ಸಂವಿಧಾನ ಜಾರಿಯ ಸ್ಮರಣೆಯೇ ಗಣರಾಜ್ಯೋತ್ಸವ: ತಹಸೀಲ್ದಾರ್ ಬಲರಾಮ ಕಟ್ಟಿಮನಿ

ಹುಕ್ಕೇರಿ : ದೇಶದ ಸ್ವಾತಂತ್ರ್ಯಾ ನಂತರ ಆಡಳಿತ ವ್ಯವಸ್ಥೆ ಕೈಗೊಳ್ಳಲು ಸಂವಿಧಾನ ಜಾರಿಗೆ ತಂದ ಸ್ಮರಣೆಗಾಗಿ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ ಎಂದು ತಹಸೀಲ್ದಾರ ಬಲರಾಮ ಕಟ್ಟಿಮನಿ ಹೇಳಿದರು.

ಸ್ಥಳೀಯ ಎಸ್.ಕೆ ಹೈಸ್ಕೂಲ್ ಮೈದಾನದಲ್ಲಿ ತಾಲೂಕಾಡಳಿತದಿಂದ ನಡೆದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು. ನಾವು ಶಿಸ್ತು, ಸಂಯಮ ಅಭಿವೃದ್ಧಿ ಪರ ನಿಲುವು ಅಳವಡಿಸಿಕೊಳ್ಳಬೇಕು ಎಂದರು.

ಕ್ಯಾರಗುಡ್ಡ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಶ್ರೀಗಳು ಮಾತನಾಡಿ ಮಕ್ಕಳಿಗೆ ದೇಶದ ಸ್ವಾತಂತ್ರ್ಯಾ ಮತ್ತು ನಂತರದ ಬೆಳವಣಿಗೆಯ ಅರಿವು ಮೂಡಿಸಬೇಕು. ಶಿಕ್ಷಕರ ಜತೆಗೆ ಪಾಲಕರು ಆ ನಿಟ್ಟಿನಲ್ಲಿ ಶ್ರಮಿಸಬೇಕೆಂದರು.

ಗಣರಾಜ್ಯೋತ್ಸವ ವಿಶೇಷ ಕಾರ್ಯಕ್ರಮದ ವಿಜೇತರಿಗೆ ಪ್ರಶಸ್ತಿ ನೀಡಿ ಸತ್ಕರಿಸಿದರು. ಇದಕ್ಕೂ ಮುನ್ನ ನಡೆದ ಆಕರ್ಷಕ ಪಥ ಸಂಚಲನ ಜನರ ಮನ ಸೆಳೆಯಿತು.

ಮುಖಂಡರಾದ ಉದಯ ಹುಕ್ಕೇರಿ, ಕಬೀರ ಮಲಿಕ್, ಎಸ್.ನಂಜು0ಡಪ್ಪ, ಶ್ಯಾನೂರ ತಹಸೀಲ್ದಾರ, ಸುಭಾಸ ನಾಯಿಕ, ಉದಯ ಹುಕ್ಕೇರಿ, ಸುನೀಲ ಬೈರನ್ನವರ, ವಕೀಲ ಹರೀಶ ದೊಡ್ಡಲಿಂಗನವರ, ತಾ. ಪಂ ಇಒ ಟಿ. ಆರ್. ಮಲ್ಲಾಡದ, ಅಧಿಕಾರಿಗಳಾದ ಮಹಾಂತೇಶ ಬಸ್ಸಾಪೂರ, ಡಾ. ಉದಯ ಕುಡಚಿ, ಎನ್. ಆರ್. ಪಾಟೀಲ, ಎಚ್. ಹೊಳೆಪ್ಪಾ, ಆರ್. ಬಿ. ನಾಯ್ಕರ, ಈಶ್ವರ ಸಿದ್ನಾಳ, ಶಶಿಕಾಂತ ವಂದಾಳೆ, ಎ. ಆರ್.ಕಳ್ಳಿಮನಿ, ರಾಜಶೇಖರ ಪಟ್ಟಣಶೆಟ್ಟಿ, ಎ.ಎಸ್.ಪದ್ಮನ್ನವರ, ಸವಿತಾ ಹಲಕಿ, ಎಂ. ಡಿ. ಬಡಿಗೇರ ಮತ್ತಿತರರಿದ್ದರು. ಬಿಇಒ ಪ್ರಭಾವತಿ ಪಾಟೀಲ ಸ್ವಾಗತಿಸಿದರು. ಸುಭಾಸ ಘಸ್ತಿ ನಿರೂಪಿಸಿದರು. ಎ. ಐ. ಕೋಟಿವಾಲೆ ವಂದಿಸಿದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept