ಪಟ್ಟಣದ ಅರ್ಬನ್ ಬ್ಯಾಂಕಿನ 97 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಅಧ್ಯಕ್ಷ ಚಂದ್ರಶೇಖರ ಪಾಟೀಲ ಉದ್ಘಾಟಿಸಿದರು. ವಿಜಯ ರವದಿ, ಸೋಮಣ್ಣ ಗಂಧ, ಶಿವಾನಂದ ನೂಲಿ, ಮಲ್ಲಿಕಾರ್ಜುನ ತೇರಣಿ ಮತ್ತಿತರರಿದ್ದರು.
ಹುಕ್ಕೇರಿ:ಶತಮಾನೋತ್ಸವದ ಸಂಭ್ರಮಕ್ಕೆ ಅಣಿಯಾಗುತ್ತಿರುವ ಪಟ್ಟಣದ ಅರ್ಬನ್ ಬ್ಯಾಂಕ್ ಸದಸ್ಯರ ಮತ್ತು ಗ್ರಾಹಕರ ಸಹಕಾರದಿಂದ ಪ್ರಗತಿ ಪಥದತ್ತ ಸಾಗುತ್ತಿದೆ. ಶತಮಾನ ಆಚರಿಸಿಕೊಳ್ಳುವ ಮುನ್ನ ಠೇವು ಮತ್ತು ಸಾಲ ನೀಡಿಕೆ ಹೆಚ್ಚಳ ಮಾಡುವ ಮೂಲಕ ಲಾಭದ ಪ್ರಮಾಣ ಹೆಚ್ಚಿಸುತ್ತೇವೆ ಎಂದು ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೇಳಿದರು.
ಶನಿವಾರದಂದು ಸ್ಥಳೀಯ ಎಸ್.ಕೆ ಹೈಸ್ಕೂಲಿನ ಚಿಣ್ಣರ ಸಭಾಭವನದಲ್ಲಿ ೯೭ ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಪ್ರಧಾನ ಕಚೇರಿ ಸೇರಿದಂತೆ ಜಿಲ್ಲೆಯ ಆಯ್ದ ೬ ಪ್ರದೇಶದಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ ಎಂದರು. ಈ ಬ್ಯಾಂಕ್ ರಿಸರ್ವ ಬ್ಯಾಂಕ್ ನಿಯಮಾವಳಿ ಪ್ರಕಾರ ಕಾರ್ಯ ನಿರ್ವಹಿಸುತ್ತಿರುವುದರಿಂದ ಸೌಹಾರ್ದ ಸಹಕಾರಿಗಳಂತೆ ಇದರ ಬೆಳವಣಿಗೆ ಆಗುವುದಿಲ್ಲ. ಹಂತ ಹಂತವಾಗಿ ಅಭಿವೃದ್ಧಿಯೆಡೆಗೆ ಕೊಂಡೊಯ್ಯಬೇಕೆಂದು ತಿಳಿಸಿದರು.
ನಿರ್ದೆಶಕ ರಾಜು ಬೋಳಮಲ್ಲ ಮಾತನಾಡಿ ಬ್ಯಾಂಕಿನ ಗುರಿ ತಲುಪಲು ರಾಷ್ಟ್ರೀಕ್ರತ ಬ್ಯಾಂಕುಗಳಂತೆ ಎಲ್ಲ ಸೌಲಭ್ಯ ನೀಡಬೇಕಾಗಿದೆ. ಕಾರಣ ಆ ನಿಟ್ಟಿನಲ್ಲಿ ಆಡಳಿತ ಮಂಡಳಿ ಶ್ರಮಿಸುತ್ತಿದೆ. ಇನ್ನೆರಡು ವರ್ಷದಲ್ಲಿ ಬ್ಯಾಂಕಿನ ಸದಸ್ಯರಿಗೆ ಹುಕ್ಕೇರಿ ಬ್ಯಾಂಕ್ ನಮ್ಮದು ಎಂದು ಹೇಳಿಕೊಳ್ಳುವಂತಹ ಪರಿಸ್ಥಿತಿ ನಿರ್ಮಿಸುತ್ತೇವೆ ಎಂದು ಭರವಸೆಯಿತ್ತರು.
ಪ್ರಧಾನ ವ್ಯವಸ್ಥಾಪಕ ಕೆ.ಬಿ.ಬಂದಾಯಿ ವರದಿ ವಾಚನ ಮಂಡಿಸಿದರು. ಇದೇ ಸಂದರ್ಭದಲ್ಲಿ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಿದರು. ಸದಸ್ಯರು ಬ್ಯಾಂಕಿನ ಪ್ರಗತಿಗೆ ಸಲಹೆ ಸೂಚನೆ ನೀಡಿದರು.
ಉಪಾಧ್ಯಕ್ಷ ಪ್ರಭು ಸಾಂಬಾರೆ, ನಿರ್ದೇಶಕರಾದ ವಿಜಯ ರವದಿ, ಸೋಮಣ್ಣ ಗಂಧ, ಶಿವಾನಂದ ನೂಲಿ, ಸೋಮಶೇಖರ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ತೇರಣಿ, ಸಿದ್ದೇಶ್ವರ ಹೆದ್ದೂರಶೆಟ್ಟಿ, ಶಂಕರಗೌಡ ಪಾಟೀಲ, ಮೌನೇಶ್ವರ ಪೋತದಾರ, ಸುಭಾಷ ಪಾಟೀಲ, ಮಹಾದೇವ ಖಡಬಡಿ, ಮಲ್ಲಿಕಾರ್ಜುನ ಕೋಟ್ಯಾಗೋಳ, ಸುವರ್ಣಾ ಹುಂಡೇಕಾರ ವೇದಿಕೆಯಲ್ಲಿದ್ದರು. ಪ್ರಧಾನ ವ್ಯವಸ್ಥಾಪಕ ಕೆ.ಬಿ.ಬಂದಾಯಿ ಸ್ವಾಗತಿಸಿದರು. ಮಹಾಂತೇಶ ಪಾಟೀಲ ನಿರೂಪಿಸಿದರು. ಬಸವರಾಜ ಗುಳ್ಳ ವಂದಿಸಿದರು.




