ಧಾರಾಕಾರ ಮಳೆಗೆ ಹುಕ್ಕೇರಿ ತಾಲೂಕಿನಲ್ಲಿ 21 ಮನೆಗಳ ಭಾಗಶಃ ಗೋಡೆ ಕುಸಿತ: ತಹಸೀಲ್ದಾರ ಬಲರಾಮ ಕಟ್ಟಿಮನಿ

ಹುಕ್ಕೇರಿ ತಹಸೀಲ್ದಾರ ಬಲರಾಮ ಕಟ್ಟಿಮನಿ ಅವರ ಭಾವಚಿತ್ರ

ಹುಕ್ಕೇರಿ: ಧಾರಾಕಾರ ಮಳೆಯಿಂದ ತಾಲೂಕಿನ ವಿವಿಧೆಡೆ 21 ಮನೆಗಳು ಕುಸಿದ ವರದಿಯಾಗಿದೆ. ಇದರಲ್ಲಿ 11 ಮನೆಗಳಿಗೆ ಪರಿಹಾರ ಧನ ನೀಡಲಾಗಿದೆ. ಉಳಿದ 10 ಮನೆಗಳಿಗೆ ಗ್ರಾಮಾಡಳಿತ ಅಧಿಕಾರಿಗಳಿಂದ ವರದಿ ಬಂದ ಬಳಿಕ ಪರಿಹಾರ ಧನ ನೀಡಲಾಗುವುದು ಎಂದು ತಹಸೀಲ್ದಾರ ಬಲರಾಮ ಕಟ್ಟಿಮನಿ ಹೇಳಿದರು.

    ಕಳೆದ ವಾರ ಸುರಿದ ಭಾರಿ ಮಳೆಯಿಂದ ತಾಲೂಕಿನ ಕಮತನೂರ ಮತ್ತು ಗುಡಸ ಗ್ರಾಮದಲ್ಲಿ 4 ಮನೆಗಳು, ಯರನಾಳ, ಬನ್ನಿಬಾಗಿಯಲ್ಲಿ 2 ಮನೆಗಳು ಹಾಗೂ ಬೆಲ್ಲದ ಬಾಗೇವಾಡಿ, ನಿರ್ವಾನಟ್ಟಿ, ಶಿರಹಟ್ಟಿ ಬಿ.ಕೆ, ಯಲ್ಲಾಪೂರ, ಚಿಲಭಾಂವಿ, ದಡ್ಡಿ, ಚಿಕ್ಕಾಲಗುಡ್ಡ, ಸೋಲಾಪೂರ, ಗೋಟೂರ ಗ್ರಾಮಗಳಲ್ಲಿ ತಲಾ ಒಂದು ಮನೆ ಭಾಗಶಃ ಗೋಡೆ ಬಿದ್ದು ಹಾನಿಯಾಗಿದೆ ಎಂದು ವರದಿ ಬಂದಿದೆ. ಇದರ ಜತೆಗೆ ಶಿರಹಟ್ಟಿ ಬಿ.ಕೆ ಯಲ್ಲಿ ಆಡುಮರಿ ಸಾವನ್ನಪ್ಪಿದ ವರದಿಯಾಗಿದೆ.

  ಈಗಾಗಲೇ ಇವುಗಳಲ್ಲಿ 11 ಮನೆಗಳಿಗೆ 3 ಲಕ್ಷ 23 ಸಾವಿರ ರೂ ಪರಿಹಾರ ಧನ ವಿತರಿಸಿದ್ದೇವೆ. ಉಳಿದ 10 ಮನೆಗಳಿಗೆ ಗ್ರಾಮಾಡಳಿತ ಅಧಿಕಾರಿಗಳಿಂದ ಸಂಪೂರ್ಣ ವರದಿ ತರಿಸಿಕೊಂಡು ಶೀಘ್ರದಲ್ಲಿ ನೀಡುವುದಾಗಿ ತಿಳಿಸಿದರು.

       ಗ್ರೇಡ್ 2 ತಹಸೀಲ್ದಾರ ಪ್ರಕಾಶ ಕಲ್ಲೋಳಿ, ಶಿರಸ್ತೆದಾರರಾದ ಎನ್.ಆರ್.ಪಾಟೀಲ, ಅನಿತಾ ಎಸ್ಯಾಗೋಳ, ಸಂತೋಷ ನಾಯ್ಕರ ಇತರರಿದ್ದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept