ಬಡ, ಮಧ್ಯಮ ವರ್ಗದವರ ಆರ್ಥಿಕತೆಗೆ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಸಹಕಾರ: ಪ್ರಥ್ವಿ ಕತ್ತಿ.

ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಅರಣ್ಯ ಸಿದ್ದೇಶ್ವರ ದೇವಸ್ಥಾನ ಜೀಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾದವರಿಂದ ಮಂಜೂರಿಯಾದ ಧನ ಸಹಾಯ ಪತ್ರವನ್ನು ಪೃಥ್ವಿ ಕತ್ತಿ ದೇವಸ್ಥಾನದವರಿಗೆ ಹಸ್ತಾಂತರಿಸಿದರು. ಮನೋಹರ ಕರಿಗಾರ, ರಮೇಶ ಬಾಗೇವಾಡಿ, ಫಕೀರೇಶ ಜಂಗಳಿ ಇತರರಿದ್ದರು

ಹುಕ್ಕೇರಿ:ಬಡ ಹಾಗೂ ಮಧ್ಯಮ ವರ್ಗದವರ ಆರ್ಥಿಕ ಅಭಿವೃದ್ಧಿಗೆ ನೆರವು ನೀಡಿ ಅವರನ್ನು ಬೆಳೆಸಿ ತಾನು ಬೆಳೆದ ಗರಿಮೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಘಕ್ಕೆ ಸಲ್ಲುತ್ತದೆ.ಇದರ ರೂಪುರೇಷೆ ತಯಾರಿಸಿ ರಾಜ್ಯಾದ್ಯಂತ ಪಸರಿಸುವಂತೆ ಮಾಡಿದ ಧರ್ಮಸ್ಥಳ ಪೀಠಾಧಿಕಾರಿ ಡಾ.ವಿರೇಂದ್ರ ಹೆಗಡೆ ಅವರು ಸ್ಮರಣೀಯರಾಗಿದ್ದಾರೆಂದು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.
ಅವರು ಗುರುವಾರದಂದು ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಅರಣ್ಯ ಸಿದ್ದೇಶ್ವರ ದೇವಸ್ಥಾನ ಸಭಾಮಂಟಪ ಮತ್ತು ವಿವಿಧ ಕಾಮಗಾರಿಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಡಾ|| ವಿರೇಂದ್ರ ಹೆಗ್ಗಡೆ ಯವರು ಮಂಜೂರಾತಿ ನೀಡಿದ 1,50,000/ – ರೂಗಳ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.

ಆರ್ಥಿಕತೆಯ ಜತೆಗೆ ಗ್ರಾಮಗಳ ಅಭಿವೃದ್ಧಿಗೆ ಪೂರಕವಾದ ಕೆರೆ-ಕಟ್ಟೆಗಳು, ಆರೋಗ್ಯ ಶಿಬಿರ ಮತ್ತು ಸಮುದಾಯ ಭವನಗಳ ನಿರ್ಮಾಣಕ್ಕೆ ಧನ ಸಹಾಯ ನೀಡುತ್ತಿರುವರು.ಇದೀಗ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧನ ಸಹಾಯ ನೀಡಿರುವುದು ಸಂತಸ ತಂದಿದೆ ಎಂದರು.
ದೇವಸ್ಥಾನ ಸಮಿತಿಯ ಮನೋಹರ ಗಂಗಪ್ಪ ಕರಿಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಮೇಶ ಬಾಗೇವಾಡಿ, ಒಕ್ಕೂಟದ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳಿದ್ದರು. ವಿದ್ಯಾ ಮಾಡಲಗಿ ಸ್ವಾಗತಿಸಿದರು. ಫಕ್ಕೀರೇಶ ಜಂಗಳಿ ನಿರೂಪಿಸಿದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept