನೇಮಿಸಬೇಕೆಂದು ಆಗ್ರಹಿಸಿದ್ದಾರೆ.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept