ಹುಕ್ಕೇರಿ: ತಾಲೂಕಿನ ಕೋಚರಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಯಂತೋತ್ಸವ 2025 ನಿಮಿತ್ಯ ಪುರವಂತರ ಮತ್ತು ಸನಾತನ ಧರ್ಮ ಹಾಗೂ ರೈತ ಸಮಾವೇಶ, ಶ್ರೀ ವೀರಭದ್ರೇಶ್ವರ & ಭದ್ರಕಾಳಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಸೆಪ್ಟಂಬರ್ ತಿಂಗಳ ಸೋಮವಾರ ದಿ: 1ರಂದು ಮತ್ತು ಮಂಗಳವಾರ ದಿ: 2 ರಂದು ಆಯೋಜಿಸಲಾಗಿದೆ ಎಂದು ಸಂಘಟಕ ಸೂರ್ಯಕಾಂತ ನಾಯಿಕ ತಿಳಿಸಿದರು.
ಶುಕ್ರವಾರದಂದು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮದೇ ಆದ ಶ್ರೀ ವೀರಶೈವ ವಿದ್ಯಾಸಂಸ್ಥೆ ಚಾರಿಟೇಬಲ್ ಟ್ರಸ್ಟ್ನ ಆಶ್ರಯದಲ್ಲಿ ಪ್ರತಿ ವರ್ಷದಂತೆ ಧಾರ್ಮಿಕ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು. ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಪೀಠದ ಕಿರಿಯ ಜಗದ್ಗುರು ಡಾ ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದಕರು, ಉಜ್ಜಯನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದಕರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ನೇತೃತ್ವ ಮತ್ತು ನಿಡಸೋಸಿ ದುರದುಂಡೇಶ್ವರ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಮಹಾಸ್ವಾಮಿಗಳು ಸಮ್ಮುಖದಲ್ಲಿ ಸಮಾರಂಭ ಜರುಗಲಿದೆ ಎಂದರು. ಸೋಮವಾರ ನಡೆಯಲಿರುವ ಶ್ರೀ ವೀರಭದ್ರೇಶ್ವರ ನೂತನ ಸಿಂಹಾಸನ ಪೂಜೆ ಮತ್ತು ಜಗದ್ಗುರುಗಳ ಪಾದಪೂಜೆ ನಡೆಲಿದ್ದು ಅಂದು ನಿಡಸೋಸಿ ದುರದುಂಡೇಶ್ವರ ಮಠದ ಜಗದ್ಗುರು ಡಾ. ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರೆಂದರು. ಉಳ್ಳಾಗಡ್ಡಿ ಖಾನಾಪೂರದ ಗುರುಸಿದ್ದೇಶ್ವರ ಶಿವಾಚಾರ್ಯರು, ಕೊಣ್ಣೂರ ಮರಡಿಮಠದ ಡಾ. ಪವಾಡೇಶ್ವರ ಶಿವಾಚಾರ್ಯರು, ಹುಕ್ಕೇರಿ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು, ಚಿಕ್ಕೋಡಿ ಸಂಪಾದನ ಮಹಾಸ್ವಾಮಿಗಳು, ಕ್ಯಾರಗುಡ್ಡ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಉಪಸ್ಥಿತರು ಇರುವರೆಂದು ಹೇಳಿದರು.
ಗ್ರಾ.ಪಂ ಅಧ್ಯಕ್ಷೆ ಸುರೇಖಾ ಹುದ್ದಾರ ಅಧ್ಯಕ್ಷತೆಯಲ್ಲಿ ಗಣ್ಯರು, ರೈತ ಮುಖಂಡರು, ಪುರವಂತರು ಮತ್ತು ರಾಜಕೀಯ ಧುರೀಣರು ಪಾಲ್ಗೊಳ್ಳುವರು ಎಂದು ತಿಳಿಸಿದರು.ಕಾರಣ ಸದ್ಭಕ್ತರು ಆಗಮಿಸುವಂತೆ ವಿನಂತಿಸಿದರು.
ಟೃಸ್ಟನ ಗೀತಾಂಜಲಿ ನಾಯಿಕ, ತ್ರಿಗುಣಾಕಾರಂ, ಸರೋಜಿನಿ, ದ್ರಾಕ್ಷಾಯಿಣಿ ಮತ್ತು ಶಿವಕನ್ಯೆ ಮತ್ತಿತರರಿದ್ದರು.





