ಭಕ್ತ ಕನಕದಾಸರ 538ನೇ ಜಯಂತಿ ಸಮಾರಂಭವನ್ನು ಶ್ರೀಗಳು, ಗಣ್ಯರು ಉದ್ಘಾಟಿಸಿದರು. ಚಂದ್ರಶೇಖರ ಶಿವಾಚಾರ್ಯರು, ಶಿವಬಸವ ಸ್ವಾಮೀಜಿ, ಅಭಿನವ ಮಂಜುನಾಥ ಶ್ರೀಗಳು, ಡಾ.ಜಯಪ್ರಕಾಶ ಕರಜಗಿ, ಭೀಮಸೇನ ಬಾಗಿ ಇತರರಿದ್ದರು.
ಹುಕ್ಕೇರಿ: ಸಂತ ಭಕ್ತ ಕನಕದಾಸರು ಶ್ರೀಮಂತ ಮನೆತನದಲ್ಲಿ ಜನಿಸಿದರೂ ದೇವರ ಮತ್ತು ಜನಸೇವೆಗಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟ ಆದರ್ಶ ವ್ಯಕ್ತಿಯಾಗಿ ಮನುಕುಲದಲ್ಲಿ ಅಜರಾಮರವಾಗಿ ಉಳಿದಿದ್ದಾರೆ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಹೇಳಿದರು.
ಶನಿವಾರದಂದು ಸ್ಥಳೀಯ ಎಸ್.ಕೆ ಪಬ್ಲಿಕ್ ಸ್ಕೂಲಿನ ಚಿಣ್ಣರ ಭವನದಲ್ಲಿ ತಾಲೂಕಾಡಳಿತ ಮತ್ತು ತಾಲೂಕಾ ಹಾಲುಮತ ಸಮಾಜದ ಆಶ್ರ‍್ರಯದಲ್ಲಿ ನಡೆದ 538ನೇ ಕನಕ ಜಯಂತಿಯಲ್ಲಿ ಮಾತನಾಡಿದರು. ಜಾತ್ಯಾತೀತ ಮನೋಭಾವದ ಸಂತ ಶ್ರೇಷ್ಟ ಭಕ್ತ ಕನಕದಾಸರು ಅವರು ರಚಿಸಿದ ಕುಲ ಕುಲವೆಂದು ಬಡಿದಾಡದಿರಿ ಎಂಬ ದಾಸ ಸಾಹಿತ್ಯ ಇಂದಿನ ದಿನಗಳ ಸಮಾಜಕ್ಕೆ ಹೆಚ್ಚು ಪ್ರಸ್ತುತವಾಗಿದೆ ಎಂದರು.
ಚಂದ್ರಶೇಖರ ಶಿವಾಚಾರ್ಯರು, ವಿರಕ್ತಮಠದ ಶಿವಬಸವ ಮಹಾಸ್ವಾಮೀಜಿ, ಕ್ಯಾರಗುಡ್ಡ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಶ್ರೀಗಳು ಮಾತನಾಡಿ ಕನಕದಾಸರ ಭಕ್ತಿಗೆ ಕೃಷ್ಣ ಒಲಿದ ಎಂಬುದಕ್ಕೆ ಉಡುಪಿಯ ಕನಕನ ಕಿಂಡಿ ನಿದರ್ಶನ. ಒಂದೇ ಮನದಿಂದ ಯಾವುದೇ ಕಾರ್ಯ ಕೈಗೊಂಡಲ್ಲಿ ಅದು ಯಶಸ್ವಿಯಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದರು.
ಹಾಲುಮತ ಸಮಾಜದ ಮುಖಂಡರಾದ ಶಂಕರ ಹೆಗಡೆ, ವಕೀಲ ಎಸ್.ಎ.ಏಗನ್ನವರ, ಉಪನ್ಯಾಸಕ ಡಾ.ಎಂ.ಎಸ್.ಖರಾಡಿ ಮತ್ತಿತರರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಕನಕ ಸದ್ಭಾವನಾ ಪ್ರಶಸ್ತಿ ಪುರಸ್ಕೃತರು ಮತ್ತು ಸಮಾಜದ ಪ್ರತಿಭಾವಂತ ಮಕ್ಕಳನ್ನು ಸತ್ಕರಿಸಿದರು. ಪ್ರಾರಂಭದಲ್ಲಿ ಅಡವಿಸಿದ್ದೇಶ್ವರ ಮಠದಿಂದ ಕನಕದಾಸರ ಭಾವಚಿತ್ರದ ಮೆರವಣಿಗೆ ಜರುಗಿತು.

ಮಾಜಿ ಸಚಿವ ಶಶಿಕಾಂತ ನಾಯಿಕ, ಸಮಾಜದ ಅಧ್ಯಕ್ಷ ಡಾ.ಜಯಪ್ರಕಾಶ ಕರಜಗಿ, ಮುಖಂಡರಾದ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಗಜಾನನ ಕ್ವಳ್ಳಿ, ಸತ್ಯೆಪ್ಪಾ ಚಂದರಗಿ, ಶಂಕರ ಹೆಗಡೆ, ನ್ಯಾಯವಾದಿ ಭೀಮಸೇನ ಬಾಗಿ, ಡಾ.ಶಿವಾಜಿ ಗೋಟೂರಿ, ಅಪ್ಪಾಸಾಹೇಬ ಸಾರಾಪೂರೆ, ಅಶೋಕ ಡುಮ್ಮನವರ, ಭೀಮರಾವ ಮಲ್ಲಾರಿಗೋಳ, ಭರಮಾ ಪೂಜೇರಿ, ಸಂತೋಷ ಮುಡಸಿ, ಇರ್ಷಾದ ಮೊಕಾಶಿ, ಬಿ.ಇ.ಒ ಪ್ರಭಾವತಿ ಪಾಟೀಲ, ಸಿಡಿಪಿಒ ಹೊಳೆಪ್ಪಾ ಎಚ್ ಸೇರಿದಂತೆ ಅನೇಕರಿದ್ದರು.





