ಬಾಲಕಿಯರ ಭವಿಷ್ಯಕ್ಕಾಗಿ ರಾಜೇಶ್ವರಿ ಟ್ರಸ್ಟ್ ನಿಂದ ನೆರವು: ಮಾಜಿ ಸಂಸದ ರಮೇಶ ಕತ್ತಿ

ತಾಲೂಕಿನ ಕಮತನೂರ ಗ್ರಾಮಸ್ಥರು ಮಾಜಿ ಸಂಸದ ರಮೇಶ ಕತ್ತಿ ಅವರನ್ನು ಸನ್ಮಾನಿಸಿದರು. ರಾಜೇಶ್ವರಿ ಗೋಠಿ, ಅಶೋಕ ಚೌಗಲಾ, ಕಲ್ಲಣ್ಣಾ ಚೌಗಲಾ, ಮಲ್ಲಪ್ಪಾ ಅಂಕಲಿ, ವಿರುಪಾಕ್ಷ ಚೌಗಲಾ ಇತರರಿದ್ದರು.

ಹುಕ್ಕೇರಿ ತಾಲೂಕಿನ ಕಮತನೂರ ಗ್ರಾಮದ ಬಾಲಕಿಯರು ಪರ ಊರಿಗೆ ಹೋಗಿ ಶಾಲೆ ಕಲಿಯಲು ಆಗದೇ ಶಾಲೆ ಬಿಡುತ್ತಿರುವ ಕಾರಣಕ್ಕಾಗಿ ಗ್ರಾಮಸ್ಥರು ಹಲವಾರು ಬಾರಿ ಪ್ರೌಢಶಾಲೆಗಾಗಿ ಆಗ್ರಹಿಸಿದ್ದರು.ಅದಕ್ಕಾಗಿ ಇದೀಗ ಅವರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ನಮ್ಮ ಕುಟುಂಬದ ರಾಜ ರಾಜೇಶ್ವರಿ ಟೃಸ್ಟನಿಂದ ಪ್ರೌಢಶಾಲಾ ಸಿಬ್ಬಂದಿಗಳ ವೇತನ ನೀಡುವುದಾಗಿ ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

      ಮಂಗಳವಾರದಂದು ಬೆಲ್ಲದ ಬಾಗೇವಾಡಿಯ ತಮ್ಮ ಗೃಹ ಕಚೇರಿಯಲ್ಲಿ ಆಗಮಿಸಿದ್ದ ಕಮತನೂರ ಗ್ರಾಮಸ್ಥರು ಮತ್ತು ಮುಖಂಡರ ಅಹವಾಲು ಆಲಿಸಿ ಮಾತನಾಡಿದರು. ಈಗಾಗಲೇ ಹಲವಾರು ಬಾರಿ ಗ್ರಾಮದಲ್ಲಿ ಪ್ರೌಢಶಾಲೆ ಪ್ರಾರಂಭಿಸಲು ವಿನಂತಿಸಿದ್ದರು.ಅವರ ಬೇಡಿಕೆಯನ್ನು ಶಾಸಕ ನಿಖಿಲ ಕತ್ತಿ ಮತ್ತು ನಾನು ಸರಕಾರಕ್ಕೆ ತಿಳಿಸಿದ್ದೇವೆ.ಆದರೆ ಸರಕಾರದಿಂದ ಇನ್ನೂವರೆಗೆ ಪ್ರೌಢಶಾಲೆ ಮಂಜೂರಾತಿ ದೊರಕಿಲ್ಲ.ಅದರಿಂದ ಗ್ರಾಮದ ಹೆಣ್ಣುಮಕ್ಕಳು ಕೇವಲ ೮ನೇ ತರಗತಿವರೆಗೆ ಕಲಿತು ನಂತರ ಶಾಲೆ ಬಿಟ್ಟು ಮನೆಯಲ್ಲಿ ಉಳಿಯುತ್ತಿರುವದನ್ನು ಗಮನಿಸಿದ್ದೇನೆ.ಅದಕ್ಕಾಗಿ ಆ ಮಕ್ಕಳ ಭವಿಷ್ಯ ಮತ್ತು ಗ್ರಾಮಸ್ಥರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ 9 ಮತ್ತು 10 ನೇ ತರಗತಿಗೆ ಕಲಿಸುವ ಶಿಕ್ಷಕರ ವೇತನವನ್ನು ನಾವೇ ಭರಿಸಲು ಮುಂದಾಗಿದ್ದೇವೆ ಎಂದರು.ಕಾರಣ ಗ್ರಾಮದ ಬಾಲಕಿಯರು ಇದರ ಪ್ರಯೋಜನ ಪಡೆಯಬೇಕೆಂದು ವಿನಂತಿಸಿದರು.

     ಕಮತನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಅಶೋಕ ಚೌಗಲಾ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷೆ ರಾಜೇಶ್ವರಿ ಗೋಠಿ ಅವರು ಮಾತನಾಡಿ ಗ್ರಾಮದಲ್ಲಿ 1ರಿಂದ 8 ನೇ ತರಗತಿವರೆಗೆ ಸರಕಾರಿ ಶಾಲೆ ಇದ್ದು, 9 ಮತ್ತು 10ನೇ ತರಗತಿ ಅಧ್ಯಯನ ಮಾಡಲು ಅವಕಾಶ ಇಲ್ಲದಾಗಿತ್ತು.ಅದಕ್ಕಾಗಿ ಶಾಸಕರು ಮತ್ತು ಮಾಜಿ ಸಂಸದರಿಗೆ ಮನವಿಸಿಕೊಂಡಿದ್ದೆವು.ರಾಜ್ಯ ಸರಕಾರ ಪ್ರೌಢಶಾಲೆ ಮಂಜೂರಾತಿ ನೀಡುವವರೆಗೆ ರಾಜ ರಾಜೇಶ್ವರಿ ಟೃಸ್ಟ ಮೂಲಕ ಶಾಲೆ ಪ್ರಾರಂಭಿಸಲು ನೆರವು ನೀಡಿದ ಮಾಜಿ ಸಂಸದ ರಮೇಶ ಕತ್ತಿ ಮತ್ತು ಶಾಸಕ ನಿಖಿಲ ಕತ್ತಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

   ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಲಕ್ಷ್ಮೀ ಬೋಬಡೆ, ಪಿಕೆಪಿಎಸ್ ಅಧ್ಯಕ್ಷ ಬಿ.ಜೆ.ಪಾಟೀಲ, ಟಿ.ಎ.ಪಿ.ಸಿ.ಎಂ ಮಾಜಿ ಅಧ್ಯಕ್ಷ ಕಲ್ಲಣ್ಣಾ ಚೌಗಲಾ, ಮುಖಂಡರಾದ ಸುರೇಶ ಬೋರಗಲ್ಲಿ, ವಿರುಪಾಕ್ಷ ಚೌಗಲಾ, ಮಲ್ಲಪ್ಪಾ ಅಂಕಲಿ, ಗುರಲಿಂಗ ಹಿರೇಕೋಡಿ, ಸವಿತಾ ಲಕ್ಕಾರ, ಸುಧಾರಾಣಿ ಕೇಂಬಳೆ ಮತ್ತಿತರರಿದ್ದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept