ಹುಕ್ಕೇರಿ ಹೊರವಲಯದ ಅವರ ಫಾರ್ಮಹೌಸ್‌ನಲ್ಲಿ ಸುದ್ದಿಗೋಷ್ಠಿ ಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ರವದಿ ಮಾತನಾಡಿದರು. ರವಿ ಕರಾಳೆ, ಸೋಮಶೇಖರ ಮಠಪತಿ, ಬಸವರಾಜ ನಾಯಿಕ, ಚಂದ್ರಶೇಖರ ಗಂಗನ್ನವರ ಇತರರಿದ್ದರು.
ತಾಲೂಕಿನ ಲಿಂಗಾಯತ ಮುಖಂಡರು ಸ್ಥಳೀಯ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಬೆಂಬಲಿಸುತ್ತಿದೆ ಎಂದು ಕಾಂಗ್ರೆಸ್ ಹುಕ್ಕೇರಿ ಬ್ಲಾಕ್ ಅಧ್ಯಕ್ಷ ವಿಜಯ ರವದಿ ಹೇಳಿದರು.
ರವಿವಾರ ಸಂಜೆ ಹುಕ್ಕೇರಿ ಹೊರವಲಯದ ಅವರ ಫಾರ್ಮಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಲಿಂಗಾಯತ ಮುಖಂಡರ ಬೆಂಬಲ ಕೇವಲ ಒಂದು ಬಣಕ್ಕೆ ಸೀಮಿತವಾದಂತೆ ಸುದ್ದಿ ಹರಿದಾಡುತ್ತಿದೆ. ಆದರೆ ಇದು ಸತ್ಯಕ್ಕೆ ದೂರವಾದ ಸಂಗತಿ. ಸಹಕಾರಿ ವಲಯದ ಚುನಾವಣೆ ಜಾತಿ ಮತ್ತು ಪಕ್ಷ ರಹಿತವಾಗಿರುತ್ತದೆ. ಮತದಾರರು ತಮಗೆ ಬೇಕಾದವರನ್ನು ಬೆಂಬಲಿಸುತ್ತಾರೆ. ಸಹಕಾರಿ ಸಂಘ ಸಂಸ್ಥೆಗಳ ಅಭಿವೃದ್ಧಿ ದೃಷ್ಟಿಯಿಂದ ಅಪ್ಪಣ್ಣಗೌಡ ಸಹಕಾರಿ ಪೆನೆಲ್‌ಗೆ ಬೆಂಬಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಮುಖಂಡ ರವಿ ಕರಾಳೆ ಮಾತನಾಡಿ ಜಾರಕಿಹೊಳಿ ಅವರಿಂದ ಲಿಂಗಾಯತರಿಗೆ ಯಾವುದೇ ಅನ್ಯಾಯವಾಗಿಲ್ಲ. ಎಲ್ಲ ಸಮಾಜಗಳನ್ನು ಸರಿದೂಗಿಸಿಕೊಂಡು ಹೋಗುವ ಮನೋಭಾವದ ಅವರು ಸ್ಥಳೀಯ ಕೆಲ ಮುಖಂಡರು ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ ಮತ್ತು ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆಗಳ ಹಾನಿ ತಪ್ಪಿಸಲು ಬೆಂಬಲ ಕೋರಿದ್ದರಿಂದ ಹುಕ್ಕೇರಿ ತಾಲೂಕಿನ ಸಹಕಾರಿ ವಲಯಕ್ಕೆ ಪ್ರವೇಶಿಸಿದ್ದಾರೆಂದರು.
ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ ಗಂಗನ್ನವರ, ಶಿವಲಿಂಗ ವಂಟಮೂರಿ, ಸೋಮಶೇಖರ ಮಠಪತಿ, ತಮ್ಮಗೌಡ ಪಾಟೀಲ, ಪುರಸಭೆ ಮಾಜಿ ಸದಸ್ಯ ಬಸಗೌಡ ಪಾಟೀಲ ಮತ್ತಿತರರು ಮಾತನಾಡಿ ಬುದ್ಧ, ಬಸವ, ಅಂಬೇಡ್ಕರ ಎಂಬ ಘೋಷವಾಕ್ಯದೊಂದಿಗೆ ಸರ್ವ ಧರ್ಮೀಯರ ಅಭಿವೃದ್ಧಿಗೆ ಸತೀಶ ಜಾರಕಿಹೊಳಿ ಅವರು ಶ್ರಮಿಸುತ್ತಿದ್ದಾರೆಂದರು.ಅದಕ್ಕಾಗಿ ಅವರ ನೇತೃತ್ವದ ಪೆನಲ್‌ಗೆ ಬೆಂಬಲಿಸುವುದಾಗಿ ತಿಳಿಸಿದರು.

ತಾ.ಪಂ ಮಾಜಿ ಸದಸ್ಯ ಬಸವರಾಜ ನಾಯಿಕ, ಹುಕ್ಕೇರಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಸಿದ್ದಪ್ಪಾ ನಾಯಿಕ, ವಿಠ್ಠಲ ಕುಂದನ್ನವರ, ಚಂದ್ರಶೇಖರ ಗಂಡ್ರೊಳ್ಳಿ ಮತ್ತಿತರರಿದ್ದರು.





