ಸ್ಥಳೀಯ ಮಹಾವೀರ ಶಿಕ್ಷಣ ಸಂಸ್ಥೆಯ ಹೈಸ್ಕೂಲ ವಿದ್ಯಾರ್ಥಿ ಜಿಲ್ಲಾ ಮಟ್ಟಕ್ಕೆ ಆಯ್ಕೆ: ಮಹಾವೀರ ನಿಲಜಗಿ

ಸ್ಥಳೀಯ ಮಹಾವೀರ ಶಿಕ್ಷಣ ಸಂಸ್ಥೆ ಆವರಣದಲ್ಲಿ ತಾಲೂಕಾ ಮತ್ತು ವಲಯ ಮಟ್ಟದ ಪ್ರಶಸ್ತಿ ವಿಜೇತರನ್ನು ಅಧ್ಯಕ್ಷ ಮಹಾವೀರ ನಿಲಜಗಿ ಮತ್ತು ಉಪಾಧ್ಯಕ್ಷ ಪ್ರಜ್ವಲ ನಿಲಜಗಿ ಸತ್ಕರಿಸಿದರು. ಸಂಗಮೇಶ ಕರಹೊನ್ನವರ, ಈರಣ್ಣಾ ಹುಣಶ್ಯಾಳಿ ಇತರರಿದ್ದರು.

ಹುಕ್ಕೇರಿ: ಸ್ಥಳೀಯ ಮಹಾವೀರ ಶಿಕ್ಷಣ ಸಂಸ್ಥೆಯ ಹೈಸ್ಕೂಲ ವಿದ್ಯಾರ್ಥಿ ತಾಲೂಕಾ ಮಟ್ಟದ ಪ್ರೌಢಶಾಲೆ ವಿದ್ಯಾರ್ಥಿಗಳ ಕ್ರೀಡಾಕೂಟದ ಕುಸ್ತಿ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಸಂತಸ ತಂದಿದೆ ಎಂದು ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.

          ಶನಿವಾರದಂದು ಶಾಲಾ ಆವರಣದಲ್ಲಿ ಆಯ್ಕೆಯಾದವರನ್ನು ಸತ್ಕರಿಸಿ ಮಾತನಾಡಿದರು. ಇತ್ತೀಚಿಗೆ ನಡೆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ  ಕಾರ್ಯಾಲಯ  ಹುಕ್ಕೇರಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ತಾಲೂಕಾ ಮಟ್ಟದ ಪ್ರೌಢ ಶಾಲಾ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ 9 ನೇ ವರ್ಗದ ವಿದ್ಯಾರ್ಥಿ ಮಹೇಶ ಅಡಿವೆಪ್ಪ ಶೀಗಿಹೊಳಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮತ್ತು ಪ್ರಾಥಮಿಕ ವಿಭಾಗದ  ವಲಯ ಮಟ್ಟದ ಕ್ರೀಡಾಕೂಟದಲ್ಲಿ 7 ನೇ ತರಗತಿ ವಿದ್ಯಾರ್ಥಿ ಇಸ್ಮಾಯಿಲ್ ಮಾಲದಾರ 400 ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪಠ್ಯದ ಜೊತೆಗೆ ಕ್ರೀಡೆಗಳಿಗೂ ವಿದ್ಯಾರ್ಥಿಗಳು ಪ್ರಾಮುಖ್ಯತೆ ಕೊಡಬೇಕು. ಇದರಿಂದ ಬೌದ್ಧಿಕ ಮತ್ತು ಶಾರೀರಕ ಕ್ಷಮತೆ ಸಾಧ್ಯವೆಂದರು.

   ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ, ಉಪಾಧ್ಯಕ್ಷ ಪ್ರಜ್ವಲ ನಿಲಜಗಿ, ಮುಖ್ಯಾಧ್ಯಾಪಕ ಸಂಗಮೇಶ ಕರಹೊನ್ನವರ, ದೈಹಿಕ ಶಿಕ್ಷಕ ಈರಣ್ಣಾ ಹುಣಶ್ಯಾಳ ಹಾಗೂ ಸಿಬ್ಬಂದಿ ವರ್ಗದವರಿದ್ದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept