ಸಮಾಜಮುಖಿ ಕಾರ್ಯಗಳಿಗೆ ಹೆಸರಾಗಿದೆ ಹುಲ್ಲೋಳಿಯ ಅರಿಹಂತ ಸೌಹಾರ್ದ ಸಹಕಾರಿ: ಸಂಪಾದನಾ ಶ್ರೀಗಳು

arihant-souharda-cooperative-hullooli-social-service

ತಾಲೂಕಿನ ಹುಲ್ಲೋಳಿ ಗ್ರಾಮದ ಅರಿಹಂತ ಸೌಹಾರ್ದ ಸಹಕಾರಿ ಸಂಘದ 26ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಸಂಪಾದನಾ ಶ್ರೀಗಳು ಉದ್ಘಾಟಿಸಿದರು. ಭರಮಪ್ಪಾ ಚೌಗಲಾ, ಬಾಹುಬಲಿ ನಾಗನೂರಿ, ಪಿ.ಆರ್.ಚೌಗಲಾ, ಆನಂದ ಚೌಗಲಾ ಇತರರಿದ್ದರು.

ಹುಕ್ಕೇರಿ:  ತಾಲೂಕಿನ ಹುಲ್ಲೋಳಿ ಗ್ರಾಮದ ಅರಿಹಂತ ಸೌಹಾರ್ದ ಸಹಕಾರಿ ಸಂಘ ಹೆಮ್ಮರವಾಗಿ ಬೆಳೆದು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಕಾರ್ಯವೆಂದು ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮಿಗಳು ಹೇಳಿದರು.

  ರವಿವಾರದಂದು ಗ್ರಾಮದ ಪ್ರಧಾನ ಕಾರ್ಯಾಲಯದಲ್ಲಿ ನಡೆದ 26ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು. ಹಣ ಗಳಿಸುವುದಕ್ಕಿಂತ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಪ್ರಾರಂಭಿಸಿದ ವಿದ್ಯಾ ಸಂಸ್ಥೆ, ಹಳ್ಳಿಗರಿಗೆ ಶುದ್ಧ ಕುಡಿಯುವ ನೀರು ಕಡಿಮೆ ದರದಲ್ಲಿ ಪೂರೈಸುತ್ತಿರುವುದು ಸೇರಿದಂತೆ ಹತ್ತು ಹಲವು ಜನಪರ ಕಾರ್ಯಗಳನ್ನು ಈ ಸಂಘ ಮಾಡಿದ್ದು ಮೆಚ್ಚುಗೆಯ ಸಂಗತಿ ಎಂದರು.

   ಸಂಘದ ಅಧ್ಯಕ್ಷ ಭರಮಪ್ಪಾ ಚೌಗಲಾ, ಹಿರಿಯ ನಿರ್ದೇಶಕರಾದ ಜಿನ್ನಪ್ಪಾ ಸಪ್ತಸಾಗರ, ಪಿ.ಆರ್.ಚೌಗಲಾ ಮಾತನಾಡಿ 26 ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದ ಸಹಕಾರಿ ಇದೀಗ 5 ಕೋಟಿ 72 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದರು. ಇದಕ್ಕೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯ ನಿಸ್ವಾರ್ಥ ಸೇವೆ ಹಾಗೂ ಸದಸ್ಯರ ಹಾಗೂ ಗ್ರಾಹಕರ ಪ್ರಾಮಾಣಿಕತೆ ಕಾರಣವೆಂದರು.ದರೂರ ಶಾಖೆಯ ಸುರೇಶ ಮಾಯನ್ನವರ ಮಾತನಾಡಿದರು.

  ಸಂಘದ ಪ್ರಧಾನ ವ್ಯವಸ್ಥಾಪಕ ಆನಂದ ಚೌಗಲಾ ಮತ್ತು ಆಂತರಿಕ ಲೆಕ್ಕ ಪರಿಶೋಧಕ ಮಹಾವೀರ ಚೌಗಲಾ ಮಾತನಾಡಿ 18430 ಸದಸ್ಯರನ್ನು ಹೊಂದಿದ ಸಂಘ 296 ಕೋಟಿ 63 ಲಕ್ಷ ರೂ ಠೇವು ಸಂಗ್ರಹಿಸಿದೆ. ರೂ 214 ಕೋಟಿ 9 ಲಕ್ಷ ಸಾಲ ವಿತರಿಸಿದೆ ಎಂದರು. 327 ಕೋಟಿ 82 ಲಕ್ಷ ರೂ ದುಡಿಯುವ ಬಂಡವಾಳ ಹೊಂದಿದ ಸಂಘ ಪ್ರಧಾನ ಕಚೇರಿ ಸೇರಿದಂತೆ 13 ಶಾಖೆಗಳನ್ನು ತೆರೆಯಲಾಗಿದ್ದು ಮುಂಬರುವ ದಿನಗಳಲ್ಲಿ ಇನ್ನಷ್ಟೂ ಶಾಖೆ ಪ್ರಾರಂಭಿಸುವ ಚಿಂತನೆ ಮಾಡಲಾಗಿದೆ ಎಂದು ವಾರ್ಷಿಕ ವರದಿ ಮಂಡಿಸಿದರು.

   ಇದೇ ಸಂದರ್ಭದಲ್ಲಿ ಗ್ರಾಮದ ಮತ್ತು ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳನ್ನು, ಶ್ರೀಗಳನ್ನು, ಅತ್ಯುತ್ತಮ ಶಾಖೆಯ ಸಲಹಾ ಸಮಿತಿ ಸದಸ್ಯರನ್ನು ಸತ್ಕರಿಸಿದರು.

  ಉಪಾಧ್ಯಕ್ಷ ಬಾಹುಬಲಿ ನಾಗನೂರಿ, ನಿರ್ದೇಶಕರಾದ ರಾಮಪ್ಪಾ ಗೋಟೂರಿ, ಅಶೋಕ ಚೌಗಲಾ, ಬಾಬು ಅಕ್ಕಿವಾಟೆ, ಶೃತಿ ಪಾಟೀಲ, ಸುಮತಿ ಚೌಗಲಾ, ಮಾಯಪ್ಪಾ ಹೊಳೆಪ್ಪಗೋಳ, ಬಸವರಾಜ ಪಾಟೀಲ, ಬಾಳಪ್ಪಾ ಸಂಕೇಶ್ವರಿ, ಅರುಣ ಚೌಗಲಾ, ಶಾಖಾ ವ್ಯವಸ್ಥಾಪಕ ಅಜಿತ ಚೌಗಲಾ ಹಾಗೂ ಶಾಖಾ ಸಮಿತಿ ಪದಾಧಿಕಾರಿಗಳಿದ್ದರು. ಹಿರಿಯ ನಿರ್ದೇಶಕ ರವೀಂದ್ರ ಚೌಗಲಾ ಸ್ವಾಗತಿಸಿದರು. ಜಯಪಾಲ ಚೌಗಲಾ ನಿರೂಪಿಸಿದರು. ಪ್ರಕಾಶ ಚೌಗಲಾ ವಂದಿಸಿದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept