ವಿದ್ಯುತ್ ಸಹಕಾರಿ ಸಂಘಕ್ಕೆ ಅಧಿಕ್ರತ ಜೋಡಣೆಗಳಿಂದ ಸಹಕಾರಿ: ಪ್ರಥ್ವಿ ಕತ್ತಿ

ತಾಲೂಕಿನ ಮೋದಗಾ ಗ್ರಾಮದಲ್ಲಿ ಸ್ಥಳಾಂತರಿತ ಟಿ.ಸಿ ಉದ್ಘಾಟನಾ ಕಾರ್ಯಕ್ರಮ. ಮಹಾವೀರ ನಿಲಜಗಿ, ಪೃಥ್ವಿ ಕತ್ತಿ, ಕಲಗೌಡ ಪಾಟೀಲ, ಬಸವಣ್ಣಿ ಲಂಕೆಪ್ಪಗೋಳ ಇತರರಿದ್ದರು

ಕೃಷಿ ಪಂಪಸೆಟ್‌ಗಳಿಗೆ ಅನಧಿಕೃತ ಜೋಡಣೆಯಿಂದ ವಿದ್ಯುತ್ ಪರಿವರ್ತಕ ಹಾಳಾಗುತ್ತದೆ.ಇದರಿಂದ ಆ ಪರಿವರ್ತಕ ವ್ಯಾಪ್ತಿಯ ಅಧಿಕೃತ ಜೋಡಣೆಗಾರ ರೈತರಿಗೆ ತೊಂದರೆ ಆಗುತ್ತದೆ.ಅದಕ್ಕಾಗಿ ಅನಧಿಕೃತ ಜೋಡಣೆ ಮಾಡುವವರ ವಿರುದ್ಧ ರೈತರು ವಿದ್ಯುತ್ ಸಹಕಾರಿ ಸಂಘಕ್ಕೆ ತಿಳಿಸುವಂತೆ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.

    ಮಂಗಳವಾರದಂದು ತಾಲೂಕಿನ ಮೋದಗಾ ಗ್ರಾಮದ 100 ಕೆ.ವ್ಹಿ.ಯ ಸ್ಥಳಾಂತರಿತ ಕೆಳೋಜಿ ವಿದ್ಯುತ ಪರಿವರ್ತಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಮೀನು ಮಧ್ಯದಲ್ಲಿ ಟಿ.ಸಿ ಅಳವಡಿಸಿದ್ದರಿಂದ ರಿಪೇರಿ ಅಥವಾ ಬದಲಾವಣೆಗೆ ತೊಂದರೆ ಆಗುತ್ತಿತ್ತು.ರೈತರ ಬೇಡಿಕೆ ಮೇರೆಗೆ ಬದಲಾವಣೆ ಮಾಡಲಾಗಿದೆ ಎಂದರು.

     ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಟಿ.ಸಿ ಉದ್ಘಾಟಿಸಿದರು. ನಂತರ ಮಾತನಾಡುತ್ತಾ ರೈತರು ಅಧಿಕೃತ ಜೋಡಣೆ ಮಾಡಿಕೊಂಡಲ್ಲಿ ಅವರ ಬೇಡಿಕೆಗೆ ಅನುಗುಣವಾಗಿ ಟಿ.ಸಿ ಅಳವಡಿಸುತ್ತೇವೆ. ಜತೆಗೆ ಸರಕಾರ ಅಧಿಕೃತ ಜೋಡಣೆಗೆ ಮಾತ್ರ ಹಣಕಾಸಿನ ಸೌಲಭ್ಯ ದೊರಕುತ್ತದೆ. ಅನಧಿಕೃತ ಜೋಡಣೆಯವರಿಂದ ಸಂಘಕ್ಕೆ ಆರ್ಥಿಕ ಹಾನಿಯಾಗುತ್ತದೆ. ಮನೆ, ವಾಣಿಜ್ಯ ಮಳಿಗೆಗಳ ವಿದ್ಯುತ್ ಬಿಲ್ಲ ಬಾಕಿ ಉಳಿಸಿಕೊಂಡವರು ಬೇಗನೆ ಹಣ ಸಂದಾಯ ಮಾಡಿ ಸಂಘದ ಏಳ್ಗೆಗೆ ಸಹಕರಿಸುವಂತೆ ವಿನಂತಿಸಿದರು.

 ಸಂಘದ ನಿರ್ದೇಶಕರಾದ ಕಲಗೌಡ ಪಾಟೀಲ, ಬಸವಣ್ಣಿ ಲಂಕೆಪ್ಪಗೋಳ, ರೆಸಿಡೆಂಟ್ ಇಂಜನೀಯರ ನೇಮಿನಾಥ ಖೇಮಲಾಪೂರೆ, ಅತ್ತಿಹಾಳ ಪಿಕೆಪಿಎಸ್ ಅಧ್ಯಕ್ಷ ಅವಿನಾಶ ಪಾಟೀಲ, ಎ.ಪಿ.ಎಂ.ಸಿ ನಿರ್ದೇಶಕ ಅಣ್ಣಾಸಾಹೇಬ ಬೆಣಿವಾಡಿ, ಭಾವೇಶ್ವರಿ ಟೃಸ್ಟಿನ ಅಧ್ಯಕ್ಷ ಬಾಹು ಪಾಟೀಲ, ಸದಸ್ಯರಾದ ಸಂತ್ರಾಮ ಪಾಟೀಲ, ಸಿದ್ದು ಪಾಟೀಲ, ಸಲಾಮವಾಡಿ ಗ್ರಾ.ಪಂ ಅಧ್ಯಕ್ಷ ಸಂಬಾ ಪಾಟೀಲ, ಮುಖಂಡರಾದ ವಿಷ್ಣು ಕವಳಿಕಟ್ಟಿ, ರಾಜು ಕವಳಿಕಟ್ಟಿ, ಸತೀಶ ಪಾಟೀಲ, ರವಿ ಪವಾರ, ಕಾಕಾ ಬಾಂದುರ್ಗೆ, ಜನಾರ್ದನ ಪಾಟೀಲ, ರವಿ ಕುರಾಡೆ ಮತ್ತಿತರರಿದ್ದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept