ಜೈನ ಸಮಾಜ ಶಾಂತಿಪ್ರಿಯರು ಮತ್ತು ಅಹಿಂಸಾ ಪ್ರತಿಪಾದಕರು: ಶಾಸಕ ನಿಖಿಲ ಕತ್ತಿ

ತಾಲೂಕಿನ ಯರನಾಳ ಗ್ರಾಮದ ಜೈನ ಮಂದಿರದಲ್ಲಿ 50 ಲಕ್ಷ ರೂ ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ನಿಖಿಲ ಕತ್ತಿ ಭೂಮಿಪೂಜೆ ನೆರವೇರಿಸಿದರು. ಕೆಂಪಣ್ಣಾ ದೇಸಾಯಿ, ಚಿದಾನಂದ ಡಬ್ಬು, ಧನ್ಯಕುಮಾರ ಪಾಟೀಲ, ಶ್ರೀಕಾಂತ ಪಾಟೀಲ, ವಿದ್ಯಾಧರ ಮಗದುಮ್ಮ, ಪ್ರಫುಲ ಪಾಟೀಲ ಇತರರಿದ್ದರು.

ಹುಕ್ಕೇರಿ : ಜೈನ ಸಮಾಜ ಶಾಂತಿಪ್ರ‍್ರಿಯರು, ಅಹಿಂಸಾ ತತ್ವ ಪರಿಪಾಲಿಸುತ್ತಾ ಸರ್ವರಿಗೂ ಒಳಿತನ್ನು ಬಯಸುತ್ತಾರೆ. ಅವರ ಕಾಯಕ ನಿಷ್ಠೆ, ಧಾರ್ಮಿಕ ಕಾರ್ಯಗಳು ಇತರರಿಗೆ ಮಾದರಿ ಆಗಿವೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

        ಗುರುವಾರದಂದು ತಾಲೂಕಿನ ಯರನಾಳ ಗ್ರಾಮದ ಜೈನ ಮಂದಿರದಲ್ಲಿ 50 ಲಕ್ಷ ರೂ ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯಿಂದ ಅನುದಾನ ಮಂಜೂರಿಯಾಗಿದೆ. ಗುಣಮಟ್ಟದ ಭವನ ನಿರ್ಮಾಣವಾಗಲಿ, ಅನುದಾನ ಕಡಿಮೆಯಾದಲ್ಲಿ ಶಾಸಕರ ನಿಧಿ ಅಥವಾ ಇನ್ನಿತರ ಯೋಜನೆಯಡಿ ಅನುದಾನ ಕೊಡಿಸುವುದಾಗಿ ಭರವಸೆಯಿತ್ತರು. ಇದೇ ಸಂದರ್ಭದಲ್ಲಿ ಶಾಸಕರನ್ನು ಸನ್ಮಾನಿಸಿದರು.

    ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ಮುಖಂಡರಾದ ಕೆಂಪಣ್ಣಾ ದೇಸಾಯಿ, ಚಿದಾನಂದ ಡಬ್ಬು, ಪಿಕೆಪಿಎಸ ಚೇರಮನ್ ಧನ್ಯಕುಮಾರ ಪಾಟೀಲ, ನಿರ್ದೇಶಕರಾದ ಶ್ರೀಕಾಂತ ಪಾಟೀಲ, ವಿದ್ಯಾಧರ ಮಗದುಮ್ಮ, ಗ್ರಾ.ಪಂ ಸದಸ್ಯ ಪ್ರಫುಲ ಪಾಟೀಲ, ರಾಜು ಹುಣಚ್ಯಾಳಿ, ಸಾತಪ್ಪಾ ಪಾಟೀಲ, ಬಾಹುಬಲಿ ರಾಮಣ್ಣವರ, ಪದ್ಮರಾಜ ಪಾಟೀಲ, ರಾಜು ಲಠ್ಠಿ, ಅಜಿತ ರಾಮಣ್ಣವರ, ಸರದಾರ ವರ್ಧಮಾನೆ ಮತ್ತಿತರರಿದ್ದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept