ಸ್ಥಳೀಯ ಹಿರೇಮಠದಲ್ಲಿ ಶಿವೈಕ್ಯ ಡಾ, ಶಾಮನೂರ ಶಿವಶಂಕರಪ್ಪನವರ ಅವರಿಗೆ ನುಡಿನಮನ ಸಲ್ಲಿಸಿದರು. ಚಂದ್ರಶೇಖರ ಶಿವಾಚಾರ್ಯರು, ಪೃಥ್ವಿ ಕತ್ತಿ, ಶೀತಲ ಬ್ಯಾಳಿ, ಚನ್ನಪ್ಪಾ ಗಜಬರಿ ಇತರರಿದ್ದರು.
ಹುಕ್ಕೇರಿ: ಸ್ಥಳೀಯ ಗುರುಶಾಂತೇಶ್ವರ ಹಿರೇಮಠದಲ್ಲಿ ದಾವಣಗೇರಿ ಶಾಸಕರು, ವೀರಶೈವ ಮಹಾಸಭಾ ಅಧ್ಯಕ್ಷರು ಆದ ಡಾ, ಶಾಮನೂರ ಶಿವಶಂಕರಪ್ಪನವರ ಅವರ ನಿಧನದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ ಅವರು ಪೂಜೆ ಸಲ್ಲಿಸಿ ಭಾವಪೂರ್ಣ ಶದ್ಧಾಂಜಲಿ ಸಲ್ಲಿಸಿದರು.
ಮಂಗಳವಾರ ಸಂಜೆ ಶ್ರೀಮಠದಲ್ಲಿ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ ಡಾ. ಶಾಮನೂರ ಶಿವಶಂಕರಪ್ಪನವರ ಅಗಲಿಕೆ ಲಿಂಗಾಯತ ಸಮಾಜಕ್ಕೆ ದೊಡ್ಡ ಅಘಾತ. ದಾವಣಗೇರಿಯಲ್ಲಿ ಅವರು ಸ್ಥಾಪಿಸಿದ ಭಾಪೂಜಿ ವಿದ್ಯಾ ಸಂಸ್ಥೆ ಲಕ್ಷಾಂತರ ಜನರಿಗೆ ಅಕ್ಷರ ಜ್ಞಾನದ ಜತೆಗೆ ಉದ್ಯೋಗವಕಾಶ ಕಲ್ಪಿಸಿದೆ. ಅವರ ವ್ಯಕ್ತಿತ್ವ, ಕಾಯಕ ನಿಷ್ಠೆ. ವ್ಯವಹಾರ ಚತುರತೆ ಇತರರಿಗೆ ಮಾದರಿ ಆಗಿತ್ತು ಎಂದರು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವ್ವಿ ಕತ್ತಿ ಮಾತನಾಡಿ ಶಾಸಕ ಶಾಮನೂರ ಶಿವಶಂಕರಪ್ಪನವರು ಕರ್ತವ್ಯ ಶಕ್ತಿಯಿಂದ ರಾಜಕೀಯ, ಉದ್ಯಮ, ವಾಣಿಜ್ಯ, ಶಿಕ್ಷಣದ ಮೂಲಕ ಸಮಾಜ ಸೇವೆ ಕೈಕೊಂಡು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ ಎಂದರು.
ವೀರಶೈವ ಮಹಾಸಭಾ ತಾಲೂಕಾ ಘಟಕದ ಅಧ್ಯಕ್ಷ ಶೀತಲ ಬ್ಯಾಳಿ, ಎಸ್.ಕೆ. ಪಬ್ಲಿಕ್ ಸ್ಕೂಲಿನ ಅಧ್ಯಕ್ಷ ಪಿಂಟು ಶೆಟ್ಟಿ, ಮುಖಂಡರಾದ ಚನ್ನಪ್ಪಾ ಗಜಬರ ಸೇರಿದಂತೆ ಮಠದ ಭಕ್ತರಿದ್ದರು.





