ಹುಕ್ಕೇರಿ : 110/33/11ಕೆ.ವ್ಹಿ ವಿದ್ಯುತ್ ಉಪಕೇಂದ್ರದ ನಿರ್ವಹಣಾ ಕಾರ್ಯವನ್ನು ರವಿವಾರ ದಿ.11-1-2026ರಂದು ಕೈಗೊಳ್ಳಲು ವಿದ್ಯುತ್ ಸಹಕಾರಿ ಸಂಘದ ಅಧಿಕಾರಿಗಳು ನಿರ್ಧರಿಸಿದ್ದಾರೆ ಕಾರಣ ಆ ದಿನದಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಿದ್ದಾರೆ.

ಉಪಕೇಂದ್ರದ ಮೇಲೆ ಬರುವ ಹುಕ್ಕೇರಿಪಟ್ಟಣ, ಬೆಳವಿ, ಶೇಲಾಪೂರ, ಹಣಜ್ಯಾನಟ್ಟಿ, ಯಾದಗೂಡ, ಕಮತ್ಯಾನಟ್ಟಿ, ನೇರ್ಲಿ, ಎಲಿಮುನ್ನೋಳಿ, ಬಸ್ತವಾಡ, ಗೌಡವಾಡ, ಬೆಣಿವಾಡ, ಮದಮಕ್ಕನಾಳ, ಮದಿಹಳ್ಳಿ, ಬಡಕುಂದ್ರಿ, ಯರಗಟ್ಟಿ, ಯರನಾಳ, ರಕ್ಷಿ ಮತ್ತು ಹುಲ್ಲೋಳಿಹಟ್ಟಿ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಸಾರ್ವಜನಿಕರು ಸಹಕರಿಸಬೇಕೆಂದು ವಿದ್ಯುತ್ ಸಹಕಾರಿ ಸಂಘದ ಅಭಿಯಂತರ ನೇಮಿನಾಥ ಖೇಮಲಾಪೂರೆಅವರುಕೋರಿದ್ದಾರೆ.





