ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕಿಗೆ 2.75ಕೋಟಿ ರೂ ನಿವ್ವಳ ಲಾಭ: ಪವನ ಕತ್ತಿ ಹೊಸದಾಗಿ 5 ಶಾಖೆಗಳಿಗೆ ಪ್ರಸ್ತಾವಣೆ

ತಾಲೂಕಿನ ಬೆಲ್ಲದ ಬಾಗೇವಾಡಿಯ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಅಧ್ಯಕ್ಷ ಪವನ ಕತ್ತಿ ಮಾತನಾಡಿದರು. ಆರ್.ಬಿ.ಮುನ್ನೋಳಿ, ಎಮ್.ಎಸ್.ಬೆಲ್ಲದ, ಎಮ್.ಪಿ.ಖೇಮಲಾಪೂರೆ, ಸುರೇಶ ಬೆಲ್ಲದ, ಮುರುಗೇಶ ಕತ್ತಿ ಇತರರಿದ್ದರು.

ಹುಕ್ಕೇರಿ:ಸದಸ್ಯರ, ಗ್ರಾಹಕರ ಮತ್ತು ಠೇವಣಿದಾರರ ಸಹಕಾರ ಹಾಗೂ ಪ್ರಾಮಾಣಿಕ ವ್ಯವಹಾರದಿಂದ ತಾಲೂಕಿನ ಬೆಲ್ಲದ ಬಾಗೇವಾಡಿಯ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ್ ಪ್ರಸಕ್ತ ವರ್ಷ 2 ಕೋಟಿ 75 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಪವನ ಕತ್ತಿ ತಿಳಿಸಿದರು.

       ಬುಧವಾರದಂದು ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ನಡೆದ ಬ್ಯಾಂಕಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.21 ಸಾವಿರದಷ್ಟು ಮೆಂಬರರನ್ನು ಹೊಂದಿರುವ ಬ್ಯಾಂಕ್ 491 ಕೋಟಿ 59 ಲಕ್ಷ ರೂ ಠೇವಣಿ ಸಂಗ್ರಹಿಸಿದೆ.276 ಕೋಟಿ 53 ಲಕ್ಷ ರೂ ಸಾಲ ವಿತರಿಸಿದ್ದು, 40 ಕೋಟಿ 29 ಲಕ್ಷ ರೂ ಸ್ವಂತ ಬಂಡವಾಳ ಹೊಂದಿದೆ ಎಂದರು.ಸದಸ್ಯರಿಗೆ ಶೇಕಡಾ 15 ರಷ್ಟು ಲಾಭಾಂಶ ಹಂಚಲಾಗಿದೆ ಎಂದು ಹೇಳಿದರು. 7 ಜಿಲ್ಲಾ ಕಾರ್ಯ ವ್ಯಾಪ್ತಿ ಹೊಂದಿರುವ ಬ್ಯಾಂಕ್ 27 ಶಾಖೆಗಳನ್ನು ಹೊಂದಿದ್ದು ಮುಂಬರುವ ದಿನಗಳಲ್ಲಿ 5 ನೂತನ ಶಾಖೆಗಳನ್ನು ತೆರೆಯಲು ನಿಶ್ಚಯಿಸಿದ್ದು, ರಾಜ್ಯಾದ್ಯಂತ ಬ್ಯಾಂಕಿನ ಕಾರ್ಯ ವ್ಯಾಪ್ತಿ ವಿಸ್ತರಿಸಲು ಚಿಂತನೆ ಇದೆ ಎಂದರು.ಈ ವರ್ಷ 5 ಕೋಟಿ 91 ಲಕ್ಷ ಆದಾಯ ಗಳಿಸಿದ ಬ್ಯಾಂಕ್ ಆದಾಯಕರ ಮತ್ತು ಇತರ ಶಾಸನ ಬದ್ಧ ಪ್ರಾವಧಾನಗಳನ್ನು ತೆಗೆದು 2 ಕೋಟಿ 75 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದರು.

    ಸಂಜಯ ಇಂಚಲ ಅವರು ಮಾತನಾಡಿ ವೈಯಕ್ತಿಕ ಮತ್ತು ಸಾಲದ ಬಾಬತ್ತು ವಿಮಾ ಯೋಜನೆಯಿಂದ ಆಗುವ ಲಾಭವನ್ನು ವಿವರಿಸಿದರು. ಬ್ಯಾಂಕಿನ ಆಡಳಿತ ಸಲಹೆಗಾರರಾದ ಎಂ.ಕೆ.ಅಮ್ಮಣಗಿ ಅವರು ವಾರ್ಷಿಕ ವರದಿ ಮಂಡಿಸಿದರು.

       ಉಪಾಧ್ಯಕ್ಷ ಆರ್.ಬಿ.ಮುನ್ನೋಳಿ, ನಿರ್ದೇಶಕರಾದ ಎಮ್.ಎಸ್.ಬೆಲ್ಲದ, ಎಮ್.ಪಿ.ಖೇಮಲಾಪೂರೆ, ಎಸ್.ವಿ.ಹಾಗರಗಿ, ಸುರೇಶ ಬೆಲ್ಲದ, ಮುರುಗೇಶ ಕತ್ತಿ, ಎಸ್.ಡಿ.ಪಠಾಣ, ಕಿಶೋರ ಕತ್ತಿ, ಎಂ.ಎಸ್.ಶ್ರೀಖಂಡೆ, ವ್ಹಿ.ಎಸ್.ಶೆಟ್ಟಿ, ಎಸ್.ಎಸ್.ತೇರದಾಳ, ಮುಖಂಡರಾದ ಪೃಥ್ವಿ ಕತ್ತಿ, ಸಂದೀಪ ಕತ್ತಿ, ಅಶೋಕ ಬೆಲ್ಲದ, ಶ್ರೀಕಾಂತ ಖೇಮಲಾಪೂರೆ, ಅಪ್ಪಾಸಾಹೇಬ ಖೇಮಲಾಪೂರೆ ಮತ್ತಿತರರಿದ್ದರು. ಹಿರಿಯ ವ್ಯವಸ್ಥಾಪಕ ಶ್ರೀಶೈಲ ಚರಾಟಿ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಸುನೀಲ ಬೆಲ್ಲದ ನಿರೂಪಿಸಿದರು. ನಿರ್ದೇಶಕ ವಿನಾಯಕ ಬುರ್ಜಿ ವಂದಿಸಿದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept