ಬಡ, ಮಧ್ಯಮ ವರ್ಗದವರಿಗೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಬಹು ಉಪಯುಕ್ತ: ರಮೇಶ ಕತ್ತಿ

ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯ 2 ಲಕ್ಷ ರೂ ಚೆಕ್‌ನ್ನು ಪುಷ್ಪಾ ಬಡಿಗೇರ ಅವರಿಗೆ ರಮೇಶ ಕತ್ತಿ ವಿತರಿಸಿದರು. ಮಲ್ಲಿಕಾರ್ಜುನ ನರಸನ್ನವರ, ರಾಯಪ್ಪಾ ಡೂಗ ಮತ್ತಿತರರಿದ್ದರು.

ಹುಕ್ಕೇರಿ : ಮನೆ ಯಜಮಾನ ವಿಧಿವಶನಾದಾಗ ಆ ಕುಟುಂಬಕ್ಕೆ ಅಲ್ಪ ಸ್ವಲ್ಪ ಆರ್ಥಿಕ ಸಹಾಯ ದೊರಕಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ವಿಮಾ ಯೋಜನೆ ಜಾರಿಗೆ ತಂದಿದ್ದು ಗುಡಸ ಗ್ರಾಮದ ಪುಷ್ಪಾ ಬಡಿಗೇರ ಅವರ ಕುಟುಂಬಕ್ಕೆ ನೆರವಾಗಿದೆ ಎಂದು ಡಿಸಿಸಿ ಬ್ಯಾಂಕ ನಿರ್ದೇಶಕ ರಮೇಶ ಕತ್ತಿ ಹೇಳಿದರು.

ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಗುಡಸ ಪಿಕೆಪಿಎಸ್ ಮತ್ತು ಡಿಸಿಸಿ ಬ್ಯಾಂಕ ಇವರಿಂದ ಮಂಜೂರಿಯಾದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯ 2 ಲಕ್ಷ ರೂ ಚೆಕ್‌ನ್ನು ಪುಷ್ಪಾ ಬಡಿಗೇರ ಅವರಿಗೆ ವಿತರಿಸಿ ಮಾತನಾಡಿದರು.

ಕಳೆದ ವರ್ಷ ನಿಧನರಾಗಿದ್ದ ಸಂಘದ ಸದಸ್ಯ ಮೌನೇಶ್ವರ ಬಡಿಗೇರ ಅವರ ಪತ್ನಿಗೆ ಈ ವಿಮಾ ಯೋಜನೆ ಲಾಭ ದೊರಕಿದೆ. ಬಂದ ಹಣವನ್ನು ಠೇವಣಿ ಇಟ್ಟು ಅದರಿಂದ ಬರುವ ಬಡ್ಡಿಯನ್ನು ಕುಟುಂಬ ನಿರ್ವಹಣೆಗೆ ಬಳಸುವಂತೆ ತಿಳಿಸಿದರು.

ಗುಡಸ ಪಿಕೆಪಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ನರಸನ್ನವರ, ಉಪಾಧ್ಯಕ್ಷ ರಾಯಪ್ಪಾ ಡೂಗ, ನಿರ್ದೇಶಕರಾದ ಬಾಬು ಜಾರಕಿಹೊಳಿ, ಅಡಿವೆಪ್ಪಾ ಮಗದುಮ್ಮ, ಸಂಘದ ಸಿಇಒ ಎಸ್.ಎಸ್.ಮಲ್ಲಾಪೂರೆ ಇತರರಿದ್ದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept