ಆರ.ಸಿ.ಯುದಿಂದ ಗೌರವ ಡಾಕ್ಟರೇಟ ಪುರಸ್ಕಾರ ಪಡೆದ ತಾಲೂಕಿನ ನಿಡಸೋಶಿಯ ಜಗದ್ಗುರು ಡಾ.ಪಂಚಮ ಶಿವಲಿಂಗೇಶ್ವರ ಶ್ರೀಗಳನ್ನು ಬೆಲ್ಲದ ಬಾಗೇವಾಡಿ ಕೃಷಿ ಸೇವಾ ಸಂಘದ ಆಡಳಿತ ಮಂಡಳಿಯವರು ಸತ್ಕರಿಸಿದರು.ಪೃಥ್ವಿ ಕತ್ತಿ, ಶ್ರೀಕಾಂತ ಖೇಮಲಾಪೂರೆ, ಅಶೋಕ ಬೆಲ್ಲದ, ಮುರಗೇಶ ಮಾಳಗಿ, ರವೀಂದ್ರ ಕತ್ತಿ ಇತರರಿದ್ದರು.
ಹುಕ್ಕೇರಿ : ಗಡಿಭಾಗದಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದ ನಿಡಸೋಸಿಯ ಜಗದ್ಗುರು ಡಾ.ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳಿಗೆ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ ನೀಡಿದ್ದು ಶ್ಲಾಘನೀಯ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.
ಶನಿವಾರದಂದು ತಾಲೂಕಿನ ನಿಡಸೋಸಿಯ ದುರದುಂಡೇಶ್ವರ ಮಠದಲ್ಲಿ ಇತ್ತೀಚೆಗೆ ಡಾಕ್ಟರೇಟ ಪುರಸ್ಕಾರ ಪಡೆದ ಜಗದ್ಗುರು ಡಾ.ಪಂಚಮ ಶಿವಲಿಂಗೇಶ್ವರ ಶ್ರೀಗಳನ್ನು ಬೆಲ್ಲದ ಬಾಗೇವಾಡಿ ಕೃಷಿ ಸೇವಾ ಸಂಘದ ಆಡಳಿತ ಮಂಡಳಿಯೊಂದಿಗೆ ಸತ್ಕರಿಸಿ ಮಾತನಾಡಿದರು. ತಾಲೂಕಿನ ನಿಡಸೋಸಿಯ ದುರದುಂಡೇಶ್ವರ ಮಠ ಈ ಭಾಗದ ಜನರ ಶ್ರದ್ಧಾ ಭಕ್ತಿಯ ತಾಣವಾದೆ.ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆಯ ಜತೆಗೆ ಮಹಾರಾಷ್ಟç ರಾಜ್ಯದ ಅಪಾರ ಜನ ಭಕ್ತರನ್ನು ಈ ಮಠ ಹೊಂದಿದೆ. ಗಡಿಭಾಗದಲ್ಲಿ ಧಾರ್ಮಿಕತೆಯ ಜತೆಗೆ ಅನ್ನದಾಸೋಹ ಮತ್ತು ಶೈಕ್ಷಣೀಕ ಕ್ರಾಂತಿ ಕೈಗೊಂಡ ಶ್ರೀಗಳ ಕಾರ್ಯವನ್ನು ಗಮನಿಸಿ ಈ ಪ್ರಶಸ್ತಿ ದೊರಕಿದೆ ಎಂದರು.
ಡಾ.ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿ ಅವರು ಸತ್ಕಾರ ಸ್ವೀಕರಿಸಿ ಮಾತನಾಡುತ್ತಾ ಈ ಗೌರವ ಮಠದ ಭಕ್ತಾಧಿಗಳಿಗೆ ಸಲ್ಲುತ್ತದೆ ಎಂದರು.
ಬೆಲ್ಲದ ಬಾಗೇವಾಡಿ ಕೃಷಿ ಸೇವಾ ಸಂಘದ ಅಧ್ಯಕ್ಷ ಶ್ರೀಕಾಂತ ಖೇಮಲಾಪುರೆ, ಉಪಾಧ್ಯಕ್ಷ ಅಶೋಕ ಬೆಲ್ಲದ, ನಿರ್ದೇಶಕರಾದ ಮುರಗೇಶ ಮಾಳಗಿ, ಬಸವರಾಜ ಲಟ್ಟಿ, ನಾಸೀರ ಜಗದಾಳ, ಸಂಗಪ್ಪಾ ಎಡತ್ತಿನವರ, ವ್ಯವಸ್ಥಾಪಕ ರವೀಂದ್ರ ಕತ್ತಿ ಹಾಗೂ ಸಹಾಯಕ ವ್ಯವಸ್ಥಾಪಕ ಸಾವಂತ ಮುನ್ನೋಳಿ ಮತ್ತಿತರರಿದ್ದರು.