ಸ್ಥಳೀಯ ಮಹಾವೀರ ಮಲ್ಟಿಪರ್ಪಜ್ ಸಹಕಾರಿಯ ಆಂಜನೇಯ ನಗರ ಶಾಖೆ 15 ನೇ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ. ಮಹಾವೀರ ನಿಲಜಗಿ, ರೋಹಿತ ಚೌಗಲಾ, ಸಂಜಯ ನಿಲಜಗಿ, ಸಿ.ಪಿ.ಪಾಟೀಲ, ಭರಮಣ್ಣಾ ಜಾಧವ ಇತರರಿದ್ದರು.
ಹುಕ್ಕೇರಿ: ಹುಕ್ಕೇರಿ ಕೋರ್ಟ ವೃತ್ತದ ಬಳಿ ಬರುವ ಹೊಸ ಬಡಾವಣೆ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾರಂಭಿಸಲಾದ ಶ್ರೀ ಮಹಾವೀರ ಮಲ್ಟಿಪರ್ಪಜ್ ಸೌಹಾರ್ದ ಸಹಕಾರಿಯ ಆಂಜನೇಯ ನಗರ ಶಾಖೆ ಪ್ರಾರಂಭವಾಗಿ ಇಂದಿಗೆ 15 ವರ್ಷ ಆಯಿತು. ತನ್ನಿಮಿತ್ಯ ಶಾಖಾ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಮಹಾವೀರ ನಿಲಜಗಿ ತಿಳಿಸಿದರು.
ಗುರುವಾರದಂದು ಶಾಖೆ ಪೂಜಾ ಸಮಾರಂಭದಲ್ಲಿ ಮಾತನಾಡಿದರು. ಶಾಖೆಯು 22 ಕೋಟಿ ರೂ ಠೇವಣಿ ಸಂಗ್ರಹಿಸಿ, 18 ಕೋಟಿ 36 ಲಕ್ಷ ರೂ ಸಾಲ ವಿತರಿಸಿ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ (31-3-2025) 36 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದರು. ಶೀಘ್ರದಲ್ಲಿ ಈ ಶಾಖೆಗೆ ಸ್ವಂತ ಕಟ್ಟಡ ನಿರ್ಮಿಸುವ ಚಿಂತನೆ ಮಾಡಲಾಗಿದೆ ಎಂದರು. ಈ ಭಾಗದಲ್ಲಿ ನೌಕರರು ಹೆಚ್ಚಿನ ಪ್ರಮಾಣದಲ್ಲಿ ವಾಸವಾಗಿದ್ದು ಅವರ ಅನುಕೂಲಕ್ಕಾಗಿ ಸೇಪ್ ಲಾಕರ್ ವ್ಯವಸ್ಥೆ ಸಹ ಕಲ್ಪಿಸಿದ್ದೇವೆ ಎಂದರು.
ಸಹಕಾರಿ ಉಪಾಧ್ಯಕ್ಷ ರೋಹಿತ ಚೌಗಲಾ, ನಿರ್ದೇಶಕರಾದ ಸಂಜಯ ನಿಲಜಗಿ, ಅಶೋಕ ಪಾಟೀಲ, ಬಸವಣ್ಣಿ ಮುನ್ನೋಳಿ, ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ಪಾಟೀಲ, ಶಾಖಾ ಕಾರ್ಯದರ್ಶಿ ಕುಮಾರ ಕೊಲ್ಲಾಪೂರೆ, ಕವಿತಾ ಬಡಿಗೇರ, ಪ್ರಭಾಕರ ಬೋಕರೆ, ಗಣ್ಯರಾದ ಅಕ್ಷಯ ಕಬಾಡಗಿ, ಬಾಳು ಹೆರಗೆ, ಸಿ.ಪಿ.ಪಾಟೀಲ, ಭರಮಣ್ಣಾ ಜಾಧವ, ಸುಭಾಸ ಗಣೇಶವಾಡಿ, ಅಮರಸಿಂಗ ರಜಪೂತ, ಅಶೋಕ ಬಾಗೇವಾಡಿ ಮತ್ತಿತರರಿದ್ದರು.

ಉದ್ಯಮಿ ಪೃಥ್ವಿ ಕತ್ತಿ, ಸಹಕಾರಿ ಅಧ್ಯಕ್ಷ ಮಹಾವೀರ ನಿಲಜಗಿ, ಪುರಸಭೆ ಮಾಜಿ ಅಧ್ಯಕ್ಷ ಎ.ಕೆ.ಪಾಟೀಲ, ಗೌಸಅಜಂ ನಾಯಿಕವಾಡಿ, ರಾಜು ಮುನ್ನೋಳಿ, ಚನ್ನಪ್ಪ ಗಜಬರ, ಬಸವರಾಜ ಗಂಗಣ್ಣವರ ಇದ್ದರು





