ದೈಹಿಕ & ಮಾನಸಿಕ ಕ್ಷಮತೆಗೆ ಕ್ರೀಡೆಗಳು ಅವಶ್ಯ: ಉಪನಿರ್ದೆಶಕ ಪಿ.ಆಯ್.ಭಂಡಾರಿ

ಹುಕ್ಕೇರಿ:ದೈಹಿಕ ಮತ್ತು ಮಾನಸಿಕ ಕ್ಷಮತೆಗೆ ಕ್ರೀಡೆಗಳು ಅವಶ್ಯ. ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಚಿಕ್ಕೋಡಿ ಜಿಲ್ಲಾ ಉಪನಿರ್ದೆಶಕ ಪಿ.ಆಯ್.ಭಂಡಾರಿ ಹೇಳಿದರು.

  ಶುಕ್ರವಾರದಂದು ಪಟ್ಟಣದ ಸಿ.ಎಸ್.ತುಬಚಿ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಹುಕ್ಕೇರಿ ತಾಲೂಕಾ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಮತ್ತು ಎಸ್.ಕೆ ಪದವಿ ಪೂರ್ವ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 2025 ಮತ್ತು 26 ನೇ ಸಾಲಿನ ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಎರಡು ದಿನಗಳ ಕ್ರೀಡಾಕೂಟಕ್ಕೆ ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

     ಸಿ.ಎಸ್ ತುಬಚಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮತ್ತು ಹಿರಿಯ ನ್ಯಾಯವಾದಿಗಳಾದ ಅನೀಲ ಶೆಟ್ಟಿ ಮಾತನಾಡಿ ಕ್ರೀಡೆಗಳಲ್ಲಿ ಸೋಲು ಗೆಲುವಿಗೆ ಮಹತ್ವ ನೀಡದೆ ಕ್ರೀಡಾ ಮನೋಭಾವದಿಂದ ಸ್ಪರ್ಧಿಸಬೇಕು ಎಂದರು.ನಂತರ ಸ್ಪರ್ಧಾಗಳಿಗೆ ಬಿ.ಎಲ್ ನಾಯಿಕ ಪ್ರತಿಜ್ಞಾ ವಿಧಿ ಬೋಧಿಸಿದರು.

       ಸಿ.ಎಸ್. ತುಬಚಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪಿಂಟು ಶೆಟ್ಟಿ, ನಿರ್ದೇಶಕರಾದ ಓಂಕಾರ ಹೆದ್ದೂರಶೆಟ್ಟಿ, ಮಂಗಲಾ ಹಂದಿಗುಂದ, ಸಿ.ಆಯ್.ಗಂಧ, ಎಸ್.ಬಿ.ಬುರ್ಜಿ, ಹುಕ್ಕೇರಿ ಗೆಳೆಯರ ಬಳಗದ ಸದಸ್ಯರು, ಕ್ರೀಡಾ ಸಂಯೋಜಕರಾದ ಅಜೇಯ ಮೋನೆ, ಎಮ್.ಆಯ್.ಮಠಪತಿ, ಎಸ್ ಕೆ ಪದವಿ ಪೂರ್ವ ಮಹಾವಿದ್ಯಾಲಯ ಪ್ರಾಚಾರ್ಯ ಎಸ್.ಡಿ. ಬಶೆಟ್ಟಿ ಸ್ವಾಗತಿಸಿದರು. ಪಿ.ಎಸ್.ನೇರ್ಲೆಕರ ನಿರೂಪಿಸಿದರು. ಎಸ್.ಎನ್.ನಾಯಿಕ ವಂದಿಸಿದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept