ತಾಲೂಕಿನ ಅವರಗೋಳ ಗ್ರಾಮದ ಪಿಕೆಪಿಎಸ್ ನ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಬಸಲಿಂಗ ಕರಗುಪ್ಪಿ ಉದ್ಘಾಟಿಸಿದರು. ಮಾರುತಿ ನಾಗನ್ನವರ, ರವೀಂದ್ರ ಕಲ್ಲಟ್ಟಿ, ಸುರೇಶ ಸರನಾಯಿಕಶಿತರರಿದ್ದರು.
ಹುಕ್ಕೇರಿ:ತಾಲೂಕಿನ ಅವರಗೋಳ ಗ್ರಾಮದ ಪಿಕೆಪಿಎಸ್ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 13 ಲಕ್ಷ 80 ಸಾವಿರ ರೂ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಸಲಿಂಗ(ತಮ್ಮಣ್ಣಾ) ಕರಗುಪ್ಪಿ ಹೇಳಿದರು.
ಅವರು ಸೋಮವಾರದಂದು ಅವರಗೋಳ ಗ್ರಾಮದ ಪಿಕೆಪಿಎಸ್ನ 80 ನೇ ವರ್ಷದ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 32 ಲಕ್ಷ 75 ಸಾವಿರ ಕಾಯ್ದಿಟ್ಟ ನಿಧಿ ಇರುವ ಸಂಘ 1094 ಸದಸ್ಯರನ್ನು ಹೊಂದಿದೆ. 7 ಕೋಟಿ 1 ಲಕ್ಷ ರೂ ಸಾಲ ವಿತರಿಸಿದೆ ಎಂದರು. 8 ಕೋಟಿ 78 ಲಕ್ಷ ರೂ ದುಡಿಯುವ ಬಂಡವಾಳ ಇದ್ದು ಪ್ರಸಕ್ತ ವರ್ಷ ಸದಸ್ಯರಿಗೆ 7% ಡಿವಿಡೆಂಡ್ ಹಂಚಲು ನಿರ್ಧರಿಸಿದೆ ಎಂದು ತಿಳಿಸಿದರು. ಇತ್ತೀಚೆಗೆ ಸಂಘದ ಕಾರ್ಯ ವ್ಯಾಪ್ತಿಯಲ್ಲಿದ್ದ ನೊಗನಿಹಾಳ ಗ್ರಾಮದ ಸದಸ್ಯರನ್ನು ಹೊಸದಾಗಿ ನೊಗನಿಹಾಳ ಗ್ರಾಮದಲ್ಲಿ ಪ್ರಾರಂಭವಾದ ಪಿಕೆಪಿಎಸ್ಗೆ ಅವರನ್ನು ವರ್ಗಾಯಿಸಲು ಸಭೆಯಲ್ಲಿ ಅನುಮತಿ ಪಡೆದುಕೊಂಡರು. ಸಂಘದ ಸದಸ್ಯರು ನಿಧನರಾದಲ್ಲಿ ಅವರಿಗೆ 2 ಸಾವಿರ ರೂ ಅಂತ್ಯ ಸಂಸ್ಕಾರಕ್ಕೆ ನೀಡಲು ಸಭೆಯಲ್ಲಿ ಅನುಮತಿ ಪಡೆದುಕೊಂಡರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಗೋಪಾಲ ಡೋನವಾಡಿ ವಾರ್ಷಿಕ ವರದಿ ಮಂಡಿಸಿದರು.

ಸಂಘದ ಉಪಾಧ್ಯಕ್ಷ ಮಾರುತಿ ನಾಗನ್ನವರ, ನಿರ್ದೇಶಕರಾದ ರವೀಂದ್ರ ಕಲ್ಲಟ್ಟಿ, ಸುರೇಶ ಸರನಾಯಿಕ, ಸದಾಶಿವ ಕರಗುಪ್ಪಿ, ಈರಪ್ಪಾ ತೊದಲ, ನಿರ್ವಾಣಿ ಮುಂಡಾಶಿ, ನಾಗರಾಜ ಪಾಟೀಲ, ದಯಾನಂದ ಖಾತೇದಾರ, ರಾಜಶ್ರೀ ಪಾಟೀಲ, ಶೈಲಾ ಬಾಳೋಜಿ ಮತ್ತಿತರರಿದ್ದರು. ಗೋಪಾಲ ಡೋನವಾಡಿ ಸ್ವಾಗತಿಸಿ, ನಿರೂಪಿಸಿದರು.





