ಹಿರಿಯ ಆಹಾರ ಮತ್ತು ಸೇವಿಸುವ ಪದ್ಧತಿ ದೀರ್ಘಾಯುಷ್ಯದ ಗುಟ್ಟು: ನ್ಯಾಯಾಧೀಶ ರಾಜಣ್ಣ ಸಂಕನ್ನವರ

ಸ್ಥಳೀಯ ಅಡವಿಸಿದ್ದೇಶ್ವರ ಮಠದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಪೌಷ್ಟಿಕ ಆಹಾರ ದಿನಾಚರಣೆಯನ್ನು ಹಿರಿಯ ನ್ಯಾಯಾಧೀಶ ರಾಜಣ್ಣ ಸಂಕನ್ನವರ ಉದ್ಘಾಟಿಸಿದರು. ಕೆ.ಬಿ.ಕುರಬೇಟ, ಹೊಳೆಪ್ಪಾ ಎಚ್, ಮಹಾಂತೇಶ ಬಸ್ಸಾಪೂರ, ಪ್ರಕಾಶ ಕಲ್ಲೋಳಿ ಇತರರಿದ್ದರು.

ಹುಕ್ಕೇರಿ: ನಮ್ಮ ಹಿರಿಯರ ಆಹಾರ ಮತ್ತು ಸೇವಿಸುವ ಪದ್ಧತಿಯನ್ನು ನಾವು ಮತ್ತು ನಮ್ಮ ಭವಿಷ್ಯದ ಪೀಳಿಗೆಗೆ ಹೇಳಿಕೊಡಬೇಕಾಗಿದೆ.ಆಗಿ ಆಹಾರ ಗಟ್ಟಿತನ ಹೊಂದಿದ್ದರೆ, ಈಗಿನ ಆಹಾರ ರೋಗ ತರುವಂತಿವೆ ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶ ರಾಜಣ್ಣ ಸಂಕನ್ನವರ ಹೇಳಿದರು.

    ಸೋಮವಾರದಂದು ಸ್ಥಳೀಯ ಅಡವಿಸಿದ್ದೇಶ್ವರ ಮಠದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಪೌಷ್ಟಿಕ ಆಹಾರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಪೌಷ್ಟಿಕತೆ ಯಾವ ಆಹಾರದಲ್ಲಿದೆ ಎಂದು ನಮಗೆ ಗೊತ್ತಿಲ್ಲ. ಪಿಜ್ಜಾ, ಬರ್ಗರ್ ತಿನ್ನುವುದರಿಂದ ಅನಾರೋಗ್ಯ ಬರುತ್ತದೆ ಎಂದರು. ಹಸಿ ತರಕಾರಿ, ಹಣ್ಣು ಹಂಪಲ, ಹಾಲು ಸೇವನೆಯಿಂದ ಉತ್ತಮ ಆರೋಗ್ಯದ ಜತೆಗೆ ದೀರ್ಘಾಯುಷ್ಯಗಳಾಗಲು ಸಾಧ್ಯವೆಂದರು.

 ಸಿವ್ಹಿಲ್ ನ್ಯಾಯಾಧೀಶರಾದ ಆದಿತ್ಯ ಕಲಾಲ ಅವರು ಮಾತನಾಡಿ ಜನರ ಉತ್ತಮ ಆರೋಗ್ಯಕ್ಕಾಗಿ ಶಿಶು ಅಭಿವೃದ್ಧಿ ಇಲಾಖೆ ಆಯೋಜಿಸಿದ ಈ ಕಾರ್ಯ ಪ್ರಶಂಸನೀಯವೆಂದರು. ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಬಳಸಿದ ಆಹಾರ ಮಾರಾಟ ಹೆಚ್ಚಾಗಿದೆ. ಅದನ್ನು ಸೇವಿಸಿದ ಜನರ ಆರೋಗ್ಯ ಏನಾಗುತ್ತದೆ ಎಂಬುದನ್ನು ನಾವು ಅರಿಯಬೇಕು.ಕಾರಣ ಸಾವಯವ ಆಹಾರ ಸೇವನೆ ಮಾಡುವಂತೆ ತಿಳಿಸಿದರು.

  ವಕೀಲ ಭೀಮಸೇನ ಬಾಗಿ ಮತ್ತು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಮಲಾ ಹಿರೇಮಠ ಉಪನ್ಯಾಸ ನೀಡಿದರು. ಬಾಣಂತಿಯರ ಉಡಿ ತುಂಬುವ ಕಾರ್ಯಕ್ರಮ ಜರುಗಿತು.   ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೊಳೆಪ್ಪಾ ಎಚ್. ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ, ಉಪಾಧ್ಯಕ್ಷ ಬಿ.ಎಂ.ಜಿನರಾಳಿ, ಕಾರ್ಯದರ್ಶಿ ಎಸ್.ಜಿ.ನಧಾಪ, ಉಮೇಶ ದಡ್ಡಿಮನಿ, ಅನಿತಾ ಕುಲಕರ್ಣಿ, ಆಶಾ ಸಿಂಗಾಡಿ, ಏಗನ್ನವರ, ಗ್ರೇಡ್ ೨ ತಹಸೀಲ್ದಾರ ಪ್ರಕಾಶ ಕಲ್ಲೋಳಿ, ಸಿಪಿಐ ಮಹಾಂತೇಶ ಬಸ್ಸಾಪೂರ ಮತ್ತಿತರರಿದ್ದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept