ಯುವ ಪೀಳಿಗೆಗೆ ಜೈನ ಆಚಾರ-ವಿಚಾರಗಳ ಅರಿವು ಅಗತ್ಯ: ಮಹಾವೀರ ನಿಲಜಗಿ

ಬೆಂಗಳೂರಿನ ಕರ್ನಾಟಕ ಜೈನ ಭವನದಲ್ಲಿ ಉತ್ತರ ಕರ್ನಾಟಕ ಜೈನ ಬಾಂಧವರು ಹಾಗೂ ಜನಗೌಡ ಪಿ. ಸುಭಾಸ ಟ್ರಸ್ಟ್ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಏಳನೇ ವರ್ಷದ ಸಂಕ್ರಾAತಿ ಸಂಭ್ರಮಾಚರಣೆ ವಿಶೇಷ ಕಾರ್ಯಕ್ರಮದಲ್ಲಿ ಮಹಾವೀರ ನಿಲಜಗಿ ಅವರನ್ನು ಸನಮಾನಿಸಿದರು. ಸಚಿವ ಡಿ.ಸುಧಾಕರ, ಡಿ.ಸುರೇಂದ್ರಕುಮಾರ, ಸುಭಾಸ ಜಿನಗೌಡ ಇತರರಿದ್ದರು.

ಹುಕ್ಕೇರಿ : ಜೈನ ಸಮಾಜದ ಯುವ ಜನಾಂಗಕ್ಕೆ ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ತಿಳಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆ ನಿಟ್ಟಿನಲ್ಲಿ ಶ್ರಮಿಸುವವರಿಗೆ ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಎಲ್ಲ ಸಹಕಾರ ನೀಡುವುದಾಗಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.

ಅವರು ಬೆಂಗಳೂರಿನ ಡಾ. ವೀರೇಂದ್ರ ಹೆಗಡೆ ಸಭಾಂಗಣ ಕರ್ನಾಟಕ ಜೈನ ಭವನದಲ್ಲಿ ಉತ್ತರ ಕರ್ನಾಟಕ ಜೈನ ಬಾಂಧವರು ಹಾಗೂ ಜನಗೌಡ ಪಿ. ಸುಭಾಸ ಟ್ರಸ್ಟ್ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಏಳನೇ ವರ್ಷದ ಸಂಕ್ರಾಂತಿ ಸಂಭ್ರಮಾಚರಣೆ ವಿಶೇಷ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು.

ಭಾರತೀಯ ಜೈನ ಮಿಲನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ.ಸುರೇಂದ್ರಕುಮಾರ ಮಾತನಾಡಿ ಒಳ್ಳೆಯ ಆಚಾರ ವಿಚಾರಗಳನ್ನು ರೂಡಿಸಿಕೊಂಡು ಗುರು ಹಿರಿಯರನ್ನು ಗೌರವಿಸುವ ಮಹಾವೀರ ನಿಲಜಗಿ ಅವರ ಸೇವಾ ಮನೋಭಾವದಿಂದ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆದಿದ್ದಾರೆ. ಇವರ ಆದರ್ಶ ಗುಣಗಳು ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದೆ ಎಂದರು.

ಯೋಜನೆ ಮತ್ತು ಸಾಂಖಿಕ ಸಚಿವ ಡಿ.ಸುಧಾಕರ, ಉತ್ತರ ಕರ್ನಾಟಕ ಜೈನ ಬಾಂಧವರ ಸಂಘಟನೆ ಅಧ್ಯಕ್ಷ ಸುಭಾಸ ಜಿನಗೌಡ, ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಜಿತೇಂದ್ರಕುಮಾರ, ಜೈನ ಮಿಲನ ಉಪಾಧ್ಯಕ್ಷೆ ಅನಿತಾ ಸುರೇಂದ್ರಕುಮಾರ, ಡಾ.ಪದ್ಮಿನಿ ನಾಗರಾಜು, ಬಾಹುಬಲಿ ಗೌರಾಜ, ವಿಲಾಸ ಪಾಸಣ್ಣವರ, ಶಾಂತಿನಾಥ ಹುದ್ದಾರ ಮತ್ತಿತರರಿದ್ದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept