ಸ್ಥಳೀಯ ತಹಶೀಲ್ದಾರ ಕಾರ್ಯಾಲಯದ ಬಳಿ ಭಗವಾನ ಮಹಾವೀರರ ಕುರಿತು ಹೊರತಂದ ಹಳ್ಳಿ ಸಂದೇಶದ ಗೃಂಥ ಬಿಡುಗಡೆಗೊಳಿಸಿದರು. ಮಂಜುಳಾ ನಾಯಕ, ಪ್ರಭಾವತಿ ಪಾಟೀಲ, ಪಿ.ಆರ್.ಚೌಗಲಾ, ರವೀಂದ್ರ ಚೌಗಲಾ, ಬಾಹುಬಲಿ ನಾಗನೂರಿ, ರಾಜು ಖೇಮಲಾಪೂರೆ ಮತ್ತಿತರರಿದ್ದರು.
ಹುಕ್ಕೇರಿ: ತಾಲೂಕಾಡಳಿತ ಮತ್ತು ಜೈನ ಸಮಾಜದ ಆಶ್ರಯದಲ್ಲಿ ಭಗವಾನ ಮಹಾವೀರರ ಜನ್ಮ ಕಲ್ಯಾಣ ಮಹೋತ್ಸವ ಸಡಗರ, ಸಂಭ್ರಮದ ಜತೆಗೆ ಶ್ರದ್ಧಾ ಭಕ್ತಿಯಿಂದ ಜರುಗಿತು.
ಗುರುವಾರದಂದು ಸ್ಥಳೀಯ ತಹಶೀಲ್ದಾರ ಕಾರ್ಯಾಲಯದಲ್ಲಿ ಭಗವಾನ ಮಹಾವೀರ ಭಾವಚಿತ್ರಕ್ಕೆ ತಹಶೀಲ್ದಾರ ಮಂಜುಳಾ ನಾಯಕ ಮತ್ತು ಜೈನ ಸಮಾಜದ ಪ್ರಮುಖರು ಅವರು ಪೂಜೆ ಸಲ್ಲಿಸಿದರು.ನಂತರ ಮಾತನಾಡಿ ತಹಶೀಲ್ದಾರ ಮಂಜುಳಾ ನಾಯಕ ಅವರು ಭಗವಾನ ಮಹಾವೀರರು ಪ್ರತಿಪಾದಿಸಿದ ಸತ್ಯ, ಅಹಿಂಸೆ ಮತ್ತು ಶಾಂತಿಯ ಸಂದೇಶ ಎಲ್ಲ ಧರ್ಮೀಯರು ಅನುಸರಿಸಬೇಕು ಎಂದರು.ಹಿರಿಯ ನ್ಯಾಯವಾದಿ ಪಿ.ಆರ್.ಚೌಗಲಾ ಮಾತನಾಡಿ ಎಲ್ಲರೂ ಭಗವಾನ ಮಹಾವೀರರ ಅಹಿಂಸಾ ತತ್ವ ಪಾಲಿಸಿದಾಗ ಮಾತ್ರ ಈ ಜಯಂತಿ ಸಾರ್ಥಕವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಭಗವಾನ ಮಹಾವೀರರ ಕುರಿತು ಹೊರತಂದ ಹಳ್ಳಿ ಸಂದೇಶದ ಗೃಂಥ ಬಿಡುಗಡೆಗೊಳಿಸಿದರು. ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ಹಂಚಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಗವಾನ ಮಹಾವೀರರ ಭಾವಚಿತ್ರದ ಮೆರವಣಿಗೆ ಜರುಗಿತು.
ತಾಲೂಕಾ ಅಧ್ಯಕ್ಷ ಬಾಹುಬಲಿ ನಾಗನೂರಿ, ರವೀಂದ್ರ ಚೌಗಲಾ, ರಾಜು ಖೇಮಲಾಪೂರೆ, ಸಂಜಯ ನಿಲಜಗಿ, ಅಕ್ಕಪ್ಪಾ ಖತಗಲ್ಲಿ, ಮಹಾವೀರ ಬಾಗಿ, ಅಶೋಕ ರಂಗೋಳಿ, ಸಂಜೀವ ಮಗದುಮ್ಮ, ಕಾಡಪ್ಪಾ ಮಗದುಮ್ಮ, ಜಿನ್ನಪ್ಪಾ ಸಪ್ತಸಾಗರ, ರಾಹುಲ ಖೇಮಲಾಪೂರೆ, ಬಿ.ಬಿ.ಕಂಠಿ, ಬಿ.ಇ.ಒ ಪ್ರಭಾವತಿ ಪಾಟೀಲ, ಶಿರಸ್ತೆದಾರ ಎನ್.ಆರ್.ಪಾಟೀಲ ಹಾಗೂ ಶ್ರಾವಕ, ಶ್ರಾವಕಿಯರು ಇದ್ದರು.