ಪವನ ಕತ್ತಿ ಅವರ ಭಾವಚಿತ್ರ.
ಹುಕ್ಕೇರಿ : ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ರವಿವಾರ ಬೆಳಿಗ್ಗೆ 10 ಗಂಟೆಗೆ ವಿಶಾಲ ಹಿಂದೂ ಸಮ್ಮೇಳನ ಸಮಾರಂಭ ಆಯೋಜಿಸಲಾಗಿದೆ. ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಯಶಸ್ವಿಗೊಳಿಸುವಂತೆ ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಚೇರಮನ್ ಪವನ ಕತ್ತಿ ವಿನಂತಿಸಿದ್ದಾರೆ.
ಶನಿವಾರದಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ವಿಶಾಲ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಇವರ ಆಶ್ರಯದಲ್ಲಿ ಈ ಸಮಾರಂಭವನ್ನು ಗ್ರಾಮದ ಜಡಿಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದೇವೆ ಎಂದರು.
ಗ್ರಾಮದ ವಿರಕ್ತಮಠದ ಶಿವಾನಂದ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯ ವಹಿಸಲಿದ್ದು, ರಾಷ್ಟ್ರ ಸಂಘ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತದ ಪ್ರಚಾರಕ ಪ್ರಮುಖರಾದ ಅರುಣಕುಮಾರ ಜೀ ಮುಖ್ಯ ವಕ್ತಾರರಾಗಿ ಆಗಮಿಸುವರು. ಶಾಸಕ ನಿಖಿಲ ಕತ್ತಿ, ಮಾಜಿ ಸಂಸದ ರಮೇಶ ಕತ್ತಿ, ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ, ಆರ್.ಎಸ್.ಎಸ್ ಪ್ರಮುಖರ ಮತ್ತು ಕಾರ್ಯಕರ್ತರು ಪಾಲ್ಗೊಳ್ಳುತ್ತಾರೆಂದು ಹೇಳಿದರು.
ಬೆಳಿಗ್ಗೆ 10 ಗಂಟೆಗೆ ಗ್ರಾಮದ ಮಹಾಂತೇಶ್ವರ ವಿರಕ್ತಮಠದಿಂದ ಶೋಭಾ ಯಾತ್ರೆ ಪ್ರಾರಂಭವಾಗಲಿದ್ದು, ಜಡಿಸಿದ್ದೇಶ್ವರ ಮಠದ ಆವರಣದವರೆಗೆ ನಡೆಯಲಿದೆ. ನಂತರ ಸಮಾರಂಭ ಪ್ರಾರಂಭ ಆಗುತ್ತದೆ ಎಂದು ತಿಳಿಸಿದರು.

ಮುಖಂಡರಾದ ಅಪ್ಪಾಸಾಹೇಬ ಖೇಮಲಾಪೂರೆ. ಮುರಗೇಶ ಕತ್ತಿ, ಮಹಾನಿಂಗ ಶೆಟ್ಟಿ, ಮಲ್ಲಿಕಾರ್ಜುನ ಕಣಗಲಿ, ಸಿದ್ಲಿಂಗಸ್ವಾಮಿ ಕಡಹಟ್ಟಿಮಠ, ಸುಧೀರ ಕತ್ತಿ, ದೀಪಕ ಮಾಳಗಿ ಮತ್ತಿತರರಿದ್ದರು.





