ಸ್ಥಳೀಯ ಕೋರ್ಟ ವೃತ್ತದಲ್ಲಿ ರೈತರು ನಡೆಸಿದ ಪ್ರತಿಭಟನೆ ದೃಶ್ಯ.
ಹುಕ್ಕೇರಿ : ವರ್ಷಪೂರ್ತಿ ದುಡಿದ ಕಬ್ಬು ಬೆಳೆಯ ಪ್ರತಿ ಟನ್‌ಗೆ 3500 ರೂ ದರ ನಿಗದಿ ಪಡಿಸುವಂತೆ ಒತ್ತಾಯಿಸಿ ರೈತ ಮುಖಂಡರು ಸಕ್ಕರೆ ಕಾರಖಾನೆಗಳ ವಿರುದ್ಧ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಮಂಗಳವಾರದಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕೂಲಿಕ ಕಾರ್ಮಿಕರ ಹಿತಾಸಕ್ತಿ, ಕರ್ನಾಟಕ ರೈತ ಹಿತರಕ್ಷಣಾ ವೇದಿಕೆ, ವಕೀಲರ ಸಂಘ. ಅಟೋ ರೀಕ್ಷಾ ಮಾಲಿಕರು ಸೇರಿದಂತೆ ವಿವಿಧ ಸಂಘಗಳ ಪಧಾಧಿಕಾರಗಳು ಪಟ್ಟಣದ ಅಡವಿಸಿದ್ದೇಶ್ವರ ಮಠದಿಂದ ರೈತರು ಟ್ಯಾಕ್ಟರ ರ‍್ಯಾಲಿ, ಕಾಲು ನಡಿಗೆ ಮೂಲಕ ಕೋರ್ಟ ಸರ್ಕಲ ಹತ್ತಿರ ಪ್ರತಿಭಟಿಸಿ ರಾಜ್ಯ ಕೇಂದ್ರ ಸರ್ಕಾರ, ಸಕ್ಕರೆ ಕಾರ್ಖಾನೆಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ, ಹಿರಿಯ ನ್ಯಾಯವಾದಿ ರಾಮಚಂದ್ರ ಜೋಶಿ, ರೈತ ಸಂಘಟನೆ ತಾಲೂಕಾಧ್ಯಕ್ಷ ಗೋಪಾಲ ಮರಬಸನ್ನವರ, ವಕೀಲರ ಸಂಘದ ಅಧ್ಯಕ್ಷ ಕೆ,ಬಿ, ಕುರಬೇಟ ಮಾತನಾಡಿ ಈಗಾಗಲೇ ಕಬ್ಬು ನುರಿಸುವ ಹಂಗಾಮ ಪ್ರಾರಂಭವಾಗಿದ್ದು ಇದುವರೆಗೆ ಕಾರಖಾನೆಗಳು ಬೆಲೆ ನಿಗದಿ ಮಾಡಿಲ್ಲ, ತಕ್ಷಣ ಕಬ್ಬು ಸಾಗಾಣಿಕೆ ಮತ್ತು ಕಟಾವು ವೆಚ್ಚ ಹೊರತು ಪಡಿಸಿ 3500 ರೂ ನಿಗದಿಪಡಿಸಬೇಕು, ಇಲ್ಲದಿದ್ದರೆ ರೈತರ ಹೋರಾಟ ನಿರಂತರವಾಗಿ ಮುಂದುವರೆಯುವುದು ಎಂದು ಎಚ್ಚರಿಸಿದರು.
ಕಬ್ಬು ದರ ನಿಗದಿದಪಡಿಸುವುದಕ್ಕಾಗಿ ರೈತರು ಬಂದ ಕರೆ ನೀಡಿದ್ದರಿಂದ ಪಟ್ಟಣದ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದಾಗಿದ್ದು. ಕೆಎಸ್‌ಆರ್‌ಟಿಸಿ ಬಸ್. ಖಾಸಗಿ ವಾಹನ ಮಾಲೀಕರ ಸಂಘ ರೈತರ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದರು. ಕೆಎಸ್‌ಆರ್‌ಟಿಸಿ ಬಸ್. ಖಾಸಗಿ ವಾಹನ ಬಂದಾಗಿರುವುದರಿಂದ ಪ್ರಯಾಣಿಕರು ಪರದಾಡಿದರು.
ಪ್ರತಿಭಟನೆಗೆ ಆಗಮಿಸಿದ್ದ ತಾಲೂಕಿನ ಸಾವಿರಾರು ರೈತರಿಗೆ ಕೋರ್ಟ ಸರ್ಕಲ್‌ದಲ್ಲಿ ಅಡುಗೆ ಮಾಡಿ ಊಟದ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.
ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಘೋಡಗೇರಿಯ ಕಾಶಿನಾಥ ಸ್ವಾಮಿಗಳು, ಕ್ಯಾರಗುಡ್ಡ ಅಭಿನವ ಮಂಜುನಾಥ ಸ್ವಾಮಿಜಿ, ರೈತ ಮುಖಂಡರಾದ ಪ್ರಭು ವಂಟಮೂರಿ, ಗೋಪಾಲ ಮರಬಸ್ಸನವರ, ಸಂಜು ಹಾವಣ್ಣವರ, ತಮ್ಮನಗೌಡ ಪಾಟೀಲ, ಬಸವರಾಜ ಪಾಟೀಲ, ವಕೀಲರ ಸಂಘದ ಪದಾಧಿಕಾರಿಗಳಾದ ಅನೀಸ ವಂಟಮೂರಿ, ಆಶಾ ಸಿಂಗಾಡಿ, ಸಿ.ಎಂ, ಸಂಸುದ್ದಿ ಶಿವಾನಂದ ಮರಿನಾಯಿಕ. ಕೆ.ಪಿ. ಶಿರಗಾಂವಕರ, ಡಿ.ಕೆ. ಅವರಗೋಳ, ಮಸ್ಲಿಂ ಸಮಾಜದ ಅಧ್ಯಕ್ಷ ಸಲೀಮ ನಧಾಪ, ಅಟೋ ಚಾಲಕರ ಸಂಘದ ತಾಲೂಕಾ ಅಧ್ಯಕ್ಷ ಬಸವರಾಜ ಕುರಂದವಾಡೆ, ತಾಲೂಕಿನ ರೈತ ಸಂಘದ ಪದಾಧಿಕಾರಿಗಳು, ರೈತರು ಸೇರಿದಂತೆ ಅನೇಕರಿದ್ದರು.





