ಸ್ಥಳೀಯ ಕೋರ್ಟ ಆವರಣದಲ್ಲಿ ನಡೆದ ವಿಶ್ವ ಏಡ್ಸ್ ದಿನದ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯಾಧೀಶ ರಾಜಣ್ಣ ಸಂಕಣ್ಣವರ ಮಾತನಾಡಿದರು. ನ್ಯಾಯಾಧೀಶ ಆದಿತ್ಯ ಕಲಾಲ, ಸರಕಾರಿ ವಕೀಲ ಅನೀಲ ಕರೋಶಿ, ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ ಇತರರಿದ್ದರು.
ಹುಕ್ಕೇರಿ: ವಿಶ್ವ ಏಡ್ಸ್ ದಿನಾಚರಣೆ ಮೂಲಕ ಜನರಲ್ಲಿ ಈ ರೋಗದ ಅರಿವು ಮೂಡಿಸುವುದು ಮತ್ತು ಆ ರೋಗಿಗಳನ್ನು ಸಮಾಜದಲ್ಲಿ ಅಸ್ಪೃಶ್ಯತೆಯಿಂದ ನೋಡಬಾರದು. ಎಲ್ಲರಂತೆ ಅವರಿಗೂ ಬದುಕು ರೂಪಿಸಿಕೊಳ್ಳಲು ಸರಕಾರ ಅವಕಾಶ ಕಲ್ಪಿಸಿದೆ ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶ ರಾಜಣ್ಣ ಸಂಕಣ್ಣವರ ಹೇಳಿದರು.
ಸ್ಥಳೀಯ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕಾಡಳಿತ ಮತ್ತು ಆರೋಗ್ಯ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ನಿರೋಧಕ ಘಟಕದ ಆಶ್ರಯದಲ್ಲಿ ನಡೆದ ವಿಶ್ವ ಏಡ್ಸ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಿವ್ಹಿಲ್ ನ್ಯಾಯಾಧೀಶ ಆದಿತ್ಯ ಕಲಾಲ ಅವರು ಮಾತನಾಡಿ ಸರಕಾರದ ನಿಯಮಾವಳಿ ಪ್ರಕಾರ ಅಂತಹ ರೋಗಿಗಳನ್ನು ಕಡೆಗಣಿಸುವುದು, ಅವರಿಗೆ ಯಾವ ನೆರವು ನೀಡದಿರುವುದು ಅಪರಾಧವಾಗುತ್ತದೆ ಎಂದರು. ಪ್ರಾರಂಭದಲ್ಲಿ ಸರಕಾರಿ ಆಸ್ಪತ್ರೆ ಬಳಿ ಏಡ್ಸ ಜಾಗೃತಿ ಅಭಿಯಾನಕ್ಕೆ ನ್ಯಾಯಾಧೀಶ ಆದಿತ್ಯ ಕಲಾಲ ಅವರು ಚಾಲನೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ, ಉಪಾಧ್ಯಕ್ಷ ಬಿ. ಎಂ. ಜಿನರಾಳಿ, ಸಹ ಕಾರ್ಯದರ್ಶಿ ವಿಠ್ಠಲ ಘಸ್ತಿ, ಖಜಾಂಚಿ ಎ.ಎ.ಬಾಗೇವಾಡಿ, ತಾಲೂಕಾ ವೈದ್ಯಾಧಿಕಾರಿ ಉದಯ ಕುಡಚಿ, ಆರಕ್ಷಕ ನಿರೀಕ್ಷಕ ಮಹಾಂತೇಶ ಬಸ್ಸಾಪೂರೆ, ಅಪರ ಸರಕಾರಿ ವಕೀಲ ಅನೀಲ ಕರೋಶಿ, ಪ್ರಶಾಂತ ಮುನ್ನೋಳಿ ಆಪ್ತ ಸಮಾಲೋಚಕ ನಿಜಗುಣಿ ಪತ್ತಾರ, ಬಸವರಾಜ ಮರಲಿಂಗನವರ ಮತ್ತಿತರರಿದ್ದರು. ಮಹಾದೇವಿ ಜಕಮತಿ ಸ್ವಾಗತಿಸಿದರು.





